For Quick Alerts
ALLOW NOTIFICATIONS  
For Daily Alerts

RBI ಹಣಕಾಸು ನೀತಿ ಅಕ್ಟೋಬರ್ 9ಕ್ಕೆ ಪ್ರಕಟ

|

ಅಕ್ಟೋಬರ್ 7ರಿಂದ 9ನೇ ತಾರೀಕಿನ ತನಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಹಣಕಾಸು ನೀತಿ ಸಭೆಯು ನಡೆಯಲಿದೆ. ಅಕ್ಟೋಬರ್ 1ನೇ ತಾರೀಕಿನಂದು ನಿಗದಿಯಾಗಿದ್ದ ಸಭೆಯನ್ನು ಮುಂದೂಡಲಾಗಿತ್ತು. ಹೊಸದಾಗಿ ಆಯ್ಕೆಯಾದ ಸದಸ್ಯರ ಬಗ್ಗೆ ಭದ್ರತೆ ಹಾಗೂ ಹಿನ್ನೆಲೆಯ ಪರಿಶೀಲನೆ ಪ್ರಕ್ರಿಯೆ ಬಾಕಿ ಇತ್ತು.

50,000 ರುಪಾಯಿ ಮೇಲ್ಪಟ್ಟ ಮೊತ್ತದ ಚೆಕ್ ಗೆ ಜನವರಿ 1ರಿಂದ ಹೊಸ ನಿಯಮ

ಆ ಕಾರಣಕ್ಕೆ ದ ಅಕ್ಟೋಬರ್ ತಿಂಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿಯ ಸಭೆಯನ್ನು ಈ ಹಿಂದೆ ಮುಂದೂಡಲಾಗಿತ್ತು. ಇದೀಗ ಹೊಸದಾಗಿ ಆಯ್ಕೆಯಾದ ಸದಸ್ಯರ ಹೆಸರು ಬಹಿರಂಗ ಮಾಡಲಾಗಿದೆ. ಇದರ ಜತೆಗೆ ಹಣಕಾಸು ನೀತಿ ಸಮಿತಿ ಸಭೆಯ ದಿನವನ್ನು ನಿಗದಿ ಮಾಡಲಾಗಿದೆ. ಈ ಹಿಂದೆ ಸಭೆಯು ಅಕ್ಟೋಬರ್ 1ಕ್ಕೆ ನಿಗದಿ ಆಗಿತ್ತು.

RBI ಹಣಕಾಸು ನೀತಿ ಅಕ್ಟೋಬರ್ 9ಕ್ಕೆ ಪ್ರಕಟ

 

ವೈವಿಧ್ಯಮಯವಾದ ಹಿನ್ನೆಲೆ ಇರುವವರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ವೈವಿಧ್ಯವಾದ ದೃಷ್ಟಿಕೋನ ಬರಲಿ ಎಂಬ ನಿರೀಕ್ಷೆ ಮಾಡಲಾಗಿದೆ. ಆರ್ಥಿಕ ತಜ್ಞರು ಹೇಳುವಂತೆ, ತಕ್ಷಣಕ್ಕೆ ಹಣಕಾಸು ನೀತಿ ವಿಚಾರದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆಯನ್ನು ನಿರೀಕ್ಷೆ ಮಾಡುವುದು ಸಾಧ್ಯವಿಲ್ಲ. ಆದರೂ ಅಕ್ಟೋಬರ್ 9ನೇ ತಾರೀಕು ಘೋಷಣೆ ಆಗಲಿರುವ ಆರ್ ಬಿಐ ಹಣಕಾಸು ನೀತಿಯ ಬಗ್ಗೆ ಕಣ್ಣು ನೆಟ್ಟಿದೆ.

English summary

RBI Monetary Policy Committee Meeting From October 7 To 9

RBI monetary policy committee new members meeting from October 7 to 9. Here is the details of reason behind postpone of meeting.
Company Search
COVID-19