For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಜಿಯೋ ಫೈಬರ್ ಡೇಟಾ ಆಫರ್ ಗಳ ಸುರಿಮಳೆ: ಪ್ಲಾನ್ ಡೀಟೇಲ್ಸ್

|

ಈಗ ವಾರಕ್ಕೊಮ್ಮೆ, ಮೂರು ದಿನಕ್ಕೊಮ್ಮೆ ರಿಲಯನ್ಸ್ ಜಿಯೋ ಬಗ್ಗೆಯೇ ಸುದ್ದಿ. ಒಂದೋ ವಿದೇಶದಲ್ಲಿನ ಹೆಸರಾಂತ ಕಂಪೆನಿಗಳು ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಹಣ ಹೂಡಿಕೆ ಮಾಡಿ, ಷೇರು ಖರೀದಿ ಮಾಡುತ್ತಿವೆ ಅಥವಾ ಜಿಯೋದಿಂದ ಗ್ರಾಹಕರಿಗೆ ಅತ್ಯಾಕರ್ಷಕ ಡೇಟಾ, ಕಾಲಿಂಗ್ ಪ್ಲಾನ್ ಗಳನ್ನು ನೀಡಲಾಗುತ್ತಿದೆ.

ಇದೀಗ ಮತ್ತೆ ಜಿಯೋ ಸುದ್ದಿಯಲ್ಲಿದೆ. ಲಾಕ್ ಡೌನ್ ಮಧ್ಯೆ ತನ್ನ ಗ್ರಾಹಕರಿಗೆ ಸಿಕ್ಕಾಪಟ್ಟೆ ಡೇಟಾ ದೊರೆಯುವ ಪ್ಲಾನ್ ಪರಿಚಯಿಸುತ್ತಿದೆ. ಬಳಕೆದಾರರಿಗೆ ಹೆಚ್ಚುವರಿ ಡೇಟಾ ಅನುಕೂಲ ನೀಡುತ್ತಿದೆ. ಹೈ ಸ್ಪೀಡ್ ಡೇಟಾ ಸಿಗುವ ಆಫರ್ ಗಳ ಬಗ್ಗೆ ತನ್ನ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಿರುವ ಜಿಯೋ, ಬ್ರೋಂಜ್ ನಿಂದ ಟೈಟಾನಿಯಂ ತನಕ ವಾರ್ಷಿಕ ಚಂದಾ ಇರುವ ಪ್ಲಾನ್ ಗೆ ಎರಡು ಪಟ್ಟು ಡೇಟಾ ಅನುಕೂಲ ನೀಡಿದೆ. ಏನದು ಆ ಆಫರ್ ಗಳು ಎಂಬ ಮಾಹಿತಿ ಹೀಗಿದೆ.

ಬ್ರೋಂಜ್ ಜಿಯೋ ಫೈಬರ್ ಪ್ಲಾನ್
 

ಬ್ರೋಂಜ್ ಜಿಯೋ ಫೈಬರ್ ಪ್ಲಾನ್

ಬ್ರೋಂಜ್ ವಾರ್ಷಿಕ ಪ್ಲಾನ್ ನಲ್ಲಿ ಸಬ್ ಸ್ಕೈಬರ್ಸ್ ಗೆ 350 GB ಡೇಟಾ ದೊರೆಯುತ್ತದೆ. ಇದೀಗ ಹೊಸ ಅನುಕೂಲವಾಗಿ, ಹೆಚ್ಚುವರಿಯಾಗಿ ತಿಂಗಳ ಡೇಟಾ 100 GB ದೊರೆಯುತ್ತದೆ. ಒಂದು ವೇಳೆ ಬಳಕೆದಾರರು ತಿಂಗಳ ಬಾಡಿಗೆ ಆಧಾರದಲ್ಲಿ ಆಯ್ಕೆ ಮಾಡಿಕೊಂಡರೆ 250 GB ಡೇಟಾ ಅನುಕೂಲ ದೊರೆಯಲಿದ್ದು, ಅದರ ಜತೆಗೆ 100 GB ಪ್ಲಾನ್ ಅನುಕೂಲ ಒಳಗೊಂಡಿರುತ್ತದೆ.

100 GB ಲಾಕ್ ಡೌನ್ ಡಬಲ್ ಡೇಟಾ ಅನುಕೂಲ ಮತ್ತು 50 GB ಡೇಟಾ ಆರಂಭಿಕ ಕೊಡುಗೆಯಾಗಿ ನೀಡಲಾಗುತ್ತಿದೆ. ಡಬಲ್ ಡೇಟಾ ಅನುಕೂಲ ಶೀಘ್ರದಲ್ಲೇ ಮುಗಿಯಲಿದ್ದು, ಲಾಕ್ ಡೌನ್ ನಿರ್ಬಂಧವನ್ನು ನಿಧಾನಕ್ಕೆ ತೆರವು ಮಾಡಲಾಗುತ್ತಿದೆ.

ಸಿಲ್ವರ್ ಜಿಯೋ ಫೈಬರ್ ಪ್ಲಾನ್

ಸಿಲ್ವರ್ ಜಿಯೋ ಫೈಬರ್ ಪ್ಲಾನ್

12 ತಿಂಗಳಿಗೆ ಸಿಲ್ವರ್ ಪ್ಲಾನ್ ಸಬ್ ಸ್ಕ್ರಿಪ್ಷನ್ ಗೆ 800 GB ತಿಂಗಳ ಡೇಟಾ ದೊರೆಯುತ್ತದೆ. ಜತೆಗೆ ವಾರ್ಷಿಕ 200 GB ಬೋನಸ್ ದೊರೆಯುತ್ತದೆ. ಈ ಪ್ಯಾಕೇಜ್ ಗೆ 200 GB ಸಬ್ ಸ್ಕ್ರಿಪ್ಷನ್ ಲಾಭ, 200 GB ಡಬಲ್ ಡೇಟಾ ಲಾಭ, 200 GB ಪ್ರಮೋಷನಲ್ ಡೇಟಾ, 200 GB ವಾರ್ಷಿಕ ಪ್ಲಾನ್ ಅನುಕೂಲ ಇದೆ.

ಇದೇ ರೀತಿ ಗೋಲ್ಡ್ ಪ್ಲಾನ್ ನಲ್ಲಿ ಒಟ್ಟಾರೆಯಾಗಿ ಗ್ರಾಹಕರಿಗೆ 1750 GB ತಿಂಗಳ ಡೇಟಾ ದೊರೆಯುತ್ತದೆ. ಇದರಲ್ಲಿ 500 GB ವಾರ್ಷಿಕ ಪ್ಲಾನ್ ಅನುಕೂಲ, 250 GB ಆರಂಭಿಕ ಡೇಟಾ, 500 GB ಲಾಕ್ ಡೌನ್ ಡಬಲ್ ಡೇಟಾ ಗೇಯ್ನ್ ಮತ್ತು 500 GB ಪ್ಲಾನ್ ಅನುಕೂಲ ದೊರೆಯಲಿದೆ

ಡೈಮಂಡ್ ಜಿಯೋ ಫೈಬರ್ ಪ್ಲಾನ್
 

ಡೈಮಂಡ್ ಜಿಯೋ ಫೈಬರ್ ಪ್ಲಾನ್

ಇನ್ನು ಡೈಮಂಡ್ ಜಿಯೋ ಫೈಬರ್ ಪ್ಲಾನ್ ನಲ್ಲಿ ಬಳಕೆದಾರರಿಗೆ 4000 GB ಹೈ ಸ್ಪೀಡ್ ತಿಂಗಳ ಡೇಟಾ ಅನುಕೂಲ ದೊರೆಯಲಿದೆ. ಯಾರು ಹನ್ನೆರಡು ತಿಂಗಳ ಸಬ್ ಸ್ಕ್ರಿಪ್ಷನ್ ಆಯ್ಕೆ ಮಾಡಿಕೊಳ್ಳುತ್ತಾರೋ ಅವರಿಗೆ ತಿಂಗಳ ಡೇಟಾ ಅನುಕೂಲ 1250 ಜಿಬಿ ದೊರೆಯುತ್ತದೆ.

ಆರಂಭಿಕ ಡೇಟಾ ಅನುಕೂಲ 250 GB, ಲಾಕ್ ಡೌನ್ ಡಬಲ್ ಡೇಟಾ 1250 GB ಮತ್ತು ಪ್ಲಾನ್ ಅನುಕೂಲ 1250 GB ದೊರೆಯುತ್ತದೆ.

ಪ್ಲಾಟಿನಂ ಪ್ಲಾನ್ ನಲ್ಲಿ ವಾರ್ಷಿಕ ಚಂದಾದಾರರಿಗೆ ಒಟ್ಟಾರೆ ತಿಂಗಳ ಅನುಕೂಲ 7500 GB ದೊರೆಯುತ್ತದೆ.

ಅದರಲ್ಲಿ ದೀರ್ಘಾವಧಿ ಯೋಜನೆಗಳ ಖರೀದಿದಾರರಿಗೆ ವಾರ್ಷಿಕ ಅನುಕೂಲ 2500 GB ತಿಂಗಳಿಗೆ ದೊರೆಯುತ್ತದೆ. ಈ ಪ್ಯಾಕೇಜ್ ನಲ್ಲಿ ಸರ್ವೀಸ್ ಲಾಭ 2500 GB, ಡಬಲ್ ಡೇಟಾ ಲಾಭ 2500 GB ಹಾಗೂ ಲಾಕ್ ಡೌನ್ ಮತ್ತು ವಾರ್ಷಿಕ ಡೇಟಾ ಅನುಕೂಲ 2500 GB ದೊರೆಯುತ್ತದೆ.

ಟೈಟಾನಿಯಂ ಜಿಯೋ ಫೈಬರ್ ಪ್ಲಾನ್

ಟೈಟಾನಿಯಂ ಜಿಯೋ ಫೈಬರ್ ಪ್ಲಾನ್

ಈ ಟೈಟಾನಿಯಂ ಜಿಯೋ ಫೈಬರ್ ಪ್ಲಾನ್ ನಲ್ಲಿ ತಿಂಗಳ ಡೇಟಾ ಅನುಕೂಲ 15,000 GB ದೊರೆಯುತ್ತದೆ. ಇದರಲ್ಲಿ ಪ್ಲಾನ್ ಅನುಕೂಲ 5,000 GB, ಲಾಕ್ ಡೌನ್ ಡಬಲ್ ಡೇಟಾ ಅನುಕೂಲ 5,000 GB ಹಾಗೂ ವಾರ್ಷಿಕ ಪ್ಲಾನ್ ಅನುಕೂಲ 5,000 GB ಇದೆ.

ಯಾರು ವಾರ್ಷಿಕ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳುತ್ತಾರೋ ಅಂಥವರಿಗೆ ಶಿಫಾರಸು ಮಾಡಿದ ಡೇಟಾದ ಎರಡು ಪಟ್ಟು ದೊರೆಯಲಿದೆ.

ಆರಂಭಿಕ ಡೇಟಾವನ್ನು ಯೋಜನೆಗಳ ಜತೆಗೆ ಸೇರಿಸಿದ್ದು, ಆರು ತಿಂಗಳ ತನಕ ಮಾನ್ಯತೆ ಹೊಂದಿರುತ್ತದೆ. ಎಲ್ಲ ಪ್ಲಾನ್ ಗಳಲ್ಲಿ ಇರುವ ಡಬಲ್ ಡೇಟಾ ತಾತ್ಕಾಲಿಕ ಮಾತ್ರ. ಯಾವಾಗ ಲಾಕ್ ಡೌನ್ ತೆರವು ಮಾಡಲಾಗುತ್ತದೋ ಆಗ ಇವನ್ನೂ ತೆಗೆಯಲಾಗುತ್ತದೆ.

English summary

Reliance Jio Fiber Offers During Lock Down: Here Is The Details

Reliance Jio fiber offering many offers during Corona lock down period. Here is the complete data pack plans.
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more