For Quick Alerts
ALLOW NOTIFICATIONS  
For Daily Alerts

ಫುಟ್ಬಾಲ್‌ ಫ್ಯಾನ್ಸ್‌ಗೆಂದೇ ಕತಾರ್‌ನಲ್ಲಿ ಕಟ್ಟಲಾಗುತ್ತಿದೆ ನೀರಿನಲ್ಲಿ ತೇಲುವ ಹೋಟೆಲ್‌ಗಳು

|

ಕತಾರ್ ಮುಂಬರುವ 22ನೇ ಆವೃತ್ತಿಯ ಫಿಫಾ ವಿಶ್ವಕಪ್‌ನ ಆತಿಥ್ಯ ವಹಿಸಲಿದೆ. ಫುಟ್ಬಾಲ್ ವಿಶ್ವಕಪ್‌ನ ಆತಿಥ್ಯ ವಹಿಸುತ್ತಿರುವ ಯುಎಇನ ಮೊದಲ ರಾಷ್ಟ್ರ ಇದಾಗಿದೆ. ಹೀಗಾಗಿ ಈಗಾಗಲೇ ವಿಶ್ವಕಪ್‌ಗಾಗಿ , ಬರುವ ಅಭಿಮಾನಿಗಳಿಗಾಗಿ ವಿಶೇಷ ತಯಾರಿ ನಡೆಸಿದೆ. ಅತ್ಯಾಧುನಿಕ ಫುಟ್ಬಾಲ್ ಸ್ಟೇಡಿಯಂಗಳನ್ನು ಕಟ್ಟುವ ಜೊತೆಗೆ ಅಭಿಮಾನಿಗಳಿಗೆಂದೇ ನೀರಿನಲ್ಲಿ ತೇಲುವ ಹೋಟೆಲ್‌ಗಳನ್ನು ನಿರ್ಮಿಸುತ್ತಿದೆ.

ಕಳೆದ ಬಾರಿ ರಷ್ಯಾ ಫುಟ್ಬಾಲ್ ವಿಶ್ವಕಪ್‌ನ ಆತಿಥ್ಯ ವಹಿಸಿತ್ತು. ಅತ್ಯಂತ ಯಶಸ್ವಿಯಾಗಿ ಟೂರ್ನಿಯನ್ನು ನಡೆಸಿಕೊಟ್ಟಿತು. ಕತಾರ್ ವಿಶ್ವಕಪ್‌ ಆತಿಥ್ಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಅದ್ಧೂರಿಯಾಗಿ ವಿಶ್ವಕಪ್ ನಡೆಸಿಕೊಡಲು ತಯಾರಿ ನಡೆಸಿದೆ. ವಿಶ್ವಕಪ್‌ನಲ್ಲಿ 32 ರಾಷ್ಟ್ರಗಳ ತಂಡಗಳು ಭಾಗವಹಿಸುತ್ತಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಸ್ಟೇಡಿಯಂಗಳ ನಿರ್ಮಾಣ ಮಾಡುತ್ತಿದೆ. ಇದರ ಜೊತೆಗೆ ಅಭಿಮಾನಿಗಳು ತಂಗಲು ಹೋಟೆಲ್‌ಗಳನ್ನು ಕಟ್ಟುತ್ತಿದೆ.

ಅಭಿಮಾನಿಗಳಿಗಾಗಿಯೇ ತಯಾರಾಗುತ್ತಿವೆ 16 ತೇಲುವ ಹೋಟೆಲ್‌ಗಳು
 

ಅಭಿಮಾನಿಗಳಿಗಾಗಿಯೇ ತಯಾರಾಗುತ್ತಿವೆ 16 ತೇಲುವ ಹೋಟೆಲ್‌ಗಳು

ಫಿಫಾ ವಿಶ್ವಕಪ್‌ ಆಗಮಿಸುವ ಲಕ್ಷಾಂತರ ಅಭಿಮಾನಿಗಳಿಗೆಂದೇ ಕತಾರ್‌ನಲ್ಲಿ ನೀರಿನಲ್ಲಿ ತೇಲುವ 16 ಹೋಟೆಲ್‌ಗಳನ್ನು ಕಟ್ಟಲಾಗುತ್ತಿದೆ. 2022 ಫಿಫಾ ವಿಶ್ವಕಪ್‌ಗೆ ಇನ್ನೆರಡು ವರ್ಷಗಳು ಬಾಕಿ ಇರುವಂತೆಯೇ ತನ್ನ ಯೋಜನೆಯನ್ನು ಕಾರ್ಯಾರಂಭ ಮಾಡಿದೆ. ಈ ಹೋಟೆಲ್‌ಗಳನ್ನು ಸ್ಥಾಪಿಸಲು ನೀರಿನಲ್ಲಿ ಕಟ್ಟಡಗಳನ್ನು ಕಟ್ಟಲು ಪರಿಣಿತಿ ಹೊಂದಿರುವ ಫಿನ್‌ಲ್ಯಾಂಡ್‌ ಮೂಲದ ಕಂಪನಿ ADMARES ಜೊತೆಗೆ ಕತಾರ್‌ನ ಕ್ತೈಫಾನ್ ಯೋಜನೆಗಳು ಪಾಲುದಾರಿಕೆ ಹೊಂದಿವೆ.

70,000 ಹೋಟೆಲ್‌ ಕೊಠಡಿಗಳ ಗುರಿ

70,000 ಹೋಟೆಲ್‌ ಕೊಠಡಿಗಳ ಗುರಿ

ಸದ್ಯ ಕತಾರ್‌ನಲ್ಲಿರುವ ಒಟ್ಟಾರೆ ಹೋಟೆಲ್‌ಗಳಿಂದ 40,000ಕ್ಕೂ ಕಡಿಮೆ ಕೊಠಡಿಗಳು ಲಭ್ಯವಿದೆ. ಫಿಫಾ ವಿಶ್ವಕಪ್‌ ವಿಶ್ವದ ಮೂಲೆ ಮೂಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವುದರಿಂದ ಅವರಿಗೆ ಯಾವುದೇ ಅನಾನುಕೂಲವಾಗದಂತೆ ನೋಡಿಕೊಳ್ಳಲು ಹೊಸ ಹೋಟೆಲ್‌ಗಳ ನಿರ್ಮಾಣಕ್ಕೆ ಮುಂದಾಗಿದ್ದು 70,000 ಹೋಟೆಲ್‌ ಕೊಠಡಿಗಳ ಸ್ಥಾಪನೆಯ ಗುರಿ ಇಟ್ಟುಕೊಳ್ಳಲಾಗಿದೆ.

ಒಂದು ದಶಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ

ಒಂದು ದಶಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ

2022 ಫಿಫಾ ವಿಶ್ವಕಪ್‌ಗ ಹಿನ್ನಲೆಯಲ್ಲಿ ಕತಾರ್‌ಗೆ ಒಂದು ದಶಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ ಕತಾರ್ ತನ್ನ ಸಾಮರ್ಥ್ಯವನ್ನು ವಿಸ್ತರಿಸಲು ಕ್ರೂಸ್ ಹಡಗುಗಳಲ್ಲಿ ಮತ್ತು ಟೆಂಟ್ಡ್ ಹಳ್ಳಿಗಳಲ್ಲಿ ಅಭಿಮಾನಿಗಳಿಗೆ ಇರಲು ಅವಕಾಶ ಕಲ್ಪಿಸುವ ಅವಕಾಶವನ್ನು ಕಲ್ಪಿಸುವ ಯೋಜನೆಯನ್ನು ಹೊಂದಿದೆ.

ಈ ಯೋಜನೆಯ ಜೊತೆಗೆ 16 ಹೋಟೆಲ್‌ಗಳು ಸೇರ್ಪಡೆಯಾಗಲಿದ್ದು, ಕತಾರ್‌ನ ಪ್ರವಾಸೋದ್ಯಮ, ಆತಿಥ್ಯ ಮತ್ತು ಮನರಂಜನಾ ಕ್ಷೇತ್ರಗಳನ್ನು ಬೆಳೆಸುವುದು ಪ್ರಮುಖ ಉದ್ದೇಶವಾಗಿದೆ.

ಪ್ರತಿ ಹೋಟೆಲ್‌ನಲ್ಲಿ ಇರಲಿವೆ 101 ಕೊಠಡಿ
 

ಪ್ರತಿ ಹೋಟೆಲ್‌ನಲ್ಲಿ ಇರಲಿವೆ 101 ಕೊಠಡಿ

ಕತಾರ್‌ನಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ತೇಲುವ ಹೋಟೆಲ್‌ಗಳು 72 ಮೀಟರ್ ಉದ್ದ ಮತ್ತು 16 ಮೀಟರ್ ಅಗಲದ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ ಹೋಟೆಲ್‌ನಲ್ಲಿ 101 ಅತಿಥಿಗಳ ಕೊಠಡಿಗಳಿದ್ದು, ಎಲ್ಲಾ ರೀತಿಯ ಸೌಕರ್ಯಗಳನ್ನು ಒಳಗೊಂಡಿದೆ. ರೆಸ್ಟೋರೆಂಟ್, ಬಾರ್ ಕೂಡ ಇಲ್ಲಿ ಲಭ್ಯವಿದೆ. ಒಟ್ಟಾರೆ ಈ ಹೋಟೆಲ್‌ಗಳಲ್ಲಿ 1616 ಕೊಠಡಿಗಳು ಲಭ್ಯವಿದೆ.

ವಿಶ್ವಕಪ್ ಬಳಿಕ ಹೋಟೆಲ್‌ಗಳನ್ನು ಸ್ಥಳಾಂತರಿಸಬಹುದು

ವಿಶ್ವಕಪ್ ಬಳಿಕ ಹೋಟೆಲ್‌ಗಳನ್ನು ಸ್ಥಳಾಂತರಿಸಬಹುದು

ವಿಶ್ವಕಪ್‌ಗಾಗಿ ನಿರ್ಮಾಣವಾಗಿರುವ ಈ ತೇಲುವ ಹೋಟೆಲ್‌ಗಳು ತಾತ್ಕಾಲಿಕವಾಗಿ ಇರಲಿವೆ. ವಿಶ್ವಕಪ್ ಮುಗಿದ ನಂತರ, ಅವುಗಳನ್ನು ಕನಿಷ್ಠ 4 ಮೀಟರ್ ಆಳವಿರುವ ಯಾವುದೇ ಕರಾವಳಿ ಸ್ಥಳದಲ್ಲಿ ಇಡಬಹುದು. ಈ ರೀತಿಯಾಗಿ ಅತ್ಯಾಧುನಿಕ ತಂತ್ರಜ್ಙಾನದಲ್ಲಿ ಹೋಟೆಲ್ ನಿರ್ಮಾಣ ಮಾಡಲಾಗುತ್ತಿದೆ.

English summary

Qatar Built Dozen Floting Hotels For Fifa World CUP 2022 Fans

More than a dozen Floting Hotels are being built to make room for Fifa World CUP 2022 Fans in Qatar
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more