For Quick Alerts
ALLOW NOTIFICATIONS  
For Daily Alerts

ರೆಡ್ಮಿ ನೋಟ್ 9 ಪ್ರೋ ಮೇ 26ರಿಂದ ಮಾರಾಟ ಆರಂಭ

|

ಶಿಯೋಮಿ ಕಂಪೆನಿಯ ರೆಡ್ಮಿ ನೋಟ್ 9 ಪ್ರೋ ಮಾರಾಟವನ್ನು ಭಾರತದಲ್ಲಿ ಮೇ 26ರಿಂದ ಆರಂಭಿಸಲಿದೆ. ಅಂದ ಹಾಗೆ ಈ ಫೋನ್ ಅನ್ನು ಕಳೆದ ಮಾರ್ಚ್ ನಲ್ಲೇ ಬಿಡುಗಡೆ ಮಾಡಲಾಗಿತ್ತು. ಆದರೆ ಕೊರೊನಾ ಕಾರಣಕ್ಕೆ ಲಾಕ್ ಡೌನ್ ಇದ್ದುದರಿಂದ ಮಾರಾಟ ಶುರು ಮಾಡಲು ಸಾಧ್ಯವಾಗಿರಲಿಲ್ಲ. ಆ ನಂತರ ವಿನಾಯಿತಿ ಕೊಟ್ಟ ಮೇಲೆ ಗ್ರೀನ್, ಆರೇಂಜ್ ಹಾಗೂ ರೆಡ್ ಝೋನ್ ನಲ್ಲಿ ಮಾರಾಟ ಶುರು ಮಾಡಲಾಗಿದೆ.

 

ಪರ್ಸನಲ್ ಲೋನ್ ನೀಡಲು ಮುಂದಾದ ಶಿಯೋಮಿ; ಭಾರತದಲ್ಲಿ Mi Credit ಆರಂಭ

ಆರಂಭದಲ್ಲಿ ಗ್ರೀನ್ ಮತ್ತು ಆರೇಂಜ್ ಝೋನ್ ಗಳಲ್ಲಿ ಮಾತ್ರ ಮೊಬೈಲ್ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಮೇ 17, 2020ರ ನಂತರ ರೆಡ್ ಝೋನ್ ಗಳಲ್ಲಿಯೂ ಇ ಕಾಮರ್ಸ್ ವ್ಯವಹಾರಗಳನ್ನು ಪುನರಾರಂಭ ಮಾಡಲಾಗಿದೆ. ರೆಡ್ಮಿ ನೋಟ್ 9 ಪ್ರೋ ಮಾರಾಟವು ಶಿಯೋಮಿಯ ಅಧಿಕೃತ ವೆಬ್ ಸೈಟ್ ಹಾಗೂ ಅಮೆಜಾನ್ ಇಂಡಿಯಾದಲ್ಲಿ ಮೇ 26, 2020ರ ಮಂಗಳವಾರ ಮಧ್ಯಾಹ್ನ 12 ಗಂಟೆಯಿಂದ ಆರಂಭವಾಗುತ್ತದೆ.

ರೆಡ್ಮಿ ನೋಟ್ 9 ಪ್ರೋ ಮೇ 26ರಿಂದ ಮಾರಾಟ ಆರಂಭ

ರೆಡ್ಮಿ ನೋಟ್ 9 ಪ್ರೋ ಬೆಲೆಯು 13,999 ರುಪಾಯಿಗೆ ಆರಂಭವಾಗುತ್ತದೆ. 4GB RAM ಹಾಗೂ 64 GB ಸಂಗ್ರಹ ಸಾಮರ್ಥ್ಯ ಇರುವ ಫೋನ್ ಇದು. ಇನ್ನು 16,999 ರುಪಾಯಿಯ ಇನ್ನೊಂದು ಫೋನ್ ಇದು. ಇದರಲ್ಲಿ 6GB RAM ಮತ್ತು 128 GB ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. 48 MP ಕ್ಯಾಮೆರಾ ಇದ್ದು, ಮೂರು ವಿವಿಧ ಬಣ್ಣಗಳಲ್ಲಿ ಫೋನ್ ಲಭ್ಯವಿದೆ.

English summary

Redmi Note 9 Pro Sale Starts In India From May 26

Xiaomi's Redmi Note 9 Pro mobile phone sales start in India from May 26. Phone available in Amazon and Xiaomi official site.
Story first published: Tuesday, May 26, 2020, 11:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X