For Quick Alerts
ALLOW NOTIFICATIONS  
For Daily Alerts

ಸಾರ್ವಜನಿಕ ಬ್ಯಾಂಕ್ ಎನ್ ಪಿಎ ರು. 6.09 ಲಕ್ಷ ಕೋಟಿಗೆ ಇಳಿಕೆ

|

ಸಾರ್ವಜನಿಕ ವಲಯ ಬ್ಯಾಂಕ್ ಗಳ (PSB's) ಗ್ರಾಸ್ ನಾನ್ ಪರ್ಫಾರ್ಮಿಂಗ್ ಅಸೆಟ್ಸ್ (NPA) 2018ರ ಮಾರ್ಚ್ ನಲ್ಲಿ ರು. 8.96 ಲಕ್ಷ ಕೋಟಿ ಇದ್ದದ್ದು, 2020ರ ಸೆಪ್ಟೆಂಬರ್ ನಲ್ಲಿ ರು. 6.09 ಲಕ್ಷ ಕೋಟಿಗೆ ಕಡಿಮೆ ಆಗಿದೆ. ಸರ್ಕಾರ ತೆಗೆದುಕೊಂಡ ವಿವಿಧ ಕ್ರಮಗಳಿಂದಾಗಿ ಇಂಥ ಬೆಳವಣಿಗೆ ಆಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಮಂಗಳವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

 

2018ರ ಮಾರ್ಚ್ ನಿಂದ 2020ರ ಏಪ್ರಿಲ್ ಮಧ್ಯೆ ದಾಖಲೆಯ ರು. 2.54 ಲಕ್ಷ ಕೋಟಿ ವಸೂಲಿ ಆಗಿದೆ. 2020- 21ರ ಮೊದಲಾರ್ಧದಲ್ಲಿ 12ರ ಪೈಕಿ 11 ಸಾರ್ವಜನಿಕ ಬ್ಯಾಂಕ್ ಗಳು ರು. 14,688 ಕೋಟಿ ಲಾಭ ಕಂಡಿವೆ ಎಂದು ರಾಜ್ಯ ಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.

ಟಾಪ್ 100 ಸಾಲಗಾರರು ಹಿಂತಿರುಗಿಸದ ಮೊತ್ತ ರು. 84,632 ಕೋಟಿ

ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ ಪ್ರಾವಿಷನ್ ಕವರೇಜ್ ರೇಷಿಯೋ 2020ರ ಸೆಪ್ಟೆಂಬರ್ ಕೊನೆಗೆ ಎಂಟು ವರ್ಷಗಳ ಗರಿಷ್ಠ ಮಟ್ಟವಾದ 85.06 ಪರ್ಸೆಂಟ್ ಇದೆ. ಬ್ಯಾಂಕ್ ಗಳ ಬ್ಯಾಲೆನ್ಸ್ ಶೀಟ್ ಗಳನ್ನು ಸ್ವಚ್ಛ ಮಾಡುವ ಆಸ್ತಿ ಗುಣಮಟ್ಟ ಪರಿಶೀಲನೆ (AQR) 2015ರಲ್ಲಿ ಆರಂಭಿಸಲಾಯಿತು. ಆಗ ಎನ್ ಪಿಎ ಗೊತ್ತಾಯಿತು ಎಂದು ಅವರು ಹೇಳಿದ್ದಾರೆ.

ಸಾರ್ವಜನಿಕ ಬ್ಯಾಂಕ್ ಎನ್ ಪಿಎ ರು. 6.09 ಲಕ್ಷ ಕೋಟಿಗೆ ಇಳಿಕೆ

ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ ಗ್ರಾಸ್ ಎನ್ ಪಿಎ ಮಾರ್ಚ್ 31, 2015ರಲ್ಲಿ 2,79,016 ಕೋಟಿ ಇದ್ದದ್ದು ಒತ್ತಡದ ಆಸ್ತಿಯನ್ನು ಅನುತ್ಪಾದಕ ಆಸ್ತಿ ಎಂದು ಬ್ಯಾಂಕ್ ಗಳು ಗುರುತಿಸಲು ಆರಂಭಿಸಿದ ಮೇಲೆ ಮಾರ್ಚ್ 31, 2018ರಲ್ಲಿ ರು. 8,95,601 ಕೋಟಿಗೆ ಹೆಚ್ಚಳವಾಯಿತು. ಸರ್ಕಾರದ ಪ್ರಯತ್ನ, ಸುಧಾರಣೆ ಹಾಗೂ ತೀರುವಳಿಯಿಂದಾಗಿ 2020ರ ಸೆಪ್ಟೆಂಬರ್ 30ಕ್ಕೆ ರು. 6,09,129 ಕೋಟಿಗೆ ಇಳಿದಿದೆ ಎಂದು ಹೇಳಿದ್ದಾರೆ.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಈಕ್ವಿಟಿ ಮತ್ತು ಬಾಂಡ್ ಗಳ ಸ್ವರೂಪದಲ್ಲಿ 2020- 21ರಲ್ಲಿ ರು. 50,982 ಕೋಟಿಯನ್ನು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು ಸಂಗ್ರಹಿಸಿವೆ ಎಂದು ಉತ್ತರಿಸಿದ್ದಾರೆ. ಇದರ ಪೂರಕವಾಗಿ ಸರ್ಕಾರವು ಸಾರ್ವಜನಿಕ ಬ್ಯಾಂಕ್ ಗಳಿಗೆ 5500 ಕೋಟಿ ರುಪಾಯಿ ಬಂಡವಾಳ ಪೂರೈಕೆ ಮತ್ತು ಬಜೆಟ್ ಪ್ರಾವಿಷನ್ 20,000 ಕೋಟಿ ರುಪಾಯಿಯನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಇಡಲಾಗಿದೆ ಎಂದಿದ್ದಾರೆ.

English summary

Gross NPAs of PSBs declined to Rs 6.09 lakh cr in September 2020: Anurag Thakur

As on 2020, September PSB's gross NPA declined to Rs 6.09 lakh crore, according to written answer given by minister of state, finance Anurag Thakur.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X