For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ರೀಟೇಲ್ ನಲ್ಲಿ ಪಬ್ಲಿಕ್ ಇನ್ವೆಸ್ಟ್ ಮೆಂಟ್ ಫಂಡ್ 9,555 ಕೋಟಿ ಹೂಡಿಕೆ

|

ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಲ್ಲಿ (RRVL) ಪಬ್ಲಿಕ್ ಇನ್ವೆಸ್ಟ್ ಮೆಂಟ್ ಫಂಡ್ (PIF)ನಿಂದ ₹ 9,555 ಕೋಟಿ ರುಪಾಯಿ ಹೂಡಿಕೆ ಮಾಡಲಿದೆ. ಈ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಗುರುವಾರ ಘೋಷಣೆ ಮಾಡಿದೆ.

ಈ ಹೊಸ ಹೂಡಿಕೆಯು ರಿಲಯನ್ಸ್ ರೀಟೇಲ್ ಪ್ರೀ ಮನಿ ಈಕ್ವಿಟಿ ಮೌಲ್ಯವನ್ನು 4.587 ಲಕ್ಷ ಕೋಟಿ ರುಪಾಯಿ ಮಾಡಿದೆ. ಇಷ್ಟು ಮೊತ್ತಕ್ಕೆ ರಿಲಯನ್ಸ್ ರೀಟೇಲ್ ವೆಂಚರ್ಸ್ ನ 2.04% ಈಕ್ವಿಟಿ ಪಾಲು ಖರೀದಿಯನ್ನು PIF ಮಾಡಿದಂತಾಗುತ್ತದೆ. ಇದಕ್ಕೂ ಮುನ್ನ PIFನಿಂದ ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆಯಲ್ಲಿ ಜಿಯೋ ಪ್ಲಾಟ್ ಫಾರ್ಮ್ಸ್ ನಲ್ಲಿ 2.32% ಷೇರಿನ ಪಾಲು ಖರೀದಿ ಮಾಡಿತ್ತು.

 

ಮುಕೇಶ್ ಆಸ್ತಿ 50 ಸಾವಿರ ಕೋಟಿ ರುಪಾಯಿಗೂ ಹೆಚ್ಚು ಒಂದೇ ದಿನದಲ್ಲಿ ಭಸ್ಮ

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕ ಮುಕೇಶ್ ಅಂಬಾನಿ ಮಾತನಾಡಿ, "ಸೌದಿ ಅರೇಬಿಯಾ ಜತೆಗೆ ರಿಲಯನ್ಸ್ ದೀರ್ಘಾವಧಿ ಸಂಬಂಧ ಇದೆ. ಸೌದಿ ಅರೇಬಿಯಾದ ಆರ್ಥಿಕ ಬದಲಾವಣೆ ಮುಂಚೂಣಿಯಲ್ಲಿ PIF ಇದೆ. ರಿಲಯನ್ಸ್ ರೀಟೇಲ್ ನಲ್ಲಿ ಗೌರವಾನ್ವಿತ ಸಹಭಾಗಿಗಳಾಗಿ PIF ಸ್ವಾಗತಿಸುತ್ತೇನೆ. ಮತ್ತು ಸುಸ್ಥಿರ ಅಭಿವೃದ್ಧಿ ಹಾಗೂ ಮಾರ್ಗದರ್ಶನವನ್ನು ಎದುರು ನೋಡುತ್ತೇವೆ.

RRVLನಲ್ಲಿ ಪಬ್ಲಿಕ್ ಇನ್ವೆಸ್ಟ್ ಮೆಂಟ್ ಫಂಡ್ 9,555 ಕೋಟಿ ಹೂಡಿಕೆ

"ಭಾರತದ ರೀಟೇಲ್ ವಲಯದಲ್ಲಿ ನೂರಾ ಮೂವತ್ತು ಕೋಟಿ ಭಾರತೀಯರು ಹಾಗೂ ಲಕ್ಷಾಂತರ ಸಣ್ಣ ವರ್ತಕರಿಗೆ ಬದಲಾವಣೆಗಾಗಿ ನಮ್ಮ ಮಹತ್ವಾಕಾಂಕ್ಷಿ ಪಯಣದಲ್ಲಿ ಮುಂದುವರಿದಿದ್ದೇವೆ" ಎಂದಿದ್ದಾರೆ.

PIF ಗವರ್ನರ್ ಯಾಸೀರ್ ಅಲ್- ರುಮಾಯ್ಯನ್ ಮಾತನಾಡಿ, " ಭಾರತದ ಅತ್ಯಂತ ಮುಖ್ಯವಾದ ವಲಯದ ಅತಿ ಮುಖ್ಯ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ಜತೆಗೆ ನಮ್ಮ ವಿಶ್ವಾಸಾರ್ಹ ಸಹಭಾಗಿತ್ವ ವಿಸ್ತರಣೆ ಆಗಿರುವುದಕ್ಕೆ ಸಂತೋಷ ಆಗುತ್ತಿದೆ," ಎಂದಿದ್ದಾರೆ.

ರಿಲಯನ್ಸ್ ರೀಟೇಲ್ ಲಿಮಿಟೆಡ್ ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆ. ಭಾರತದ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಮತ್ತು ಲಾಭದಾಯಕವಾದ ಉದ್ಯಮ. ದೇಶದಾದ್ಯಂತ 12 ಸಾವಿರ ಮಳಿಗೆಗಳನ್ನು ಹೊಂದಿದೆ. ಭಾರತದ ರೈತರು, ಎಂಎಸ್ ಎಂಇ ವಲಯ ಬಲಪಡಿಸುವ ಮೂಲಕ ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸುವ ಉದ್ದೇಶ ರಿಲಯನ್ಸ್ ರೀಟೇಲ್ ವೆಂಚರ್ಸ್ ಗೆ ಇದೆ ಎಂದು ಕಂಪೆನಿ ತಿಳಿಸಿದೆ.

English summary

Public Investment Fund To Invest 9555 Crore In Reliance Retail Ventures Limited

Saudi Arabia's Public Investment Fund (PIF) to invest 9555 crore rupees in Reliance Retail Ventures Limited (RRVL). Here is the details.
Story first published: Thursday, November 5, 2020, 19:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X