For Quick Alerts
ALLOW NOTIFICATIONS  
For Daily Alerts

Q2: ನಿರೀಕ್ಷೆಗೂ ಮೀರಿದ ಲಾಭ ದಾಖಲಿಸಿದ ಭಾರ್ತಿ ಏರ್ಟೆಲ್

|

ಟೆಲಿಕಾಂ ದೈತ್ಯ ಸಂಸ್ಥೆ ಭಾರ್ತಿ ಏರ್ಟೆಲ್ ಅಕ್ಟೋಬರ್ 27ರಂದು ತನ್ನ 2ನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಅತ್ಯಧಿಕ ನಿವ್ವಳ ತ್ರೈಮಾಸಿಕ ಆದಾಯ ಗಳಿಕೆ ಮಾಡಿದೆ. ಮಾರುಕಟ್ಟೆ ತಜ್ಞರ ನಿರೀಕ್ಷೆ ಮೀರಿ 100 ಕೋಟಿ ರು ಅಧಿಕ ಆದಾಯ ಬಂದಿದೆ.

 

ಈ ತ್ರೈಮಾಸಿಕದಲ್ಲಿ 25, 785 ಕೋಟಿ ರು ನಿವ್ವಳ ಆದಾಯ ಬಂದಿದ್ದು, ಮಾರುಕಟ್ಟೆ ತಜ್ಞರು 24, 430 ಕೋಟಿ ರು ನಿರೀಕ್ಷಿಸಲಾಗಿತ್ತು. ಆದರೆ, ಕಳೆದ ವರ್ಷದ ಇದೇ ಅವಧಿಯ ತ್ರೈಮಾಸಿಕಕ್ಕೆ ಹೋಲಿಸಿದರೆ ನಿವ್ವಳ ನಷ್ಟದ ಮೊತ್ತ 763.2 ಕೋಟಿ ರು ಕಡಿಮೆಯಾಗಿದೆ. ಕಳೆದ ವರ್ಷ 2ನೇ ತ್ರೈಮಾಸಿಕದಲ್ಲಿ 23, 044 ಕೋಟಿ ರು ನಷ್ಟ ಉಂಟಾಗಿತ್ತು. ಈ ವರ್ಷ 15, 933.1 ಕೋಟಿ ರು ನಷ್ಟಿದೆ.

ನಿವ್ವಳ ತೆರಿಗೆ ಕಳೆದ ನಂತರದ ಆದಾಯ EBITDA ಸುಮಾರು 11,848.3 ಕೋಟಿ ರು ನಷ್ಟಿದೆ. ವರ್ಷದಿಂದ ವರ್ಷಕ್ಕೆ ಆದಾಯ ಶೇ 22ರಷ್ಟು ಏರಿಕೆಯಾಗಿದೆ. 1.4 ಕೋಟಿ 4ಜಿ ಗ್ರಾಹಕರು ಹಾಗೂ ಶೇ 26ರಷ್ಟು ಆದಾಯ ಬಂದಿದೆ ಎಂದು ಭಾರತ ಹಾಗೂ ದಕ್ಷಿಣ ಏಷ್ಯಾ ಎಂಡಿ, ಸಿಇಒ ಗೋಪಾಲ್ ವಿಠಲ್ ಹೇಳಿದ್ದಾರೆ.

Q2: ನಿರೀಕ್ಷೆಗೂ ಮೀರಿದ ಲಾಭ ದಾಖಲಿಸಿದ ಭಾರ್ತಿ ಏರ್ಟೆಲ್

ತ್ರೈಮಾಸಿಕದಲ್ಲಿ ಅತ್ಯಧಿಕ ನಿವ್ವಳ ಆದಾಯವನ್ನು ದಾಖಲಿಸಲಾಗಿದೆ. ಭಾರತದಲ್ಲಿನ ನಿವ್ವಳ ಶೇ 22ರಷ್ಟು ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದ್ದರೆ, EBITDA ಮಾರ್ಜಿನ್ ವರ್ಷದಿಂದ ವರ್ಷಕ್ಕೆ ಶೇ 4.7ರಷ್ಟು ಏರಿದೆ. ಶೇ 9.8ರಿಂದ ಶೇ 13ಕ್ಕೇರಿದೆ.

ಭಾರತದಲ್ಲಿ ಮೊಬೈಲ್ ಸೇವೆ ಆದಾಯ ಶೇ 26ರಷ್ಟು ಎರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 4ಜಿ ಗ್ರಾಹಕರು ಶೇ 48.1ರಷ್ಟು ಏರಿಕೆಯಾಗಿದ್ದಾರೆ. 16 ದೇಶಗಳಲ್ಲಿ 44 ಕೋಟಿ ಗ್ರಾಹಕರನ್ನು ಹೊಂದಿದ್ದು, ಆಫ್ರಿಕಾದಲ್ಲಿ ವರ್ಷದಿಂದ ವರ್ಷಕ್ಕೆ ಶೇ 20ರಷ್ಟು ಆದಾಯ, EBITDA ಮಾರ್ಜಿನ್ ಶೇ 45.3 ರಷ್ಟಿದೆ.

English summary

Q2: Bharti Airtel revenue at Rs 25,785 crore beats estimate

Telecom major Bharti Airtel on October 27 reported its highest ever consolidated quarterly revenues for the quarter ended September 30, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X