For Quick Alerts
ALLOW NOTIFICATIONS  
For Daily Alerts

ಪ್ರಿತಿಶ್ ನಂದಿ ಕಮ್ಯುನಿಕೇಷನ್ಸ್‌ ಪಾಲನ್ನು ಪಡೆದುಕೊಂಡ ರತನ್ ಟಾಟಾ

|

ಹಿರಿಯ ಕೈಗಾರಿಕೋದ್ಯಮಿ ರತನ್‌ ಟಾಟಾರವರು ಪ್ರಿತಿಶ್ ನಂದಿ ಕಮ್ಯುನಿಕೇಶನ್‌ನಲ್ಲಿ ಹಣ ಹೂಡಿಕೆ ಮಾಡಿದ್ದು, ದೊಡ್ಡ ಪ್ರಮಾಣದಲ್ಲಿ ಪಾಲನ್ನು ಪಡೆದುಕೊಂಡಿದ್ದಾರೆ. ಆದರೆ ಈ ಕುರಿತು ಎಷ್ಟು ಪ್ರಮಾಣದ ಪಾಲು ಎಂಬುದನ್ನು ಬಹಿರಂಪಡಿಸಿಲ್ಲ.

 

"ಟಾಟಾ ಸನ್ಸ್‌ನ ಅಧ್ಯಕ್ಷ ಮತ್ತು ಟಾಟಾ ಟ್ರಸ್ಟ್‌ಗಳ ಅಧ್ಯಕ್ಷರಾದ ರತನ್ ಟಾಟಾ, ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ, ಕಳೆದ ವಾರ ಷೇರು ಖರೀದಿಗಳ ಮೂಲಕ ಪ್ರಿತಿಶ್ ನಂದಿ ಕಮ್ಯುನಿಕೇಷನ್ಸ್ ಲಿಮಿಟೆಡ್‌ನಲ್ಲಿ ಪಾಲನ್ನು ಪಡೆದುಕೊಂಡಿದ್ದಾರೆ" ಎಂದು ಪ್ರಿತಿಶ್ ನಂದಿ ಕಮ್ಯುನಿಕೇಷನ್ಸ್ ಸ್ಟಾಕ್‌ ಫೈಲಿಂಗ್‌ನಲ್ಲಿ ತಿಳಿಸಿದೆ.

ಪ್ರಿತಿಶ್ ನಂದಿ ಕಮ್ಯುನಿಕೇಷನ್ಸ್‌ ಪಾಲನ್ನು ಪಡೆದುಕೊಂಡ ರತನ್ ಟಾಟಾ

ಟಾಟಾರವರು ಸ್ಟಾರ್ಟ್ ಅಪ್ ಮತ್ತು ಟೆಕ್ನಾಲಜಿ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಕಂಪನಿ ತಿಳಿಸಿದೆ. ರನತ್‌ ಟಾಟಾ ರವರು ಹೂಡಿಕೆ ಮಾಡಿದ್ದರೆ ಎಂದು ಸುದ್ದಿ ಹೊರಬಿದ್ದ ಬಳಿಕ ಪ್ರಿತಿಶ್ ನಂದಿ ಕಮ್ಯುನಿಕೇಷನ್ಸ್‌ ಪಿಎನ್‌ಸಿ ಷೇರುಗಳು ದಿನದ ವಹಿವಾಟು ಅಂತ್ಯಕ್ಕೆ ಎನ್‌ಎಸ್‌ಇನಲ್ಲಿ ಪ್ರತಿ ಶೇಕಡಾ 10 ರಷ್ಟು ಹೆಚ್ಚಳವಾಗಿ 25.90 ರೂ.ಗೆ ವಹಿವಾಟು ತಲುಪಿದೆ.

ಪ್ರಿತಿಶ್ ನಂದಿ ಕಮ್ಯುನಿಕೇಷನ್ಸ್‌ ಚಲನಚಿತ್ರ ಮತ್ತು ಮನೋರಂಜನಾ ಕಂಪನಿಯಾಗಿದ್ದು, ಇದನ್ನು ಬಿಎಸ್‌ಇನಲ್ಲಿ 'ಬಿ ಗ್ರೂಪ್' ಕಂಪನಿಯಾಗಿ ಪಟ್ಟಿ ಮಾಡಲಾಗಿದೆ. ಪಿಎನ್‌ಸಿ ಷೇರುಗಳು ಇತ್ತೀಚೆಗೆ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದೆ.

ಟಾಟಾ ಈಗಾಗಲೇ ಅನೇಕ ಸ್ಟಾರ್ಟ್ಅಪ್ ಮತ್ತು ತಂತ್ರಜ್ಞಾನ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಸ್ಟಾರ್ಟ್‌ ಅಪ್‌ಗಳಾದ ಕ್ಯೂರ್. ಫಿಟ್, ಫಸ್ಟ್‌ಕ್ರಿ, ಅರ್ಬನ್ ಕಂಪನಿ, ಟಾರ್ಕ್ ಮೋಟಾರ್ಸ್, ಓಲಾ ಮತ್ತು ಓಲಾ ಎಲೆಕ್ಟ್ರಿಕ್ ಸೇರಿವೆ.

English summary

Ratan Tata Acquires Stake In Pritish Nandy Communications: Know More

Ratan Tata Acquires Stake in Pritish Nandy Communications: In a major development, Chairman Emeritus of Tata Sons and Chairman of Tata Trusts Ratan Tata has invested in Pritish Nandy Communications.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X