For Quick Alerts
ALLOW NOTIFICATIONS  
For Daily Alerts

ಅಮೆರಿಕ ಡಾಲರ್ ವಿರುದ್ಧ 35 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದ ಪೌಂಡ್ಸ್

|

ಅಮೆರಿಕದ ಡಾಲರ್ ವಿರುದ್ಧ ಯು.ಕೆ. ಪೌಂಡ್ 35 ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಮುಟ್ಟಿದೆ. ಯುನೈಟೆಡ್ ಕಿಂಗ್ ಡಮ್ ನ 1 ಪೌಂಡ್ ಸ್ಟರ್ಲಿಂಗ್ ಗೆ ಯು.ಎಸ್. ಡಾಲರ್ 1.18 ಆಗಿದೆ.

 

ಕೊರೊನಾ ವೈರಾಣು ವ್ಯಾಪಿಸುತ್ತಿರುವ ಪರಿಣಾಮ ಇನ್ನೂ ಯಾವ್ಯಾವ ದೇಶಗಳು ಎಂಥ ಆರ್ಥಿಕ ಸವಾಲು ಎದುರಿಸಬೇಕೋ? ಯು.ಕೆ. ಸರ್ಕಾರದಿಂದ ಕೊರೊನಾ ವೈರಾಣು ವಿರುದ್ಧ ತೆಗೆದುಕೊಂಡ ಕ್ರಮಗಳ ಬಗ್ಗೆ ಹೂಡಿಕೆದಾರರು ತೃಪ್ತರಾದಂತೆ ಇಲ್ಲ. ಏಕೆಂದರೆ ಯುರೋಪ್ ನಾದ್ಯಂತ ತಕ್ಷಣವೇ ವ್ಯಾಪಾರ- ವಹಿವಾಟುಗಳಿಗೆ ನಿರ್ಬಂಧ ಹೇರಲಾಗಿದೆ.

ಡಾಲರ್ ಮೇಲೆ ಹೂಡಿಕೆ ಮಾಡುವುದು ಸುರಕ್ಷಿತ ಎಂಬ ಭಾವನೆ, ಜಾಗತಿಕ ಮಟ್ಟದಲ್ಲಿ ಆಸ್ತಿಗಳ ಮಾರಾಟ ಹಾಗೂ ನಗದೀಕರಣ ಮಾಡಿಕೊಳ್ಳುತ್ತಿರುವುದು ಇತ್ಯಾದಿ ಅಂಶಗಳು ಸೇರಿ ಪೌಂಡ್ ಮೌಲ್ಯವನ್ನು ತಗ್ಗಿಸಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಸತತವಾಗಿ ಏಳನೇ ಸೆಷನ್ ಅಮೆರಿಕದ ಡಾಲರ್ ವಿರುದ್ಧ ಪೌಂಡ್ ಮೌಲ್ಯ ಕುಸಿದಿದೆ.

ಅಮೆರಿಕ ಡಾಲರ್ ವಿರುದ್ಧ 35  ವರ್ಷಗಳ ಕನಿಷ್ಠ ಮಟ್ಟಕ್ಕೆ ಪೌಂಡ್ಸ್

2016ರಲ್ಲಿ ಬ್ರೆಕ್ಸಿಟ್ ಮತದಾನ ಆಯಿತಲ್ಲಾ ಅದಕ್ಕಿಂತ ದೊಡ್ಡ ಮಟ್ಟದಲ್ಲಿ ಕುಸಿತವಾಗಿದ್ದು, 1.9% ಅಂದರೆ $ 1.1828ಕ್ಕೆ ಇಳಿಕೆಯಾಗಿದೆ. 1985ನೇ ಇಸವಿಯಲ್ಲಿ ಡಾಲರ್ ವಿರುದ್ಧ ಪೌಂಡ್ ಮೌಲ್ಯ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು. ವಿಶ್ವದ ಶ್ರೀಮಂತ ರಾಷ್ಟ್ರಗಳೆಲ್ಲ ಒಪ್ಪಂದಕ್ಕೆ ಸಹಿ ಹಾಕಿ, ಯು.ಎಸ್. ಅನ್ನು ಆರ್ಥಿಕ ಕುಸಿತದಿಂದ ಹೊರತರಲು ಮಾಡಿದ ಪ್ರಯತ್ನದ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಕುಸಿತವಾಗಿತ್ತು.

English summary

Pounds Value Against US Dollar Touched 35 Year Low

UK Pounds value against US Dollar touched 35 year low on Wednesday. Here is the details.
Story first published: Wednesday, March 18, 2020, 19:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X