For Quick Alerts
ALLOW NOTIFICATIONS  
For Daily Alerts

ಮಾರ್ಚ್‌ನಲ್ಲಿ ಪ್ರಯಾಣಿಕ ವಾಹನಗಳ ರಿಟೇಲ್ ಮಾರಾಟ 28% ಏರಿಕೆ

|

ಪ್ರಯಾಣಿಕ ವಾಹನಗಳ ರಿಟೇಲ್ ಮಾರಾಟವು 2020ರ ಮಾರ್ಚ್‌ಗೆ ಹೋಲಿಸಿದರೆ 2021ರ ಮಾರ್ಚ್‌ನಲ್ಲಿ ಶೇಕಡಾ 28.39ರಷ್ಟು ಹೆಚ್ಚಾಗಿದೆ ಎಂದು ಭಾರತೀಯ ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಗುರುವಾರ ತಿಳಿಸಿದೆ.

 

2020ರ ಮಾರ್ಚ್‌ನಲ್ಲಿ 2.17 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟ ಆಗಿದ್ದವು. ಆದರೆ 2021ರ ಮಾರ್ಚ್‌ ವೇಳೆಗೆ 2.79 ಲಕ್ಷಕ್ಕೆ ತಲುಪಿದೆ ಎಂದು ಎಫ್‌ಎಡಿಎ ಹೇಳಿದೆ.

ಇನ್ನು ದ್ವಿಚಕ್ರ ವಾಹನಗಳ ಮಾರಾಟವು ಶೇಕಡಾ 35.26ರಷ್ಟು ಇಳಿಕೆಗೊಂಡಿದ್ದು 11,95,445 ಯುನಿಟ್‌ಗಳಿಗೆ ತಲುಪಿದೆ. 2020ರ ಮಾರ್ಚ್‌ ತಿಂಗಳಲ್ಲಿ 18,46,613 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು.

ಮಾರ್ಚ್‌ನಲ್ಲಿ ಪ್ರಯಾಣಿಕ ವಾಹನಗಳ ರಿಟೇಲ್ ಮಾರಾಟ 28% ಏರಿಕೆ

ಇದರ ಜೊತೆಗೆ ಪ್ರಯಾಣಿಕ ವಾಹನಗಳ ಮಾರಾಟ ಕೂಡ ಶೇಕಡಾ 42.2ರಷ್ಟು ಕುಸಿತಗೊಂಡಿದ್ದು, ಕಳೆದ ವರ್ಷದ 1,16,559 ಯುನಿಟ್‌ಗಳಿಗೆ ಹೋಲಿಸಿದರೆ 67,372 ಯುನಿಟ್‌ಗಳಿಗೆ ಇಳಿಕೆಗೊಂಡಿದೆ.

ಇದೇ ರೀತಿಯಾಗಿ ತ್ರಿಚಕ್ರ ವಾಹನಗಳ ಮಾರಾಟವು ಶೇಕಡಾ 50.72ರಷ್ಟು ಇಳಿಕೆಗೊಂಡಿದ್ದು, 38,034 ಯುನಿಟ್‌ಗಳಷ್ಟೇ ಮಾರಾಟವಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ 77,173 ಯುನಿಟ್‌ಗಳು ಮಾರಾಟವಾಗಿದ್ದವು.

ಆದರೆ ವಿಶೇಷ ಅಂದರೆ ಟ್ರಾಕ್ಟರ್‌ ಮಾರಾಟವು ಶೇಕಡಾ 29.21ರಷ್ಟು ಏರಿಕೆಗೊಂಡಿದ್ದು 69,082 ಯುನಿಟ್‌ಗಳು ಕಳೆದ ತಿಂಗಳು ಮಾರಾಟವಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ 53,463 ಟ್ರ್ಯಾಕ್ಟರ್‌ ಮಾರಾಟವಾಗಿತ್ತು.

English summary

PV Retail Sales Up 28% In March: Two Wheeler Registrations Dip 35 Percent

Passenger Vehicle Retail Sales In March Witnessed A Year-on-Year Growth Of 28.38%
Story first published: Thursday, April 8, 2021, 20:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X