For Quick Alerts
ALLOW NOTIFICATIONS  
For Daily Alerts

ಆರ್ಥಿಕತೆ 1.5 ಪರ್ಸೆಂಟ್ ಕುಗ್ಗಬಹುದು ಎನ್ನುತ್ತಿದೆ ಆರ್ ಬಿಐ ಸಮೀಕ್ಷೆ

|

ಕೊರೊನಾದಿಂದಾಗಿ ಗ್ರಾಹಕರ ವಿಶ್ವಾಸವೇ ಕುಸಿದುಹೋಗಿದೆ. ಇದರ ಫಲಿತಾಂಶವಾಗಿ 2020- 21ನೇ ಸಾಲಿಗೆ ಆರ್ಥಿಕತೆ 1.5 ಪರ್ಸೆಂಟ್ ಕುಗ್ಗಬಹುದು ಎಂದು ಗುರುವಾರ ಬಿಡುಗಡೆ ಮಾಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಮೀಕ್ಷೆ ತಿಳಿಸಿದೆ.

 

ಆರ್ ಬಿಐ ಬಿಡುಗಡೆ ಮಾಡಿರುವ ಗ್ರಾಹಕರ ವಿಶ್ವಾಸ ಸಮೀಕ್ಷೆ (ಸಿಸಿಎಸ್) ಪ್ರಕಾರ, 2020ರ ಮೇ ತಿಂಗಳಲ್ಲಿ ಗ್ರಾಹಕರ ವಿಶ್ವಾಸ ಕುಸಿದಿದೆ. ಪ್ರಸ್ತುತ ಸನ್ನಿವೇಶ ಸೂಚ್ಯಂಕ (ಸಿಎಸ್ ಐ) ಐತಿಹಾಸಿಕ ಕನಿಷ್ಠ ಮಟ್ಟವನ್ನು ತಲುಪಿದೆ. ಒಂದು ವರ್ಷದ ಮುಂದಿನ ಭವಿಷ್ಯದ ನಿರೀಕ್ಷೆ ಸೂಚ್ಯಂಕ (ಎಫ್ ಇಐ) ಕೂಡ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಆ ಮೂಲಕ ಆಶಾದಾಯಕ ಅಲ್ಲದ ವಲಯವನ್ನು ಪ್ರವೇಶಿಸಿದೆ.

ಭಾರತದ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಬಗ್ಗೆ ಮೂಡೀಸ್ ಕಳವಳ

ಮತ್ತೊಂದು ಸಮೀಕ್ಷೆ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ದರ 1.5 ಪರ್ಸೆಂಟ್ ಕುಗ್ಗಬಹುದು. ಆದರೆ ಮುಂದಿನ ಆರ್ಥಿಕ ವರ್ಷ ಪರಿಸ್ಥಿತಿ ಸುಧಾರಿಸಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಯೋಜಿಸಿದ್ದ ಸರ್ವೇ ಆಫ್ ಪ್ರೊಫೆಷನಲ್ ಫೋರ್ ಕಾಸ್ಟರ್ಸ್ (ಎಸ್ ಪಿಎಫ್) ತಿಳಿಸಿದೆ.

13 ನಗರಗಳಲ್ಲಿ ಸಮೀಕ್ಷೆ

13 ನಗರಗಳಲ್ಲಿ ಸಮೀಕ್ಷೆ

ಈ ಸಮೀಕ್ಷೆಯನ್ನು ಮೇ 5ರಿಂದ 17, 2020ರ ಮಧ್ಯೆ ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಲಖನೌ, ಮುಂಬೈ ಮತ್ತು ಪಟ್ನಾ ಸೇರಿ 13 ನಗರಗಳಲ್ಲಿ ನಡೆದಿದೆ. ಸಾಮಾನ್ಯ ಆರ್ಥಿಕ ಸನ್ನಿವೇಶದಲ್ಲಿನ ನಿರೀಕ್ಷೆ, ಉದ್ಯೋಗ ಸ್ಥಿತಿಗತಿ, ಒಟ್ಟಾರೆ ದರದ ಸ್ಥಿತಿ ಮತ್ತು ಸ್ವಂತ ಆದಾಯ ಹಾಗೂ ಖರ್ಚಿನ ಬಗ್ಗೆ 5300 ಕುಟುಂಬದಿಂದ ಸಮೀಕ್ಷೆಗಾಗಿ ಅಭಿಪ್ರಾಯ ಸಂಗ್ರಹಿಸಲಾಗಿದೆ.

ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಬಹುದು

ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಬಹುದು

ಆಹಾರ ಪದಾರ್ಥಗಳ ಬೆಲೆಯ ಮೇಲಿನ ಒತ್ತಡ ಜಾಸ್ತಿ ಆಗಬಹುದು ಎಂಬ ನಿರೀಕ್ಷೆಯನ್ನೇ ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಬಹುತೇಕರು ವ್ಯಕ್ತಪಡಿಸಿದ್ದಾರೆ. ಈ ಹಿಂದಿನ ಅವಧಿಗೆ ಹೋಲಿಸಿದರೆ ಮುಂದಿನ ಮೂರು ತಿಂಗಳಲ್ಲಿ ಸಾಮಾನ್ಯ ಬೆಲೆಗಳು ಹಾಗೂ ಹಣದುಬ್ಬರ ಏರಿಕೆ ಆಗಬಹುದು ಎಂದಿದ್ದಾರೆ. ಈ ಸಮೀಕ್ಷೆಯಲ್ಲಿ ನಗರ ಪ್ರದೇಶದ 5761 ಕುಟುಂಬಗಳು ಪಾಲ್ಗೊಂಡಿದ್ದವು.

ಜಿಡಿಪಿ 1.5 ಪರ್ಸೆಂಟ್ ಕುಗ್ಗಬಹುದು
 

ಜಿಡಿಪಿ 1.5 ಪರ್ಸೆಂಟ್ ಕುಗ್ಗಬಹುದು

ರಿಯಲ್ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ (ಜಿಡಿಪಿ) 2020- 21ನೇ ಸಾಲಿನಲ್ಲಿ 1.5 ಪರ್ಸೆಂಟ್ ಕುಗ್ಗಬಹುದು. ಆದರೆ ಮುಂದಿನ ವರ್ಷದಲ್ಲಿ ಅದು ಏರಿಕೆ ಆಗಬಹುದು. ಅದು 7.2 ಪರ್ಸೆಂಟ್ ಪ್ರಗತಿ ದರ ದಾಖಲಿಸಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಾಯೋಜಕತ್ವದ ಎಸ್ ಪಿಎಫ್ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

English summary

RBI Survey Reveals, Indian Economy Contract By 1.5 Percent

According RBI sponsored survey, Indian economy contract by 1.5 percent in 2020- 21.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X