ಡೀಲ್ ಬಳಿಕ, ಏರಿಕೆಯತ್ತ ಸಾಗಿದ ರಿಲಯನ್ಸ್, ಜಸ್ಟ್ ಡಯಲ್ ಷೇರುಗಳು
ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (ಆರ್ ಆರ್ ವಿ ಎಲ್) ತನ್ನ ತೆಕ್ಕೆಗೆ ಜಸ್ಟ್ ಡಯಲ್ ಲಿಮಿಟೆಡ್ನ (ಜಸ್ಟ್ ಡಯಲ್) ಏಕೈಕ ನಿಯಂತ್ರಣವನ್ನು ತೆಗೆದುಕೊಂಡಿದೆ. ಸೆಪ್ಟೆಂಬರ್ 1, 2021ರಿಂದ ಈ ಒಪ್ಪಂದ ಅನುಷ್ಠಾನಕ್ಕೆ ಬಂದಿದ್ದು, ಇದರ ಪರಿಣಾಮ ಎರಡು ಸಂಸ್ಥೆಗಳ ಷೇರುಗಳ ಮೇಲಾಗಿದೆ. ಶುಕ್ರವಾರ(ಸೆ.03) ದಂದು ಆರ್ ಐ ಎಲ್
ಜಸ್ಟ್ ಡಯಲ್ನ ಪ್ರತಿ 10 ರೂ ಮೌಲ್ಯದ ಈಕ್ವಿಟಿ ಷೇರುಗಳನ್ನು ಪ್ರತಿ ಷೇರಿಗೆ 1,020 ರೂಪಾಯಿ ದರದಲ್ಲಿ ಒಟ್ಟು 1.31ಕೋಟಿ ಈಕ್ವಿಟಿ ಷೇರುಗಳನ್ನು ಜುಲೈ 20, 2021ರಂದು ವಿ ಎಸ್ ಎಸ್ ಮಣಿ ಅವರಿಂದ ಬ್ಲಾಕ್ ವಿಂಡೋ ಸೌಲಭ್ಯದ ಮೂಲಕ ಷೇರು ವಿನಿಮಯದಲ್ಲಿ ಆರ್ಆರ್ವಿಎಲ್ ಖರೀದಿಸಿದೆ. ಜಸ್ಟ್ ಡಯಲ್ನ ಬಾಕಿ ಪಾವತಿಯ ಈಕ್ವಿಟಿ ಷೇರು ಬಂಡವಾಳದ ಆದ್ಯತಾನಂತರದ ಶೇ 15.63ರಷ್ಟನ್ನು ಈ ಖರೀದಿ ಒಳಗೊಂಡಿದೆ. ಸೆ. 1ರಂದು ಪ್ರತಿ 10 ರೂ ಮೌಲ್ಯದ ಈಕ್ವಿಟಿ ಷೇರುಗಳನ್ನು ಪ್ರತಿ ಷೇರಿಗೆ 1,022.25 ರೂಪಾಯಿ ದರದಲ್ಲಿ ಒಟ್ಟು 2.21 ಕೋಟಿ ಈಕ್ವಿಟಿ ಷೇರುಗಳನ್ನು ಒಟ್ಟಾರೆ, ಜಸ್ಟ್ ಡಯಲ್ನ ಶೇ 41ರಷ್ಟು ಪಾಲನ್ನು ರಿಲಯನ್ಸ್ ತನ್ನದಾಗಿಸಿಕೊಂಡಿದೆ ಎಂದು ಬಿಎಸ್ ಇಗೆ ತಿಳಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ (ಆರ್ ಐ ಎಲ್) ಷೇರುಗಳು ಬಿಎಸ್ ಇಯಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ 2,383.80 ರು ನಂತೆ ಏರುಮುಖದಲ್ಲಿತ್ತು. ಇದಕ್ಕೂ ಮುನ್ನ ದಾಖಲೆಯ 2,369.35.ರು ಕೂಡಾ ಮುಟ್ಟಿತ್ತು. ಹೆಚ್ಚಿನ ವಿವರ ಇಲ್ಲಿ ನೋಡಿ

ಸರಿ ಸುಮಾರು 15,06,315.08 ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿರುವ ಸಂಸ್ಥೆಯ ಷೇರುಗಳು ಶೇ 3.59 ರು ಅಥವಾ 82.45 ರು ಹೆಚ್ಚಳ ಕಂಡಿದೆ. ಇದೇ ವೇಳೆ ಜಸ್ಟ್ ಡಯಲ್ ಷೇರುಗಳು ಶೇ 2.39 ರು ಅಥವಾ 23.40 ರು ಹೆಚ್ಚಳ ಕಂಡು, 1,004.50 ರು ನಂತೆ ವಹಿವಾಟು ನಡೆಸಿದ್ದು ಸುಸ್ಥಿತಿಯಲ್ಲಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಗ್ರೂಪ್ನ ಅಂಗಸಂಸ್ಥೆ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (ಆರ್ಆರ್ವಿಎಲ್ )ಯಾಗಿದೆ. ರಿಲಯನ್ಸ್ ರೀಟೇಲ್ ಭಾರತದ ಅತಿದೊಡ್ಡ ಮತ್ತು ಹೆಚ್ಚು ಲಾಭದಾಯಕ ರೀಟೇಲ್ ಕಂಪನಿ.
ಜಸ್ಟ್ ಡಯಲ್ ಭಾರತದ ಪ್ರಮುಖ ಸ್ಥಳೀಯ ಸರ್ಚ್ ಇಂಜಿನ್ ವೇದಿಕೆಯಾಗಿದೆ. ಇದು ವೆಬ್ಸೈಟ್, ಆಪ್, ಟೆಲಿಫೋನ್, ಪಠ್ಯ, ಸಂಸ್ಥೆ, ಕಚೇರಿ ಹೀಗೆ ಬಹು ವೇದಿಕೆಗಳ ಮೂಲಕ ಭಾರತದಾದ್ಯಂತ ಸೇವೆಗಳನ್ನು ಒದಗಿಸುತ್ತದೆ.