ಒಂದೇ ದಿನದಲ್ಲಿ 83 ಸಾವಿರ ಕೋಟಿ ರುಪಾಯಿ ಬಂಡವಾಳ ನಷ್ಟ ಕಂಡ ರಿಲಯನ್ಸ್
ರಿಲಯನ್ಸ್ ಇಂಡಸ್ಟ್ರೀಸ್ ಸೋಮವಾರದಂದು (ನವೆಂಬರ್ 2, 2020) 11 ಬಿಲಿಯನ್ ಅಮೆರಿಕನ್ ಡಾಲರ್ ಗೂ ಹೆಚ್ಚು ಮಾರುಕಟ್ಟೆ ಮೌಲ್ಯವನ್ನು ನಷ್ಟ ಅನುಭವಿಸಿದೆ. ಷೇರಿನ ಮೌಲ್ಯವು ನಾಲ್ಕು ತಿಂಗಳ ಹಿಂದಿನ ಕನಿಷ್ಠ ಮಟ್ಟಕ್ಕ್ ಕುಸಿದಿದೆ. ಕಂಪೆನಿಯ ತ್ರೈಮಾಸಿಕ ನಿವ್ವಳ ಲಾಭದಲ್ಲ್ 15 ಪರ್ಸೆಂಟ್ ಕುಸಿತ, ಇದರ ಜತೆಗೆ ರೀಟೇಲ್ ಮತ್ತು ಟೆಲಿಕಾಂ ಕಾರ್ಯ ನಿರ್ವಹಣೆಯ ದುರ್ಬಲತೆ ಕಾರಣಕ್ಕೆ ಲಾಭ ಕುಸಿತವಾಗಿದೆ.
ಸೋಮವಾರದಂದು ದಿನದ ಕೊನೆಗೆ ಷೇರಿನ ಬೆಲೆಯು ಬಿಎಸ್ ಇಯಲ್ಲಿ 1877.30 ರುಪಾಯಿಗೆ ವಹಿವಾಟು ಮುಗಿಸಿದೆ. ಈ ಹಂತವನ್ನು ಜುಲೈ 16ನೇ ತಾರೀಕಿನಂದು ತಲುಪಿತ್ತು. 8.62% ಇಳಿದಿತ್ತು. ಮಾರ್ಚ್ 23ರ ನಂತರ ದಾಖಲಾದ ಅತಿ ದೊಡ್ಡ ಕುಸಿತ ಇದು. ಅಂದಹಾಗೆ ಅದೇ ದಿನ ಷೇರಿನ ಬೆಲೆ 9.46% ಕುಸಿತ ಕಂಡಿತ್ತು.
ಅತ್ಯಂತ ಮೌಲ್ಯಯುತ 9 ಕಂಪೆನಿಗಳ ಮಾರುಕಟ್ಟೆ ಮೌಲ್ಯ 1.63 ಲಕ್ಷ ಕೋಟಿ ಢಮಾರ್
ರಿಲಯನ್ಸ್ ಷೇರುಗಳು ಈ ವರ್ಷ ಇಲ್ಲಿಯ ತನಕ 25% ಹೆಚ್ಚಳ ಕಂಡಿದೆ. ಆದರೆ ಸೋಮವಾರದ ಕುಸಿತದಿಂದಾಗಿ ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ನಿವ್ವಳ ಆಸ್ತಿ ಮೌಲ್ಯದಲ್ಲಿ 6.8 ಬಿಲಿಯನ್ ಅಮೆರಿಕನ್ ಡಾಲರ್ ಕೊಚ್ಚಿಹೋದಂತಾಗಿದೆ. ಆ ಮೂಲಕ ವಿಶ್ವದ ಆರನೇ ಶ್ರೀಮಂತ ಎನಿಸಿದ್ದ ಅವರು, 9ಕ್ಕೆ ಕುಸಿತ ಕಂಡಿದ್ದಾರೆ.
ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಈಗ ಮುಕೇಶ್ ಅಂಬಾನಿ ನಿವ್ವಳ ಆಸ್ತಿ 71.5 ಬಿಲಿಯನ್ ಅಮೆರಿಕನ್ ಡಾಲರ್ ಇದೆ. ರಿಲಯನ್ಸ್ ಮಾರುಕಟ್ಟೆ ಮೌಲ್ಯವು 13.52 ಲಕ್ಷ ಕೋಟಿ ರುಪಾಯಿ ಇದ್ದದ್ದು 12.69 ಲಕ್ಷ ಕೋಟಿ ರುಪಾಯಿಗೆ ಕುಸಿದಿದೆ.