For Quick Alerts
ALLOW NOTIFICATIONS  
For Daily Alerts

5 ಬೃಹತ್ ಕಂಪನಿಗಳ CEO ಜೊತೆ ಮೋದಿ ಮಾತುಕತೆ: ಬಂಡವಾಳಕ್ಕೆ ಆಹ್ವಾನ

|

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಮೂರು ದಿನಗಳ ಯುಎಸ್ ಪ್ರವಾಸದ ಮೊದಲ ದಿನವೇ ವಾಷಿಂಗ್ಟನ್ ಡಿಸಿಯಲ್ಲಿ ಐದು ದೊಡ್ಡ ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು (ಸಿಇಒ) ಭೇಟಿಯಾದರು.

 

ಕ್ವಾಲ್ಕಾಮ್ ನ ಕ್ರಿಸ್ಟಿಯಾನೋ ಇ. ಅಮೋನ್, ಅಡೋಬ್ ನ ಶಂತನು ನಾರಾಯಣ್, ಫಸ್ಟ್ ಸೋಲಾರ್ ನ ಮಾರ್ಕ್ ವಿಡ್ಮಾರ್, ಜನರಲ್ ಅಟೊಮಿಕ್ಸ್ ನ ವಿವೇಕ್ ಲಾಲ್ ಮತ್ತು ಬ್ಲ್ಯಾಕ್ ಸ್ಟೋನ್ ನ ಸ್ಟೀಫನ್ ಎ. ಶ್ವಾರ್ಜ್ ಮನ್ ಅವರು ಪಿಎಂ ಮೋದಿಯನ್ನು ಭೇಟಿ ಮಾಡಿದ ಕಂಪನಿಗಳ ಸಿಇಒಗಳು.

ಪ್ರಧಾನಿ ಮೋದಿ ಅವರೆಲ್ಲರೊಂದಿಗೆ ಪ್ರತ್ಯೇಕವಾದ ಸಭೆಯನ್ನ ನಡೆಸಿದ್ದಾರೆ. ಅಡೋಬ್ ವಿಶ್ವದ ಅತಿದೊಡ್ಡ ಸಾಫ್ಟ್‌ವೇರ್ ಕಂಪನಿಗಳಲ್ಲಿ ಒಂದಾಗಿದ್ದು, ಆದರೆ ಕ್ವಾಲ್ಕಾಮ್ 3 ಜಿ ಮತ್ತು 4 ಜಿ ತಂತ್ರಜ್ಞಾನದ ಪ್ರಮುಖ ಕಂಪನಿ. ಜನರಲ್ ಅಟೊಮಿಕ್ಸ್ ಒಂದು ಶಕ್ತಿ ಮತ್ತು ರಕ್ಷಣಾ ಕಂಪನಿಯಾಗಿದ್ದು, ಫಸ್ಟ್‌ ಸೋಲಾರ್ ಸೌರಶಕ್ತಿ ಪರಿಹಾರಗಳನ್ನು ಒದಗಿಸುತ್ತದೆ. ಬ್ಲ್ಯಾಕ್‌ಸ್ಟೋನ್ ಅನ್ನು ವಿಶ್ವದ ಅತಿದೊಡ್ಡ ಹೂಡಿಕೆ ಕಂಪನಿ ಎಂದು ಪರಿಗಣಿಸಲಾಗಿದೆ.

ಭವಿಷ್ಯದ ಹೂಡಿಕೆ ಯೋಜನೆ

ಭವಿಷ್ಯದ ಹೂಡಿಕೆ ಯೋಜನೆ

ಅಡೋಬ್ ಸಿಇಒ ಶಂತನು ನಾರಾಯಣ್ ಮತ್ತು ಪಿಎಂ ಮೋದಿ ಅವರು, ಅಡೋಬ್ ಭಾರತದಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಮತ್ತು ಭವಿಷ್ಯದ ಹೂಡಿಕೆ ಯೋಜನೆಗಳ ಕುರಿತು ಚರ್ಚಿಸಿದರು. ಆರೋಗ್ಯ, ಶಿಕ್ಷಣ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಡಿಜಿಟಲ್ ಇಂಡಿಯಾದ ಪ್ರಮುಖ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳುವ ವಿಚಾರಗಳ ಬಗ್ಗೆಯೂ ಚರ್ಚಿಸಲಾಯಿತು. ಕೋವಿಡ್ ವಿರುದ್ಧ ಹೋರಾಡಲು ಮತ್ತು ವಿಶೇಷವಾಗಿ ಕ್ಷಿಪ್ರ ಲಸಿಕೆ ಹಾಕುವಲ್ಲಿ ಭಾರತದ ಪ್ರಯತ್ನಗಳನ್ನು ಶಾಂತನು ಶ್ಲಾಘಿಸಿದರು. ಅವರು ಭಾರತದ ಪ್ರತಿ ಮಗುವಿಗೆ ವಿಡಿಯೋ, ಅನಿಮೇಷನ್ ತರಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ಪಿಎಂ ಮೋದಿ ಅವರೊಂದಿಗೆ ಚರ್ಚಿಸಿದ ಇಬ್ಬರು ಸಿಇಒಗಳು ಭಾರತೀಯ ಅಮೆರಿಕನ್ನರಾಗಿದ್ದಾರೆ. ಇವರಲ್ಲಿ ಅಡೋಬ್‌ನ ಶಂತನು ನಾರಾಯಣ್ ಮತ್ತು ಜನರಲ್ ಅಟೊಮಿಕ್ಸ್‌ನ ವಿವೇಕ್ ಲಾಲ್ ಸೇರಿದ್ದಾರೆ.

ಕ್ವಾಲ್ಕಾಮ್ 5 ಜಿ ಯಲ್ಲಿ ಕೆಲಸ ಮಾಡಲು ಇಚ್ಛೆ

ಕ್ವಾಲ್ಕಾಮ್ 5 ಜಿ ಯಲ್ಲಿ ಕೆಲಸ ಮಾಡಲು ಇಚ್ಛೆ

ಭಾರತದ ಟೆಲಿಕಾಂ ಮತ್ತು ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಹೂಡಿಕೆ ಅವಕಾಶಗಳ ಕುರಿತು ಕ್ರಿಸ್ಟಿಯಾನೋ ಅಮೋನ್ ಅವರೊಂದಿಗಿನ ಪ್ರಧಾನಿ ಮೋದಿಯವರ ಸಭೆಯಲ್ಲಿ ಚರ್ಚಿಸಲಾಯಿತು. ಇದು ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ESDM) ಗಾಗಿ ಇತ್ತೀಚೆಗೆ ಪ್ರಾರಂಭಿಸಲಾದ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್ (PLI) ಹಾಗೂ ಸೆಮಿಕಂಡಕ್ಟರ್ ಪೂರೈಕೆ ಸರಪಳಿಗಳ ಅಭಿವೃದ್ಧಿಯನ್ನು ಒಳಗೊಂಡಿದೆ. ಭಾರತದಲ್ಲಿ ಸ್ಥಳೀಯ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ರಚಿಸುವ ಕಾರ್ಯತಂತ್ರಗಳ ಬಗ್ಗೆಯೂ ಚರ್ಚಿಸಲಾಯಿತು. ಅವರು ಮಾಡಿದ ಪ್ರಸ್ತಾಪಗಳ ಮೇಲೆ ಭಾರತವು ಸಕ್ರಿಯವಾಗಿ ಕೆಲಸ ಮಾಡುತ್ತದೆ ಎಂದು ಕ್ವಾಲ್ಕಾಮ್‌ಗೆ ಪ್ರಧಾನಿ ಭರವಸೆ ನೀಡಿದರು.

ಸೇನಾ ಡ್ರೋನ್ ತಯಾರಿಕೆ
 

ಸೇನಾ ಡ್ರೋನ್ ತಯಾರಿಕೆ

ಭಾರತವು ತನ್ನ ಸಶಸ್ತ್ರ ಪಡೆಗಳ ಎಲ್ಲಾ ಮೂರು ಶಾಖೆಗಳಿಗೆ ಉತ್ತಮ ಸಂಖ್ಯೆಯ ಡ್ರೋನ್‌ಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿದೆ. ಭಾರತವು ಜನರಲ್ ಅಟೊಮಿಕ್ಸ್ ನಿಂದ ಕೆಲವು ಡ್ರೋನ್ ಗಳನ್ನು ಬಾಡಿಗೆಗೆ ಪಡೆದಿದೆ. ವಿಶ್ವಪ್ರಸಿದ್ಧ ವಿಜ್ಞಾನಿ ವಿವೇಕ್ ಲಾಲ್ ಕಳೆದ ವರ್ಷದ ಜೂನ್ 1 ರಿಂದ ಜಾರಿಗೆ ಬರುವಂತೆ ಸಂಸ್ಥೆಯ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಪ್ರಧಾನಿ ಮೋದಿಯವರು ಸೇನಾ ಡ್ರೋನ್ ತಯಾರಿಕೆ ಬಗ್ಗೆ ವಿವೇಕ್ ಲಾಕ್ ಜೊತೆ ಚರ್ಚಿಸಿದ್ದಾರೆ.

ರಿಯಲ್ ಎಸ್ಟೇಟ್‌

ರಿಯಲ್ ಎಸ್ಟೇಟ್‌

ಇನ್ನು ಭಾರತದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆಗೆ ಇರುವ ಅವಕಾಶದ ರಿಯಲ್ ಎಸ್ಟೇಟ್ ಕಂಪನಿ ಬ್ಲ್ಯಾಕ್‌ಸ್ಟೋನ್‌ನ ಸಿಇಒ ಜೊತೆಗೆ ಮೋದಿ ಮಾತುಕತೆ ನಡೆಸಿದ್ದಾರೆ. ಈ ಐದು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಇರುವ ಅವಕಾಶದ ಬಗ್ಗೆ ಮೋದಿ ಅವರು ವಿವರಿಸಿದ್ದು, ಬಂಡವಾಳವನ್ನು ಆಹ್ವಾನಿಸಿದ್ದಾರೆ.

English summary

PM Narendra Modi Meets 5 Top CEOs To Highlight Opportunities In India

Prime Minister Narendra Modi has said he would highlight economic opportunities in India during his meetings with CEOs On Thursday
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X