For Quick Alerts
ALLOW NOTIFICATIONS  
For Daily Alerts

ಕೂಡಲೇ ರೀಚಾರ್ಜ್ ಮಾಡಿ ನಂತರ ಪಾವತಿಸಿ: ಜಿಯೊ ಪರಿಚಯಿಸುತ್ತಿದೆ 'ಎಮರ್ಜೆನ್ಸಿ ಡೇಟಾ ಲೋನ್' ಸೌಲಭ್ಯ

|

ರಿಲಯನ್ಸ್ ಇಂಡಸ್ಟ್ರೀಸ್ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಜಿಯೊ ಕಂಪನಿ ಇದೀಗ ತನ್ನ ಬಳಕೆದಾರರಿಗೆ ತಕ್ಷಣವೇ ರೀಚಾರ್ಜ್ ಮಾಡಿ ನಂತರ ಪಾವತಿ ಮಾಡಬಹುದಾದ 'ಎಮರ್ಜೆನ್ಸಿ ಡೇಟಾ ಲೋನ್' ಸೌಲಭ್ಯ ಪರಿಚಯಿಸುತ್ತಿದೆ.

 

ಬೇರೆ ಬೇರೆ ಕಾರಣಗಳಿಗಾಗಿ ಡೇಟಾ ಟಾಪ್‌ಅಪ್‌ ಅನ್ನು ತಕ್ಷಣವೇ ಖರೀದಿಸುವ ಪರಿಸ್ಥಿತಿಯಲ್ಲಿ ಗ್ರಾಹಕರು ಇರುವುದಿಲ್ಲ ಎಂಬುದು ಜಿಯೊಗೆ ತಿಳಿದಿದೆ. ಹೀಗಾಗಿ ಎಮೆರ್ಜೆನ್ಸಿ ಡೇಟಾ ಲೋನ್ ಯೋಜನೆ ಜಾರಿಗೆ ತಂದಿದೆ.

ಜಿಯೊದ ಬಳಕೆದಾರರು ತಮ್ಮ ಹೈಸ್ಪೀಡ್ ಡೇಟಾದ ಕೋಟಾ ಮುಗಿದು ಹೋದಾಗ, ತಕ್ಷಣವೇ ರಿಜಾರ್ಜ್ ಮಾಡಿಕೊಳ್ಳಲು ಸಾಧ್ಯವಾಗದಿರುವ ಪರಿಸ್ಥಿತಿಯಲ್ಲಿ 'ಈಗಲೇ ರೀಚಾರ್ಜ್ ಮಾಡಿಕೊಳ್ಳಿ ಮತ್ತು ನಂತರ ಪಾವತಿಸಿ' ಅನುಕೂಲತೆಯನ್ನು ತುರ್ತು ಡೇಟಾ ಸಾಲ ಸೌಲಭ್ಯ ಒದಗಿಸುತ್ತದೆ.

ರಿಲಯನ್ಸ್ ಜಿಯೋ ಎಮರ್ಜೆನ್ಸಿ ಡೇಟಾ ಲೋನ್ ಸೌಲಭ್ಯ!

ಈ ಸೌಲಭ್ಯದಡಿಯಲ್ಲಿ, ಜಿಯೊ ತನ್ನ ಪ್ರೀಪೇಯ್ಡ್ ಬಳಕೆದಾರರಿಗೆ 1 ಜಿಬಿಯ (ಪ್ರತಿ ಪ್ಯಾಕ್‌ಗೆ 11 ರೂ. ಮೌಲ್ಯ) ಐದು ತುರ್ತು ಡೇಟಾವರೆಗಿನ ಸಾಲ ಪಡೆಯಲು ಅವಕಾಶ ನೀಡುತ್ತದೆ. ತುರ್ತು ಡೇಟಾ ಸೌಲಭ್ಯವನ್ನು ಮೈ ಜಿಯೊ ಆಪ್ (MyJio App) ಮೂಲಕ ಪಡೆದುಕೊಳ್ಳಬಹುದಾಗಿದೆ.

'ತುರ್ತು ಡೇಟಾ ಸಾಲ' ಸೌಲಭ್ಯವು, ತನ್ನ ಬಳಕೆದಾರರಿಗೆ ನಿರಂತರ ಮತ್ತು ತಡೆರಹಿತ ಹೈಸ್ಪೀಡ್ ಡೇಟಾ ಬಳಕೆಯ ಅನುಭವವನ್ನು ಪಡೆಯಲು ಜಿಯೊ ನೀಡಿದ ಸರಳ ಮತ್ತು ಅಷ್ಟೇ ಪರಿಣಾಮಕಾರಿ ದಾರಿಯಾಗಿದೆ.
ಗ್ರಾಹಕರ ಅಪೇಕ್ಷೆಗಳಿಗೆ ಅನುಗುಣವಾಗಿ ಮರುರೂಪಿಸಿದ ಉತ್ಪನ್ನಗಳನ್ನು ಆವಿಷ್ಕರಿಸುವಲ್ಲಿ ಮತ್ತು ತಲುಪಿಸುವಲ್ಲಿ ಜಿಯೊ ಯಾವತ್ತೂ ಮುಂಚೂಣಿಯಲ್ಲಿದೆ. ಇತ್ತೀಚೆಗೆ ಜಿಯೊ ತನ್ನ ನೆಟ್‌ವರ್ಕ್‌ನ ಡೇಟಾ ಸಾಮರ್ಥ್ಯ ಮತ್ತು ವೇಗವನ್ನು ಬಹುತೇಕ ದ್ವಿಗುಣಗೊಳಿಸಿಕೊಂಡಿದೆ.

ಜಿಯೊ ಬಳಕೆದಾರರು ಈಗಾಗಲೇ ಉತ್ತಮ ನೆಟ್‌ವರ್ಕ್ ಸಂಪರ್ಕ ಮತ್ತು ಹೈ ಸ್ಪೀಡ್‌ಗಳನ್ನು ಅನುಭವಿಸಲು ಶುರುಮಾಡಿದ್ದಾರೆ. ಹಲವು ಬಳಕೆದಾರರು ದಿನದಲ್ಲಿ ಬಹುಬೇಗನೇ ತಮ್ಮ ಹೈ ಸ್ಪೀಡ್‌ ಡೇಟಾ ಕೋಟಾವನ್ನು ಬಳಸಿ ಮುಗಿಸಿಬಿಡುತ್ತಾರೆ. ಅವರು ದಿನದ ಉಳಿದ ಸಮಯದಲ್ಲಿ ಹೈ ಸ್ಪೀಡ್‌ ಡೇಟಾ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಎಲ್ಲ ಬಳಕೆದಾರರೂ ತಮ್ಮ ದೈನಂದಿನ ಕೋಟಾ ಖಾಲಿಯಾದ ತಕ್ಷಣವೇ ಹೊಸ ಡೇಟಾ ಟಾಪ್‌-ಅಪ್‌ ಖರೀದಿಸುವ ಪರಿಸ್ಥಿತಿಯಲ್ಲಿ ಇರುವುದಿಲ್ಲ ಎಂದು ಜಿಯೊ ಅರಿತಿದೆ. ಅವರಿಗಾಗಿಯೇ ಈ ಹೊಸ ಸೌಲಭ್ಯವನ್ನು ಪರಿಚಯಿಸಲಾಗುತ್ತಿದೆ.

 

ಎಮರ್ಜೆನ್ಸಿ ಡೇಟಾ ಲೋನ್ ಸೌಲಭ್ಯ ಪಡೆಯುವುದು ಹೇಗೆ?
1) ಮೈ ಜಿಯೊ (Myjio) ಆ್ಯಪ್ ಓಪನ್ ಮಾಡಿ. ಪೇಜ್‌ನ ಎಡತುದಿಯಲ್ಲಿರುವ 'ಮೆನು'ಗೆ ಹೋಗಿ.
2) ಮೊಬೈಲ್‌ ಸರ್ವಿಸ್ ಅಡಿಯಲ್ಲಿರುವ 'ಎಮರ್ಜೆನ್ಸಿ ಡೇಟಾ ಲೋನ್' ಆಯ್ಕೆ ಮಾಡಿ.
3) ಎಮರ್ಜೆನ್ಸಿ ಡೇಟಾ ಲೋನ್ ಬ್ಯಾನರ್‌ ಮೇಲಿರುವ 'ಪ್ರೊಸೀಡ್' ಆಯ್ಕೆ ಕ್ಲಿಕ್ ಮಾಡಿ
4) 'ಗೆಟ್ ಎಮರ್ಜೆನ್ಸಿ ಡೇಟಾ' ಆಯ್ಕೆಯನ್ನು ಆಯ್ದುಕೊಳ್ಳಿ
5) 'ಆಕ್ಟೀವ್ ನೌ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ,
6) ಎಮರ್ಜೆನ್ಸಿ ಡೇಟಾ ಲೋನ್‌ ಸೌಲಭ್ಯ ಆಕ್ಟಿವೇಟ್ ಆಗಿರುತ್ತದೆ.

English summary

Recharge now pay later: Jio launches 'emergency data loan' facility

Reliance Jio introduced Emergency data loan facility for customers. Recharge now and pay later option.
Story first published: Sunday, July 4, 2021, 8:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X