90 ರುಪಾಯಿ ಗಡಿ ದಾಟಿದ ಪೆಟ್ರೋಲ್; ಇನ್ನು ಡೀಸೆಲ್ 80ರ ಮೇಲೆ
ಕಳೆದ ಹತ್ತು ದಿನಗಳಿಂದ ಪೆಟ್ರೋಲ್ ದರ ನಿರಂತರವಾಗಿ ಏರಿಕೆ ಕಾಣುತ್ತಿದ್ದು, ಹಲವು ನಗರಗಳಲ್ಲಿ ಭಾನುವಾರದಂದು ಲೀಟರ್ ಗೆ 90 ರುಪಾಯಿ ಗಡಿ ದಾಟಿದೆ. ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ತೆರಿಗೆ ದರ ಇರುವುದರಿಂದ ಪೆಟ್ರೋಲ್ ದರವು ಈಗಲೂ 80 ರುಪಾಯಿಗಿಂತ ಕೆಳಗೆ ಇದೆ. ಮಧ್ಯಪ್ರದೇಶದ ಭೋಪಾಲ್, ಇಂದೋರ್ ಹಾಗೂ ಮಹಾರಾಷ್ಟ್ರದ ಔರಾಂಗಬಾದ್ ನಲ್ಲಿ 90 ರುಪಾಯಿ ಗಡಿ ದಾಟಿದೆ.
ನವೆಂಬರ್ 30ನೇ ತಾರೀಕಿನಂದು ಭೋಪಾಲ್ ನಲ್ಲಿ ಪೆಟ್ರೋಲ್ ದರ ಲೀಟರ್ ಗೆ 90.05 ರುಪಾಯಿ ಇತ್ತು. ಇನ್ನು ಡೀಸೆಲ್ 80.10 ರು. ಇತ್ತು. ಇಂದೋರ್ ನಲ್ಲಿ ಪೆಟ್ರೋಲ್ ಲೀಟರ್ ಗೆ 90.16 ರು., ಔರಂಗಬಾದ್ ನಲ್ಲಿ 90.25 ರು. ಇತ್ತು. ಸದ್ಯಕ್ಕೆ ಪೆಟ್ರೋಲ್ ದರ ಅತ್ಯಂತ ಕಡಿಮೆ ಇರುವುದು ಚಂಡೀಗಢದಲ್ಲಿ. ಬೆಲೆ 79.76 ರು. ಇದೆ. ಆ ನಂತರ ವಡೋದರ 79.42, ಸೂರತ್ 79.76 ರು., ಅಹಮದಾಬಾದ್ ನಲ್ಲಿ 79.77 ರು. ಇದೆ.
FPIನಿಂದ ನವೆಂಬರ್ ನಲ್ಲಿ 62,591 ಕೋಟಿ ರು. ಗರಿಷ್ಠ ಹೂಡಿಕೆ
ಮಧ್ಯಪ್ರದೇಶದಲ್ಲಿ ಇತರ ರಾಜ್ಯಗಳಿಗಿಂತ ವ್ಯಾಟ್ ಪ್ರಮಾಣ ಹೆಚ್ಚಿದ್ದು, 39 ಪರ್ಸೆಂಟ್ ಇದೆ. ಆ ಕಾರಣಕ್ಕೆ ಉಳಿದೆಡೆಗಿಂತ ಮಧ್ಯಪ್ರದೇಶದಲ್ಲಿ ಬೆಲೆ ಹೆಚ್ಚಿದೆ. ಮಧ್ಯಪ್ರದೇಶದ ಕೆಲ ನಗರಗಳಲ್ಲಿ ಪೆಟ್ರೋಲ್ ದರ ಲೀಟರ್ ಗೆ 92 ರುಪಾಯಿ ದಾಟಿತ್ತು.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ, ಡಾಲರ್ ವಿರುದ್ಧ ರುಪಾಯಿ ಮೌಲ್ಯ ಹಾಗೂ ಸ್ಥಳೀಯ ತೆರಿಗೆಗಳು ಸೇರಿ ವಿವಿಧ ಅಂಶಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ನಿರ್ಧರಿಸುತ್ತವೆ.