For Quick Alerts
ALLOW NOTIFICATIONS  
For Daily Alerts

ನ್ಯಾನೋ ಮೇಲೆ ಕನಸಿನ ಗೋಪುರ ಕಟ್ಟಿಕೊಂಡಿದ್ದ ರತನ್ ಟಾಟಾ ಮಹತ್ವಾಕಾಂಕ್ಷೆ ಛಿದ್ರಛಿದ್ರ

|

ಜನವರಿ 10, 2008 ಇಡೀ ಭಾರತದ ಆಟೋಮೊಬೈಲ್ ಜಗತ್ತು ಒಂದು ಕ್ಷಣ ಆವಕ್ಕಾದ ದಿನ. ನಮಗೆಲ್ಲಾ ಕಾರು ಖರೀದಿಸುವ ಭಾಗ್ಯ ಎಲ್ಲಿಂದ ಬರಬೇಕು ಎಂದು ವ್ಯಥೆ ಪಡುತ್ತಿದ್ದ ಮಧ್ಯಮ ವರ್ಗದ ಜನತೆಗೆ, ದೆಹಲಿಯಲ್ಲಿ ಟಾಟಾ ಮೋಟರ್ಸ್ ಮಾಲಕ ರತನ್ ಟಾಟಾ ನಡೆಸುತ್ತಿದ್ದ ಪತ್ರಿಕಾಗೋಷ್ಠಿ ಹೊಸ ಆಶಾಕಿರಣವಾಗಿ ಮೂಡಿತ್ತು.

ಅಂದು, ಜಗತ್ತಿನಲ್ಲೇ ಅತ್ಯಂತ ಕಡಿಮೆ ಬೆಲೆಯ ನ್ಯಾನೋ ಕಾರು ಅನ್ನು ರತನ್ ಟಾಟಾ ಅನಾವರಣಗೊಳಿಸುವ ಮೂಲಕ ,ಕಾರು ಉದ್ದಿಮೆಯಲ್ಲಿ ಹೊಸ ಸಂಚಲನವನ್ನು ಉಂಟುಮಾಡಿದರು. ಅಂದಿನ ಪತ್ರಿಕಾಗೋಷ್ಠಿಯಲ್ಲಿ, ಯಾವ ಕಾರಣಕ್ಕಾಗಿ ಮಧ್ಯಮ ವರ್ಗದವರಿಗೆ ಕೈಗೆಟಕುವ ಕಾರನ್ನು ಹೊರತರುವ ಕನಸು ಕಾಣಲಾರಂಭಿಸಿದೆ ಎನ್ನುವುದಕ್ಕೆ ರತನ್ ಟಾಟಾ ನೀಡಿದ ಸ್ಪಷ್ಟನೆ, ಇನ್ನಷ್ಟು ಮನಮುಟ್ಟುವಂತಿತ್ತು.

ಕಳೆದ ವರ್ಷ ದೇಶದಲ್ಲಿ ಮಾರಾಟವಾಗಿದ್ದು ಒಂದೇ ಒಂದು ನ್ಯಾನೋ ಕಾರು

 

"ಸ್ಕೂಟರ್ ಅಥವಾ ಬೈಕ್‌ನಲ್ಲಿ ನಾಲ್ಕು ಜನರ ಪುಟ್ಟ ಸಂಸಾರವಿಡೀ ಓಡಾಡುವ ಅಪಾಯಕಾರಿ ದೃಶ್ಯವನ್ನು ಕಂಡ ದಿನವೇ, ನನ್ನ ಮನಸ್ಸಿನಲ್ಲಿ ನ್ಯಾನೋ ಕಾರಿನ ಕಲ್ಪನೆ ಮೂಡಿತು. ನಾಲ್ಕು ವರ್ಷಗಳ ಸತತ ಚಿಂತನೆ, ಶ್ರಮ, ಪರಿಕಲ್ಪನೆಗಳ ಸಾಕಾರವೇ ನ್ಯಾನೋ ಕಾರು" ಎಂದು ರತನ್ ಟಾಟಾ ಹೇಳಿದ್ದರು.

ಸೈರಸ್ ಮಿಸ್ತ್ರಿ ಮುಂದುವರಿಕೆಗೆ ಸುಪ್ರೀಂ ತಡೆ

ಒಂದು ಲಕ್ಷದ ಕಾರು ಎಂದೇ ಹೆಸರು ಪಡೆದ ನ್ಯಾನೋ ಕಾರಿಗೆ ಸಿಕ್ಕಂತಹ ಪಬ್ಲಿಸಿಟಿ ಅಂತಿಂದಲ್ಲ. ಮೊದಮೊದಲು ಅಡ್ವಾನ್ಸ್ ಬುಕ್ಕಿಂಗ್ ಮಾಡಿ, ತಿಂಗಳಾನುಗಟ್ಟಲೆ ಕಾಯಬೇಕಾಗಿದ್ದಂತಹ ಈ ಕಾರಿಗೆ, ಬರಬರುತ್ತಾ ಡಿಮಾಂಡ್ ಕಮ್ಮಿಯಾಗಲು ಆರಂಭವಾಯಿತು. ನ್ಯಾನೋ ಪತನಕ್ಕೆ ಕಾರಣವಾದ ಅಂಶಗಳು, ಮುಂದೆ ಓದಿ..

ನ್ಯಾನೋ ಕಾರಿನ ಎಕ್ಸ್ ಶೋರೂಂ ಬೆಲೆ ಒಂದು ಲಕ್ಷ

ನ್ಯಾನೋ ಕಾರಿನ ಎಕ್ಸ್ ಶೋರೂಂ ಬೆಲೆ ಒಂದು ಲಕ್ಷ

ನ್ಯಾನೋ ಕಾರಿನ ಎಕ್ಸ್ ಶೋರೂಂ ಬೆಲೆ ಒಂದು ಲಕ್ಷ. ಮೂರು ವಿಭಿನ್ನ ಶ್ರೇಣಿಯಲ್ಲಿ ಹೊರಬಂದ ಈ ಕಾರು, ಸುಮಾರು ಇಪ್ಪತ್ತು ಕಿ.ಮೀ. ಮೈಲೇಜ್ ನೀಡುವುದೆಂದು ಟಾಟಾ ಸಂಸ್ಥೆ ಹೇಳಿಕೊಂಡಿತ್ತು. ವಾರ್ಷಿಕ 2.5ಲಕ್ಷ ಉತ್ಪಾದನೆ ಮಾಡುವುದಾಗಿ ಹೇಳಿಕೊಂಡಿದ್ದ ರತನ್ ಟಾಟಾಗೆ ಮೊದಲ ಹಿನ್ನಡೆಯಾಗಿದ್ದು, ಕ್ಯಾರಿನ ಉತ್ಪಾದನಾ ಘಟಕವನ್ನು ಪಶ್ಚಿಮ ಬಂಗಾಳದ ಸಿಂಗೂರ್ ನಿಂದ ಗುಜರಾತ್ ಸನಂದ್ ಗೆ ಸ್ಥಳಾಂತರ ಮಾಡಬೇಕಾಯಿತು. ಈ ಪ್ರಕ್ರಿಯೆ ವಿಳಂಬವಾಗಿದ್ದರಿಂದ, ಅದು ಉತ್ಪಾದನೆಯ ಮೇಲೆ ಪರಿಣಾಮವನ್ನು ಬೀರಿತ್ತು.

ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಕಾರು ಡೆಲಿವರಿ ಮಾಡುತ್ತಿಲ್ಲ

ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಕಾರು ಡೆಲಿವರಿ ಮಾಡುತ್ತಿಲ್ಲ

ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಕಾರು ಡೆಲಿವರಿ ಮಾಡುತ್ತಿಲ್ಲ ಎನ್ನುವ ದೂರು ಪದೇಪದೇ ಬರುತ್ತಿದ್ದ ಸಂದರ್ಭದಲ್ಲೇ, ನ್ಯಾನೋ ಕಾರು ಹೊತ್ತಿ ಉರಿದ ಹಲವು ಘಟನೆಗಳು ನಡೆದು ಹೋದವು. ಈ ಘಟನೆಗಳು ಜನಸಾಮಾನ್ಯರ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಾರಂಭಿಸಿತು ಎಂದರೆ, ಈ ಕಾರಿನ ಮೇಲೆ ಜನರ ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಲಲಾರಂಭಿಸಿದರು.

ಟಾಟಾ ಸಂಸ್ಥೆ ಕಾಸ್ಟ್ ಕಟ್ಟಿಂಗ್ ಗೆ ಮುಂದಾಯಿತು
 

ಟಾಟಾ ಸಂಸ್ಥೆ ಕಾಸ್ಟ್ ಕಟ್ಟಿಂಗ್ ಗೆ ಮುಂದಾಯಿತು

ಉತ್ಪಾದನೆಯಲ್ಲಿ ಆಗುತ್ತಿರುವ ಹಿನ್ನಡೆಯಿಂದ, ಟಾಟಾ ಸಂಸ್ಥೆ ಕಾಸ್ಟ್ ಕಟ್ಟಿಂಗ್ ಗೆ ಮುಂದಾಯಿತು. ಇದರಿಂದಾಗಿ ಕಾರಿನ ಗುಣಮಟ್ಟವೂ ಕಮ್ಮಿಯಾಗಿ ಇದು ಸುರಕ್ಷಿತವಾದ ಕಾರು ಅಲ್ಲ ಎನ್ನುವ ತೀರ್ಮಾನಕ್ಕೆ ಜನ ಬಂದಾಗಿತ್ತು. ಪರಿಣಾಮ, 2.5ಲಕ್ಷ ಉತ್ಪಾದನೆಯ ಟಾರ್ಗೆಟ್ ಇಟ್ಟುಕೊಂಡಿದ್ದ ಟಾಟಾ, 2016-17ಸಾಲಿನಲ್ಲಿ ಮಾರಾಟ ಮಾಡಿದ್ದು ಕೇವಲ 7,591 ಕಾರನ್ನು.

ನ್ಯಾನೊ ಉತ್ಪಾದನೆಯೂ ಕಮ್ಮಿಯಾಗುತ್ತಾ ಬಂತು

ನ್ಯಾನೊ ಉತ್ಪಾದನೆಯೂ ಕಮ್ಮಿಯಾಗುತ್ತಾ ಬಂತು

ಬೇಡಿಕೆ ಕಮ್ಮಿಯಾಗಿದ್ದರಿಂದ ದಿನದಿಂದ ದಿನಕ್ಕೆ ನ್ಯಾನೋ ಉತ್ಪಾದನೆಯೂ ಕಮ್ಮಿಯಾಗುತ್ತಾ ಬಂತು. ಇದು ಎಷ್ಟರ ಮಟ್ಟಿಗೆ ಅಂದರೆ 2017ರಲ್ಲಿ ಕೇವಲ 275 ಕಾರನ್ನು ಉತ್ಪಾದನೆಗೊಂಡಿತ್ತು. ಇನ್ನು ಕಳೆದ ವರ್ಷ ಅಂದರೆ 2019ರಲ್ಲಿ ಟಾಟಾ ಮೋಟರ್ಸ್ ಒಂದೇ ಒಂದು ಕಾರನ್ನು ಉತ್ಪಾದಿಸಿಲ್ಲ. ಜೊತೆಗೆ, ಅದಕ್ಕಿಂತ ಹಿಂದಿನ ವರ್ಷದಲ್ಲಿ ಉತ್ಪಾದನೆಗೊಂಡಿದ್ದ ಒಂದು ಕಾರನ್ನು, ಫೆಬ್ರವರಿ 2019ರಲ್ಲಿ ಮಾರಾಟ ಮಾಡಿದ್ದು ಮಾತ್ರ ಸಾಧನೆಯಾಗಿತ್ತು.

ನ್ಯಾನೊ ಮೇಲೆ ಕನಸಿನ ಗೋಪುರ ಕಟ್ಟಿಕೊಂಡಿದ್ದ ರತನ್ ಟಾಟಾ ಕನಸು ಛಿದ್ರಛಿದ್ರ

ನ್ಯಾನೊ ಮೇಲೆ ಕನಸಿನ ಗೋಪುರ ಕಟ್ಟಿಕೊಂಡಿದ್ದ ರತನ್ ಟಾಟಾ ಕನಸು ಛಿದ್ರಛಿದ್ರ

'ಪೀಪಲ್ಸ್ ಕಾರ್' ಎನ್ನುವ ಟ್ಯಾಗ್ ಲೈನ್ ಮೂಲಕ, ಭರ್ಜರಿ ಪ್ರಚಾರ ಪಡೆದುಕೊಂಡು ಮಾರುಕಟ್ಟೆಗೆ ಬಂದಿದ್ದ ಟಾಟಾ ನ್ಯಾನೋ ಕಾರು, ಮಾರುಕಟ್ಟೆಯಲ್ಲಿ ಉಳಿಯಲಾಗದೇ ಹೋದದ್ದು ಸಂಸ್ಥೆಯ ಸ್ವಯಂಕೃತ ಅಪರಾಧದಿಂದ. ಸಂಸ್ಥೆಯ ಮೂಲಗಳ ಪ್ರಕಾರ, ಈಗಾಗಲೇ ಸಂಸ್ಥೆ ತನ್ನ ಉತ್ಪಾದನೆಯನ್ನು ನಿಲ್ಲಿಸಿಯಾಗಿದೆ. ಬರುವ ಏಪ್ರಿಲ್ ನಲ್ಲಿ ಸಂಪೂರ್ಣವಾಗಿ ಉತ್ಪಾದನಾ ಘಟಕವನ್ನು ಮುಚ್ಚುವ ಸಾಧ್ಯತೆಯಿದೆ. ಅಲ್ಲಿಗೆ, ನ್ಯಾನೋ ಮೇಲೆ ಕನಸಿನ ಗೋಪುರ ಕಟ್ಟಿಕೊಂಡಿದ್ದ ರತನ್ ಟಾಟಾ ಅವರ ಕನಸೂ ಛಿದ್ರಛಿದ್ರಗೊಳ್ಳುತ್ತಿದೆ.

English summary

Production And Sales Of The Nano Would Stop From April 2020 As Tata Motors Has No Plans to Invest Further

Production And Sales Of The Nano Would Stop From April 2020 As Tata Motors Has No Plans to Invest Further.
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more