For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಜಿಯೋದಿಂದ ಹೊಸ ಪ್ಲಾನ್ ಪರಿಚಯ; ಬಳಕೆದಾರರಿಗೆ ಡೇಟಾ ಸುಗ್ಗಿ

|

ಜಾಸ್ತಿ ಡೇಟಾ ಬಳಕೆ ಮಾಡುವವರಿಗಾಗಿ ರಿಲಯನ್ಸ್ ಜಿಯೋದಿಂದ ಹೊಸ ಪ್ಲಾನ್ ನೀಡುತ್ತಿದೆ. ಈ ಹೊಸ ಪ್ಲಾನ್ ದರ 598 ರುಪಾಯಿ. ಇದು ಹೆಚ್ಚುವರಿ ಅನುಕೂಲಗಳನ್ನು ಸಹ ಒದಗಿಸುತ್ತದೆ. ಈ ಹೊಸ ಪ್ಲಾನ್ ಈಗಾಗಲೇ ರಿಲಯನ್ಸ್ ಜಿಯೋ ವೆಬ್ ಸೈಟ್ ನಲ್ಲಿ ಲಭ್ಯ ಇದೆ. 598 ರುಪಾಯಿಯ ರಿಲಯನ್ಸ್ ಜಿಯೋ ಈ ಆಫರ್ ನಿತ್ಯವೂ 2GB ಡೇಟಾದಂತೆ 56 ದಿನಗಳ ಕಾಲ 112 ಜಿಬಿ ಡೇಟಾ ನೀಡುತ್ತದೆ.

ಒಂದು ಸಲ ಪೂರ್ಣವಾಗಿ ಡೇಟಾ ಬಳಕೆ ಮಾಡಿದ ನಂತರ ವೇಗವು 64Kbpsಗೆ ಇಳಿಕೆ ಆಗುತ್ತದೆ. ಇನ್ನು ದಿನಕ್ಕೆ ನೂರು ಮೆಸೇಜ್ ಉಚಿತ ಇದೆ. ಈ ಹೊಸ ಪ್ಯಾಕ್ ನಲ್ಲಿ ಜಿಯೋ ಆಪ್ಸ್ ಕಾಂಪ್ಲಿಮೆಂಟರಿಯಾಗಿ ಸಿಗುತ್ತದೆ. ಈ ಪ್ಲಾನ್ ಅನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅತಿ ಮುಖ್ಯ ಕಾರಣ ಆಗುವುದು 399 ರುಪಾಯಿಯ ಡಿಸ್ನಿ+ ಹಾಟ್ ಸ್ಟಾರ್ ಸಬ್ ಸ್ಕ್ರಿಪ್ಷನ್ ಪ್ಲಾನ್ ಒಂದು ವರ್ಷಕ್ಕೆ ಉಚಿತವಾಗಿ ದೊರೆಯುತ್ತದೆ.

ಐಪಿಎಲ್ ಮ್ಯಾಚ್ ನೋಡುವವರಿಗಾಗಿ ಪ್ಲಾನ್
 

ಐಪಿಎಲ್ ಮ್ಯಾಚ್ ನೋಡುವವರಿಗಾಗಿ ಪ್ಲಾನ್

ಮುಖ್ಯವಾಗಿ ಡಿಸ್ನಿ+ ಹಾಟ್ ಸ್ಟಾರ್ ನಲ್ಲಿ ಐಪಿಎಲ್ ಮ್ಯಾಚ್ ಗಳನ್ನು ನೇರವಾಗಿ ವೀಕ್ಷಿಸಲು ಬಯಸುವವರಿಗಾಯೇ ಇದನ್ನು ರೂಪಿಸಿರುವಂತಿದೆ. ಇತರ ಪ್ಲಾನ್ ನಲ್ಲಿಯೂ ರಿಲಯನ್ಸ್ ಜಿಯೋ ಡಿಸ್ನಿ+ ಹಾಟ್ ಸ್ಟಾರ್ ಸಬ್ ಸ್ಕ್ರಿಪ್ಷನ್ ನೀಡುತ್ತದೆ. 499 ರುಪಾಯಿಗಳ ಪ್ಲಾನ್ ಇದ್ದು, ಮುಖ್ಯವಾಗಿ ಕ್ರಿಕೆಟ್ ಪ್ಲಾನ್ ಇದಾಗಿದೆ. ಈ ಪ್ಯಾಕ್ 56 ದಿನಗಳ ಕಾಲ ವ್ಯಾಲಿಡಿಟಿ ಇರುತ್ತದೆ. ನಿತ್ಯ 1.5GB ಡೇಟಾ ದೊರೆಯುತ್ತದೆ. ಆದರೆ ಈ ಪ್ಲಾನ್ ನಲ್ಲಿ ವಾಯ್ಸ್ ಹಾಗೂ ಮೆಸೇಜ್ ಬಾಕಿ ಸಿಗಲ್ಲ. ಇದರಲ್ಲೂ ಜಿಯೋ ಆಪ್ಸ್ ಕಾಂಪ್ಲಿಮೆಂಟರಿ ಸಿಗುತ್ತದೆ.

28 ದಿನಗಳ ವ್ಯಾಲಿಡಿಟಿ, ನಿತ್ಯ 3GB ಡೇಟಾ

28 ದಿನಗಳ ವ್ಯಾಲಿಡಿಟಿ, ನಿತ್ಯ 3GB ಡೇಟಾ

ಇನ್ನೊಂದು ಪ್ಲಾನ್ 401 ರುಪಾಯಿಗಳದಾಗಿದ್ದು, 28 ದಿನಗಳ ವ್ಯಾಲಿಡಿಟಿಯೊಂದಿಗೆ 90GB ಡೇಟಾ ಸಿಗುತ್ತದೆ. ಅಂದರೆ ನಿತ್ಯ 3GB ಡೇಟಾ ಹಾಗೂ ಹೆಚ್ಚುವರಿ ಆರು ಜಿಬಿ ಡೇಟಾ ಸಿಗುತ್ತದೆ. ಇದರಲ್ಲೂ ಡಿಸ್ನಿ+ ಹಾಟ್ ಸ್ಟಾರ್ ಸಬ್ ಸ್ಕ್ರಿಪ್ಷನ್ ಸಿಗಲಿದೆ. 777 ರುಪಾಯಿ ಪ್ಲಾನ್ 84 ದಿನಗಳ ವ್ಯಾಲಿಡಿಟಿಗೆ 131GB ಡೇಟಾ (ದಿನಕ್ಕೆ 1.5 ಜಿಬಿಯಂತೆ) ದೊರೆಯುತ್ತದೆ. ಇದರಲ್ಲೂ ಡಿಸ್ನಿ+ ಸಬ್ ಸ್ಕ್ರಿಪ್ಷನ್ ಪ್ಲಾನ್ ದೊರೆಯುತ್ತದೆ.

2599 ರುಪಾಯಿಯ ಪ್ಲಾನ್ 365 ದಿನಗಳ ವ್ಯಾಲಿಡಿಟಿ

2599 ರುಪಾಯಿಯ ಪ್ಲಾನ್ 365 ದಿನಗಳ ವ್ಯಾಲಿಡಿಟಿ

ದೀರ್ಘಾವಧಿ ಬಳಕೆಗಾಗಿ 2599 ರುಪಾಯಿಯ ಪ್ಲಾನ್ ಇದ್ದು, 365 ದಿನಗಳ ವ್ಯಾಲಿಡಿಟಿ ಇರಲಿದೆ. ಇದಕ್ಕೆ 740 ಜಿಬಿ ಡೇಟಾ (ದಿನಕ್ಕೆ 1.5 ಜಿಬಿಯಂತೆ) ದೊರೆಯುತ್ತದೆ. ಡಿಸ್ನಿ+ ಹಾಟ್ ಸ್ಟಾರ್ ಸಬ್ ಸ್ಕ್ರಿಪ್ಷನ್ ಪ್ಲಾನ್ ದೊರೆಯುತ್ತದೆ. ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ ಕಂಪೆನಿ ರಿಲಯನ್ಸ್ ಜಿಯೋಗೆ 35 ಕೋಟಿಗೂ ಹೆಚ್ಚು ಚಂದಾದಾರರಿದ್ದಾರೆ.

English summary

Reliance Jio New Plan To Offer Disney Hotstar Subscription And Daily 2 GB Data

Reliance Jio offers new plan with Disney+ Hotstar free subscription with 2GB daily data. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X