For Quick Alerts
ALLOW NOTIFICATIONS  
For Daily Alerts

ಏಸ್‌ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾರನ್ನ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ

|

ಭಾರತದ ವಾರೆನ್ ಬಫೆಟ್ ಎಂದೇ ಖ್ಯಾತಿ ಪಡೆದಿರುವ, ಖ್ಯಾತ ಹೂಡಿಕೆದಾರ ರಾಕೇಶ್‌ ಜುಂಜುನ್‌ವಾಲಾರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದಾರೆ. ಹೊಸದಿಲ್ಲಿಯಲ್ಲಿ ಬಿಲಿಯನೇರ್‌ ರಾಕೇಶ್ ಜುಂಜುನ್‌ವಾಲಾರನ್ನು ಭೇಟಿಯಾದ ಪ್ರಧಾನಿ ಈ ಕುರಿತಾಗಿ ಟ್ವೀಟ್ ಮಾಡಿದ್ದಾರೆ

 

ಜುಂಜುನ್‌ವಾಲಾರನ್ನು ಉತ್ಸಾಹಭರಿತ", "ಒಳನೋಟವುಳ್ಳ" ಮತ್ತು "ಭಾರತದ ಆರ್ಥಿಕತೆ ಬಗ್ಗೆ ಬಹಳ ಬುಲ್ಲಿಶ್" ಎಂದು ಪ್ರಧಾನಿ ನರೇಂದ್ರ ಮೋದಿ ಕರೆದಿದ್ದಾರೆ. ಜುಂಜುನ್‌ವಾಲಾ ಈ ಹಿಂದೆ ನರೇಂದ್ರ ಮೋದಿ ಸರ್ಕಾರದ ನೀತಿಗಳನ್ನು ಸಮರ್ಥಿಸಿಕೊಂಡಿದ್ದರು ಮತ್ತು ಅವರು ಪ್ರಧಾನ ಮಂತ್ರಿಯ ಅಭಿಮಾನಿಯಾಗಿದ್ದಾರೆ.

ಭಾರತದ ಷೇರುಪೇಟೆಯು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಖ್ಯಾತ ಹೂಡಿಕೆದಾರ ರಾಕೇಶ್ ಜುಂಜುಲ್‌ವಾಲಾರನ್ನು ಭೇಟಿಯಾಗಿದ್ದಾರೆ. ಇತ್ತೀಚೆಗಷ್ಟೇ ಜುಂಜುಲ್‌ವಾಲಾರವು ಸಾಂಸ್ಥಿಕ ಹಾಗೂ ದೇಶೀಯ ಹೂಡಿಕೆದಾರರು ಅಮೆರಿಕಾದಲ್ಲಿ ಹೆಚ್ಚಿನ ರಿಟರ್ನ್ಸ್‌ಗಾಗಿ ಹೂಡಿಕೆ ಮಾಡುವುದಕ್ಕಿಂತ ದೇಶೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ರೆ ದೇಶದ ಆರ್ಥಿಕತೆಗೆ ಹೆಚ್ಚಿನ ಲಾಭವಾಗುತ್ತದೆ ಎಂದಿದ್ದರು. ನಿಫ್ಟಿ ಮಾರ್ಚ್‌ 2020ರಲ್ಲಿ ಕುಸಿತವಾದ ಪ್ರಮಾಣಕ್ಕಿಂತ ಶೇಕಡಾ 140ರಷ್ಟು ಏರಿಕೆ ಕಂಡಿದೆ.

ಏಸ್‌ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾರನ್ನ ಭೇಟಿಯಾದ ಮೋದಿ

ಜುಂಜುನ್‌ವಾಲಾ ಭಾರತೀಯ ಆರ್ಥಿಕತೆ ಮತ್ತು ಷೇರು ಮಾರುಕಟ್ಟೆಯ ಮೇಲೆ ನಿರಂತರ ಪ್ರಬುದ್ದತೆಯನ್ನು ಪ್ರದರ್ಶಿಸಿದ್ದಾರೆ, ಏಕೆಂದರೆ ಅವರ ವೈಯಕ್ತಿಕ ಸಂಪತ್ತು ದೇಶೀಯ ಷೇರು ಮಾರುಕಟ್ಟೆಯೊಂದಿಗೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

ಮೋದಿ ನಿಲುವಿನ ಕುರಿತು ಟೀಕೆ
ಷೇರುಪೇಟೆಯ ಹೂಡಿಕೆದಾರನ ಎದುರು ಪ್ರಧಾನಿ ನರೇಂದ್ರ ಮೋದಿ ಕೈಕಟ್ಟಿ ನಿಂತಿರುವುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಪ್ರಧಾನಿಯಾದವರು ಈ ರೀತಿಯಾಗಿ ನಿಲ್ಲುವುದು ಸರಿಯೇ? ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್‌ಗೆ ವಿಶ್ವದ ಅಗ್ರಗಣ್ಯ ನಾಯಕರು ಗೌರವ ನೀಡುತ್ತಿದ್ರು ಎಂದು ಟೀಕಿಸಿದ್ದಾರೆ.

English summary

PM Narendra Modi Meets Billionaire Investor Rakesh Jhunjhunwala

Prime Minister Narendra Modi met well-known stock market investor Rakesh Jhunjhunwala, noting that he is very bullish about the Indian economy.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X