For Quick Alerts
ALLOW NOTIFICATIONS  
For Daily Alerts

ಖಾಸಗಿ ವಲಯ ಸಿಬ್ಬಂದಿಗೂ LTC ವೋಚರ್, ಐಟಿ ವಿನಾಯಿತಿ ವಿಸ್ತರಣೆ

|

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಹಾನಿಗೊಳಗಾದ ವ್ಯವಹಾರಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಆರ್ಥಿಕ ಪ್ಯಾಕೇಜ್ ಗಳನ್ನು ಕೇಂದ್ರ ಸರ್ಕಾರ ಘೋಷಿಸುತ್ತಾ ಬಂದಿದೆ. ಇತ್ತೀಚೆಗೆ ಸರ್ಕಾರಿ ನೌಕರರ ಕೊಳ್ಳುವಿಕೆ, ಪ್ರಯಾಣ ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ವಿಶೇಷ ಯೋಜನೆ ಪ್ರಕಟಿಸಿದ್ದರು. ಈಗ ಈ ಯೋಜನೆಯ ಲಾಭವನ್ನು ಗುರುವಾರ(ಅ.29)ದಿಂದ ಖಾಸಗಿ ವಲಯಕ್ಕೂ ವಿಸ್ತರಣೆಗೊಳಿಸಲಾಗಿದೆ.

ಎಲ್ ಟಿಸಿ ನಗದು ವೋಚರ್ ಯೋಜನೆಯಡಿ ಸಿಗುವ ಆದಾಯ ತೆರಿಗೆ ವಿನಾಯತಿ ಸೌಲಭ್ಯವು ರಾಜ್ಯ ಸರ್ಕಾರಿ ನೌಕರರು, ಖಾಸಗಿ ವಲಯ ಸಿಬ್ಬಂದಿ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೂ ಈಗ ಅನ್ವಯವಾಗಲಿದೆ.

ಎಲ್ ಟಿಸಿ ನಗದು ವೋಚರ್ ಯೋಜನೆಯಡಿ ಪ್ರಯಾಣದ ದರ ತೆರಿಗೆ ರಹಿತವಾಗಿರುತ್ತದೆ. ವಿಮಾನ ಅಥವಾ ರೈಲು ಪ್ರಯಾಣ ದರ ದಿನದ ಲೆಕ್ಕದಲ್ಲಿ ಮರು ಪಾವತಿ ಹಾಗೂ 10 ದಿನಗಳ ಪೇಯ್ಡ್ ಲೀವ್ ಸಿಗಲಿದೆ. ಗರಿಷ್ಠ 36, 000 ಪ್ರತಿ ವ್ಯಕ್ತಿಗೆ ನಿಗದಿತ ಮೊತ್ತಕ್ಕೆ ವಿನಾಯತಿ ಪಡೆಯಬಹುದು.

ಖಾಸಗಿ ವಲಯ ಸಿಬ್ಬಂದಿಗೂ LTC ವೋಚರ್, ಐಟಿ ವಿನಾಯಿತಿ ವಿಸ್ತರಣೆ

 

ಸೌಲಭ್ಯ ಪಡೆಯುವುದು ಹೇಗೆ?

* 3 ಪಟ್ಟು ಹೆಚ್ಚು ದರದ ಉತ್ಪನ್ನ ಹಾಗೂ ಸೇವೆ ಬಳಸಬೇಕು, ಒಂದು ಬಾರಿ ರಜೆ ಎನ್ ಕ್ಯಾಶ್ ಮೆಂಟ್ ಲಭ್ಯ

* ಡಿಜಿಟಲ್ ಪೇಮೆಂಟ್, ಜಿಎಸ್ಟಿ ರಸೀತಿ ಪಡೆದುಕೊಳ್ಳಬೇಕು.

* ಶೇ 12ರಷ್ಟು ಜಿಎಸ್ಟಿಯುಳ್ಳ ಉತ್ಪನ್ನಗಳನ್ನು ನೋಂದಾಯಿತ ಮಳಿಗೆ, ಸೇವಾದಾರರಿಂದ ಪಡೆಯಬೇಕು.

* ಮಾರ್ಚ್ 31, 2021ರೊಳಗೆ ಈ ಸೌಲಭ್ಯ ಬಳಸಿ ಖರ್ಚು ಮಾಡಬೇಕು.

ಖಾಸಗಿ ವಲಯ ಸಿಬ್ಬಂದಿಗೂ LTC ವೋಚರ್, ಐಟಿ ವಿನಾಯಿತಿ ವಿಸ್ತರಣೆ

ಡೀಮ್ಡ್ ಎಲ್ ಟಿಸಿ ದರ 80,000 ರು(20,000 X 4) ಇದ್ದರೆ ಈ ಯೋಜನೆಯ ಲಾಭ ಪಡೆಯಲು 2,40,000 ರು ಖರ್ಚು ಮಾಡಬೇಕಾಗುತ್ತದೆ. ಆಗ ಮಾತ್ರ ಪೂರ್ತಿ ಲಾಭ, ಐಟಿ ವಿನಾಯತಿ ಸಿಗಲಿದೆ. ಒಂದು ವೇಳೆ 1,80,000 ರು ಮಾತ್ರ ಖರ್ಚು ಮಾಡಿದ್ದರೆ, ಅಂಥ ಸಿಬ್ಬಂದಿಗೆ ಶೇ 75ರಷ್ಟು (ಸುಮಾರು 60,000 ರು) ತನಕ ಮಾತ್ರ ಡೀಮ್ಡ್ ಎಲ್ ಟಿಸಿ ದರ ಹಾಗೂ ಸಂಬಂಧಪಟ್ಟ ಐಟಿ ವಿನಾಯತಿ ಸಿಗಲಿದೆ. ಉದ್ಯೋಗಿಗಳ ಒಟ್ಟು ಖರ್ಚಿನ ಮೇಲೆ ಐಟಿ ವಿನಾಯಿತಿ ಶೇ6 ರಿಂದ 9 ರಷ್ಟು ಸಿಗಲಿದೆ ಎಂದು ನಂಗಿಯಾ ಅಂಡ್ ಕೋ ಎಲ್ ಎಲ್ ಪಿ ಪಾರ್ಟ್ನರ್ ಶೈಲೇಶ್ ಕುಮಾರ್ ಹೇಳಿದ್ದಾರೆ.

English summary

Pvt sector, state govt, PSU employees eligible for I-T exemption under LTC cash voucher scheme

The Income Tax Department on Thursday extended the I-T exemption available under the LTC cash voucher scheme to employees of state governments, state-owned enterprises and private sector.
Company Search
COVID-19