For Quick Alerts
ALLOW NOTIFICATIONS  
For Daily Alerts

ತಿಂಗಳಿಗೆ 20ಕ್ಕಿಂತ ಹೆಚ್ಚು UPI ವ್ಯವಹಾರ ನಡೆಸಿದರೆ ಖಾಸಗಿ ಬ್ಯಾಂಕ್ ಗಳಿಂದ ಶುಲ್ಕ

|

ನೀವು ಯುಪಿಐ ಪೇಮೆಂಟ್ ಬಳಸುತ್ತಿದ್ದೀರಾ? ಹಾಗಿದ್ದಲ್ಲಿ ಈ ಸುದ್ದಿ ನಿಮ್ಮ ಗಮನಕ್ಕೆ ಬಂದಿದೆಯಾ? ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್) ಮೂಲಕ ಮಾಡಿದ ಪರ್ಸನ್ ಟು ಪರ್ಸನ್ (P2P) ಪಾವತಿಗೆ ದೇಶದ ದೊಡ್ಡ ಖಾಸಗಿ ಬ್ಯಾಂಕ್ ಗಳು ಶುಲ್ಕ ಹಾಕುತ್ತಿವೆ ಎಂದು ವರದಿ ಆಗಿದೆ. ಒಂದು ತಿಂಗಳಲ್ಲಿ 20 ವ್ಯವಹಾರಗಳು ದಾಟಿದಲ್ಲಿ 2.5 ರುಪಾಯಿಯಿಂದ 5 ರುಪಾಯಿ ತನಕ ಶುಲ್ಕ ಹಾಕಲಾಗುತ್ತಿದೆಯಂತೆ.

 

ಬೇಕಾಬಿಟ್ಟಿ ವ್ಯವಹಾರಗಳನ್ನು ಮಾಡುತ್ತಾಮ್ ವ್ಯವಸ್ಥೆ ಮೇಲೆ ಹೊರೆ ಹಾಕುವವರಿಗೆ ಕಡಿವಾಣ ಬೀಳಬೇಕು ಎಂಬ ಕಾರಣಕ್ಕೆ ಈ ಶುಲ್ಕ ಹಾಕಲಾಗುತ್ತಿದೆ ಎಂದು ಬ್ಯಾಂಕ್ ಗಳು ಹೇಳಿವೆ. ಆದರೆ, ಸರ್ಕಾರದಿಂದ ಯುಪಿಐ ಉಚಿತವಾಗಿ ಒದಗಿಸಲಾಗುತ್ತಿದೆ. 1000 ರುಪಾಯಿ ಅಥವಾ ಅದರೊಳಗಿನ ಮೊತ್ತಕ್ಕೆ 2.5 ರುಪಾಯಿ ಮತ್ತು 1000 ರುಪಾಯಿ ಮೇಲ್ಪಟ್ಟ ಮೊತ್ತಕ್ಕೆ 5 ರುಪಾಯಿ ಶುಲ್ಕ ಇದೆ. ಜಿಎಸ್ ಟಿ ಪ್ರತ್ಯೇಕವಾಗಿ ಹಾಕಲಾಗುತ್ತದೆ.

ಜೂನ್‌ನಲ್ಲಿ 2.62 ಲಕ್ಷ ಕೋಟಿ ರುಪಾಯಿಗೆ ಮುಟ್ಟಿದ UPI ಪಾವತಿಗಳು

ಪಾವತಿ ಪುಕ್ಕಟೆ, ವರ್ಗಾವಣೆಗೆ ಶುಲ್ಕ ವಿಧಿಸುವ ಮೂಲಕ ಕಾನೂನನ್ನು ತಮ್ಮಿಷ್ಟಕ್ಕೆ ತಕ್ಕಂತೆ ಬ್ಯಾಂಕ್ ಗಳು ವ್ಯಾಖ್ಯಾನಿಸುತ್ತಿವೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಬ್ಯಾಂಕಿಂಗ್ ವಲಯದ ಇತರ ಬ್ಯಾಂಕ್ ಗಳನ್ನು ದಾರಿ ತಪ್ಪಿಸಿದಂತಾಗುತ್ತದೆ ಎಂದು ವರದಿಯೊಂದರಲ್ಲಿ ಹೇಳಲಾಗಿದೆ.

ತಿಂಗಳಿಗೆ 20ಕ್ಕಿಂತ ಹೆಚ್ಚು UPI ವ್ಯವಹಾರಕ್ಕೆ ಖಾಸಗಿ ಬ್ಯಾಂಕ್ ಶುಲ್ಕ

ಇಂಥ ವ್ಯವಹಾರಗಳ ನಿರ್ವಹಣೆಗೆ ಎಲ್ಲಿಯ ತನಕ ಬ್ಯಾಂಕ್ ಗಳಿಗೆ ವೆಚ್ಚ ಬರುವುದಿಲ್ಲವೋ ಅಲ್ಲಿಯ ತನಕ ಅದನ್ನು ಗ್ರಾಹಕರ ಮೇಲೆ ಹಾಕಬಾರದು ಎಂಬುದು ವಾದವಾಗಿದೆ. ಬ್ಯಾಂಕ್ ಗಳು ನಗದು ವ್ಯವಹಾರ ನಡೆಸಲು ತಗುಲುವ ವೆಚ್ಚಕ್ಕಿಂತ ಯುಪಿಐ ಸೇವೆಗೆ ಆಗುವ ಖರ್ಚು ಸಿಕ್ಕಾಪಟ್ಟೆ ಕಡಿಮೆ ಎಂದು ಹೇಳಳಾಗಿದೆ.

ವರದಿಗಳ ಪ್ರಕಾರ, ನಗದಿನ ನಂತರ ಅತಿ ಹೆಚ್ಚು ಬಳಕೆ ಮಾಡುವ ಪಾವತಿ ಮಾಡುವುದು ಯುಪಿಐ ಮೂಲಕ. ಲಾಕ್ ಡೌನ್ ಅವಧಿಯಲ್ಲಿ ಒಂದು ತಿಂಗಳಿಂದ ಮತ್ತೊಂದು ತಿಂಗಳಿಗೆ 8%ನಂತೆ ಬಳಕೆ ಹೆಚ್ಚುತ್ತಲೇ ಇದೆ.

English summary

Private Banks Charging Fee On More Than 20 UPI Payments In A Month

If UPI payments exceeds 20 transactions private banks charging fee, report says.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X