For Quick Alerts
ALLOW NOTIFICATIONS  
For Daily Alerts

RBI ರೆಪೋ ದರ 4%ನಲ್ಲೇ ಮುಂದುವರಿಕೆ

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಶುಕ್ರವಾರ (ಫೆಬ್ರವರಿ 5, 2021) ಘೋಷಿಸಿದ ಹಣಕಾಸು ನೀತಿಯಲ್ಲಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ 4%ನಲ್ಲೇ ಮುಂದುವರಿಸಿದೆ. ಇನ್ನು ರಿವರ್ಸ್ ರೆಪೋ ದರ 3.35% ಇರಲಿದೆ. ಈಗಲೂ ಹಣದುಬ್ಬರವು ಆರ್ ಬಿಐ ಪಾಲಿಗೆ ಚಿಂತೆಯಾಗಿದೆ. ಈಗಲೂ ಗುರಿಯ 4%ಗಿಂತ ಮೇಲಿದೆ. ಈ ಕಾರಣಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಕಳೆದ ಕೆಲವು ಹಣಕಾಸು ನೀತಿಗಳಲ್ಲಿ ಬಡ್ಡಿ ದರವನ್ನು ಸ್ಥಿರವಾಗಿರಿಸಿದೆ.

 

ಕೇಂದ್ರ ಬಜೆಟ್ 2021 ವಿಸ್ತೃತವಾಗಿತ್ತು ಮತ್ತು ವಿತ್ತೀಯ ಕೊರತೆ ಹೆಚ್ಚಾಗಿತ್ತು. ಇದರಿಂದ ಹಣದುಬ್ಬರ ಹೆಚ್ಚಾಗಬಹುದು ಎಂಬ ಚಿಂತೆ ನೀತಿ ನಿರೂಪಕರದು. ಹಣಕಾಸು ನೀತಿ ಸಮಿತಿಯು ದರವನ್ನು ನಿರ್ಧರಿಸುತ್ತದೆ. ಕಳೆದ ನಾಲ್ಕು ಬಾರಿಯಿಂದಲೂ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

100 ರೂಪಾಯಿ ನೋಟುಗಳನ್ನು ಹಿಂಪಡೆಯುವುದಿಲ್ಲ: ಆರ್‌ಬಿಐ

ಗ್ರಾಹಕ ದರ ಸೂಚ್ಯಂಕವು (ಸಿಪಿಐ) ಹಣದುಬ್ಬರವು ಡಿಸೆಂಬರ್ 2020ರಲ್ಲಿ 4.59% ಆಗಿತ್ತು. ನವೆಂಬರ್ ನಲ್ಲಿ ಈ ಪ್ರಮಾಣ 6.93% ಇತ್ತು. ಆದರೂ ಡಿಸೆಂಬರ್ ಪ್ರಮಾಣವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇರಿಸಿಕೊಂಡಿದ್ದ ಗುರಿಗಿಂತ ಮೇಲಿನ ಮಟ್ಟದಲ್ಲಿತ್ತು.

RBI ರೆಪೋ ದರ 4%ನಲ್ಲೇ ಮುಂದುವರಿಕೆ

ರೆಪೋ ದರ ಅಂದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ವಾಣಿಜ್ಯ ಬ್ಯಾಂಕ್ ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರ. ಇನ್ನು ರಿವರ್ಸ್ ರೆಪೋ ದರ ಅಂದರೆ ವಾಣಿಜ್ಯ ಬ್ಯಾಂಕ್ ಗಳ ಹಣಕ್ಕೆ ರಿಸರ್ವ್ ಬ್ಯಾಂಕ್ ನೀಡುವ ಬಡ್ಡಿ ದರ.

English summary

RBI Keeps Repo Rate Unchanged At 4 Percent; Maintains Accommodative Stance

RBI announced it's monetary policy on Friday (February 5, 2021. Continued with repo rate 4% unchanged.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X