For Quick Alerts
ALLOW NOTIFICATIONS  
For Daily Alerts

ಜಸ್ಟ್‌ ಡಯಲ್ ಖರೀದಿಗೆ ರಿಲಯನ್ಸ್‌ ಮಾತುಕತೆ: 6,600 ಕೋಟಿ ರೂ. ಡೀಲ್

|

ಭಾರತದ ಅತಿದೊಡ್ಡ ಶ್ರೀಮಂತ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ ಜಸ್ಟ್‌ ಡಯಲ್ ಕಂಪನಿಯನ್ನು ಖರೀದಿಸಲು ಮುಂದಾಗಿದ್ದು, ಸುಮಾರು 6,600 ಕೋಟಿ ರೂಪಾಯಿ ಒಪ್ಪಂದದ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.

 

25 ವರ್ಷದ ಹಳೆಯ ಕಂಪನಿಯಾಗಿರುವ ಜಸ್ಟ್ ಡಯಲ್ ಬೋರ್ಡ್ ಸಭೆ ನಾಳೆ ನಡೆಯಲಿದ್ದು, ನಾಳೆಯೇ ಅಂತಿಮ ನಿರ್ಧಾರ ಪ್ರಕಟವಾಗುವ ಸಾಧ್ಯತೆಯಿದೆ. ಭಾರತದ ಲೋಕಲ್ ಸರ್ಚ್ ಇಂಜಿನ್ ಆಗಿರುವ ಜಸ್ಟ್ ಡಯಲ್, ಆನ್ ಲೈನ್ ಶಾಪಿಂಗ್, ಹೋಟೆಲ್, ಸಿನಿಮಾ, ಬಸ್ ಬುಕ್ಕಿಂಗ್ ಸೇರಿದಂತೆ ಹಲವು ಸೇವೆಗಳನ್ನು ನೀಡುತ್ತಿದೆ.

ಅಂಬಾನಿಯ ಟೆಲಿಕಾಂ ಟು ಪೆಟ್ರೋಕೆಮಿಕಲ್ಸ್ ಕಾಂಗ್ಲೋಮರೇಟ್, ಜಸ್ಟ್ ಡಯಲ್ (ಜೆಡಿ) ಅನ್ನು ಅದರ ಸ್ಥಾಪಕ ಪ್ರವರ್ತಕರಿಂದ 800 ರಿಂದ 900 ಮಿಲಿಯನ್ ಡಾಲರ್ ವಹಿವಾಟಿನಲ್ಲಿ ಖರೀದಿಸಲು ಮುಂಚಿತವಾಗಿಯೇ ಮಾತುಕತೆ ನಡೆಸುತ್ತಿದೆ ಎಂದು ಅನೇಕ ಮೂಲಗಳು ತಿಳಿಸಿವೆ. ಈ ವ್ಯವಹಾರವು ಒಮ್ಮೆ ಯಶಸ್ವಿಯಾದರೆ, ರಿಲಯನ್ಸ್ ರಿಟೇಲ್ ತನ್ನದೇ ಆದ ಸ್ಥಳೀಯ ವಾಣಿಜ್ಯ ಮತ್ತು ಪಾವತಿ ವ್ಯವಸ್ಥೆಯನ್ನು ಇನ್ನಷ್ಟು ವೇಗಗೊಳಿಸಲು 25 ವರ್ಷದ ಮಾಹಿತಿ ಹಳೆಯ ಪ್ಯಾನ್ ಇಂಡಿಯಾ ನೆಟ್‌ವರ್ಕ್‌ನ ಡೇಟಾಬೇಸ್ ಅನ್ನು ಹತೋಟಿಗೆ ತೆಗೆದುಕೊಳ್ಳುತ್ತದೆ.

ಜಸ್ಟ್‌ ಡಯಲ್ ಖರೀದಿಗೆ ರಿಲಯನ್ಸ್‌ ಮಾತುಕತೆ

ಜಸ್ಟ್ ಡಯಲ್ ಪ್ರಮೋಟರ್ ವಿಎಸ್‍ಎಸ್ ಮಣಿ ಮತ್ತು ಕುಟುಂಬದ ಸದಸ್ಯರು ಕಂಪನಿಯಲ್ಲಿ ಶೇ.35.5 ಪಾಲು ಹೊಂದಿದ್ದು, ಇದರ ಮೌಲ್ಯವು ಒಟ್ಟು 2,387 ಕೋಟಿ ರೂ. ಆಗಿದೆ.

ರಿಲಯನ್ಸ್ ಇಂಡಸ್ಟ್ರಿಸ್ ಜಸ್ಟ್‌ ಡಯಲ್ ಖರೀದಿಗೆ ಸತತ ಮಾತುಕತೆ ನಡೆಸುತ್ತಲೇ ಬಂದಿದೆ. ಈ ಹಿಂದೆ ಟಾಟಾ ಡಿಜಿಟಲ್ ಸೂಪರ್ ಆಪ್ ಹೂಡಿಕೆ ಸಂಬಂಧ ಟಾಟಾ ಸನ್ಸ್ ಜೊತೆ ಜಸ್ಟ್ ಡಯಲ್ ಮಾತುಕತೆ ನಡೆದಿತ್ತು. ಆದರೆ ಯಾವುದೇ ಫಲಿತಾಂಶ ಕಾಣದೆ ಮಾತುಕತೆ ಅಂತ್ಯವಾಗಿತ್ತು. ಆರ್‌ಐಎಲ್ ಮಣಿಯಿಂದ ಕಂಪನಿಯ ಷೇರು ಖರೀದಿಸುವುದನ್ನು ಸಕ್ರಿಯವಾಗಿ ಪರಿಗಣಿಸುತ್ತಿದೆ ಮತ್ತು ಸಂಸ್ಥೆಯ ಹೆಚ್ಚುವರಿ ಶೇಕಡಾ 26 ರಷ್ಟು ಷೇರುಗಳಿಗೆ ಮುಕ್ತ ಪ್ರಸ್ತಾಪವನ್ನು ಪ್ರಾರಂಭಿಸುತ್ತದೆ, ಇದು ಪ್ರಸ್ತುತ ಬೆಲೆಯಲ್ಲಿ 4,035 ಕೋಟಿ ರೂ. ನಷ್ಟಿದೆ.

 

ಕಳೆದ 10 ತಿಂಗಳಿನಲ್ಲಿ ಜಸ್ಟ್ ಡಯಲ್ ಕಂಪನಿಯ ಷೇರು ಮೌಲ್ಯ ಶೇ.100ಕ್ಕಿಂತ ಹೆಚ್ಚಾಗಿದೆ. ಗುರುವಾರ ಬಿಎಸ್‌ಇನಲ್ಲಿ ಜಸ್ಟ್‌ ಡಯಲ್ ಷೇರು ಶೇ. 3.24ರಷ್ಟು ಅಥವಾ 35 ರೂಪಾಯಿ ಹೆಚ್ಚಾಗಿ 1,114 ರೂ. ತಲುಪಿದೆ.

English summary

Reliance in advanced talks to buy Justdial for Rs 6600 crore

Just Dial share rose 4% today amid reports that Mukesh Ambani-led Reliance Industries is in talks to buy the search engine firm from its founding promoters for $800-900 million
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X