For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಜಿಯೋ: ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ+ಹಾಟ್‌ಸ್ಟಾರ್ ಉಚಿತ

|

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಬಂಪರ್ ಯೋಜನೆಯನ್ನು ಹೊತ್ತು ತಂದಿದೆ. ಜಿಯೋ ಪೋಸ್ಟ್‌ ಪೇಯ್ಡ್‌ ಮತ್ತು ಪ್ರಿಪೇಯ್ಡ್‌ ಗ್ರಾಹಕರಿಗೆ ಯೋಜನೆಯ ಜೊತೆಗೆ ಉಚಿತವಾಗಿ ಒಟಿಟಿ ಸೇವೆಯನ್ನು ಒದಗಿಸಲಿದೆ.

 

ಹೌದು, ಅಗ್ರಮಾನ್ಯ ಟೆಲಿಕಾಂ ಕಂಪನಿಗಳಿಗೆ ದೈತ್ಯ ಸ್ಪರ್ಧಾಳುವಾಗಿರುವ ಜಿಯೋ ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಯೋಜನೆಗಳ ಚಂದಾದಾರರಿಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ. ಅದರಲ್ಲೂ ಪ್ರಿಪೇಯ್ಡ್ ಬಳಕೆದಾರರು ಕೂಡ ಕೆಲವು ಯೋಜನೆಗಳೊಂದಿಗೆ ಡಿಸ್ನಿ + ಹಾಟ್‌ಸ್ಟಾರ್‌ನಿಂದ ಉಚಿತ ಚಂದಾದಾರಿಕೆ ಪಡೆಯಬಹುದಾಗಿದೆ.

ಪೋಸ್ಟ್ ಪೇಯ್ಡ್ ಯೋಜನೆಗೆ 3 ಉಚಿತ ಸೇವೆಗಳು

ಪೋಸ್ಟ್ ಪೇಯ್ಡ್ ಯೋಜನೆಗೆ 3 ಉಚಿತ ಸೇವೆಗಳು

ರಿಲಯನ್ಸ್ ಜಿಯೋ ನೀಡುವ ಜಿಯೋಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆಗಳು ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನಂತಹ ಕೆಲವು ಜನಪ್ರಿಯ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ನೀಡುತ್ತವೆ. ಭಾರತದಲ್ಲಿ ಒಟಿಟಿ ಜಾಗದಲ್ಲಿ ಪ್ರಾಬಲ್ಯ ಹೊಂದಿರುವ ಈ ಮೂರು ವೇದಿಕೆಗಳ ಹೊರತಾಗಿ, ಜಿಯೋ ತನ್ನದೇ ಆದ ಜಿಯೋ ಟಿವಿ ಮತ್ತು ಜಿಯೋ ಸಿನೆಮಾ ಉಚಿತ ಪ್ರವೇಶವನ್ನು ಒದಗಿಸುತ್ತದೆ. ಹಾಗಿದ್ದರೆ ಯಾವೆಲ್ಲಾ ಪೋಸ್ಟ್‌ ಪೇಯ್ಡ್‌ ಯೋಜನೆಗಳಲ್ಲಿ ಈ ಮೂರು ಒಟಿಟಿ ಸೇವೆಗಳು ಉಚಿತವಾಗಿ ಸಿಗಲಿದೆ ಎಂಬುದನ್ನ ಮುಂದೆ ತಿಳಿಯಿರಿ

399 ರೂಪಾಯಿ ಜಿಯೋಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆ

399 ರೂಪಾಯಿ ಜಿಯೋಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆ

ಗ್ರಾಹಕರಿಗೆ ಲಭ್ಯವಿರುವ ಅತ್ಯಂತ ಅಗ್ಗದ ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆಗಳಲ್ಲಿ ಇದು ಮೊದಲನೆಯದಾಗಿದೆ. ಈ ಯೋಜನೆಯು 75 ಜಿಬಿ ಡೇಟಾವನ್ನು ನೀಡಲಿದ್ದು, ಗರಿಷ್ಠ 200 ಜಿಬಿ ಡೇಟಾ ರೋಲ್‌ಓವರ್‌ನೊಂದಿಗೆ ನೀಡುತ್ತದೆ. (ಬಾಕಿ ಡೇಟಾವನ್ನು ಮುಂದಿನ ತಿಂಗಳಿಗೆ ಕ್ಯಾರಿ ಮಾಡಬಹುದು)

ಇನ್ನು 75 ಜಿಬಿ ಡೇಟಾದ ಮಿತಿಯ ನಂತರ, ಬಳಕೆದಾರರು ಪ್ರತಿ ಜಿಬಿಗೆ 10 ರೂಪಾಯಿ ದರದಲ್ಲಿ ಡೇಟಾವನ್ನು ಖರೀದಿಸಬೇಕಾಗುತ್ತದೆ (ಎಲ್ಲಾ ಯೋಜನೆಗಳಿಗೆ ಒಂದೇ ಬೆಲೆ). ಯೋಜನೆಯು ಅನ್‌ಲಿಮಿಟೆಡ್ ಧ್ವನಿ ಕರೆಗಳು ಮತ್ತು ದಿನಕ್ಕೆ 100 ಎಸ್‌ಎಂಎಸ್ ಸಹ ನೀಡುತ್ತದೆ. ಇದಲ್ಲೆ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆ 1 ವರ್ಷಕ್ಕೆ ಮಾನ್ಯವಾಗಿರುತ್ತದೆ.

599 ರೂಪಾಯಿ ಯೋಜನೆ
 

599 ರೂಪಾಯಿ ಯೋಜನೆ

ಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆಯ ಬಿಲ್ಲಿಂಗ್ ಅವಧಿಯಲ್ಲಿ ಗರಿಷ್ಠ 100 ಜಿಬಿ ಡೇಟಾವನ್ನು ಹಾಗೂ 200 ಜಿಬಿಯ ಗರಿಷ್ಠ ಡೇಟಾ ರೋಲ್‌ಓವರ್ ಅನ್ನು ನೀಡುತ್ತದೆ. ನಿರ್ದಿಷ್ಟ ಮಿತಿ ಮುಗಿದ ನಂತರ ಬಳಕೆದಾರರಿಗೆ ಪ್ರತಿ ಜಿಬಿಗೆ 10 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಇದಲ್ಲದೆ, ಯೋಜನೆಯನ್ನು ಜಿಯೋ ಪೋಸ್ಟ್‌ಪೇಯ್ಡ್ ಸಂಪರ್ಕವನ್ನು ಬಳಸಿಕೊಂಡು ಹೆಚ್ಚುವರಿ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಬಹುದು.

799 ರೂಪಾಯಿ ಯೋಜನೆ

799 ರೂಪಾಯಿ ಯೋಜನೆ

ಈ ಯೋಜನೆಯು ಪ್ರತಿ ಬಿಲ್ಲಿಂಗ್ ಅವಧಿಯಲ್ಲಿ ಗರಿಷ್ಠ 150 ಜಿಬಿ ಡೇಟಾವನ್ನು ಒದಗಿಸುತ್ತದೆ ಮತ್ತು 200 ಜಿಬಿ ಡೇಟಾ ರೋಲ್‌ಓವರ್ ಅನ್ನು ಸಹ ನೀಡುತ್ತದೆ. ಯೋಜನೆಯ ಪ್ರಯೋಜನಗಳನ್ನು ಫ್ಯಾಮಿಲಿ ಪ್ಲಾನ್‌ ಅಡಿಯಲ್ಲಿ 2 ಹೆಚ್ಚುವರಿ ಪೋಸ್ಟ್‌ಪೇಯ್ಡ್ ಸಂಪರ್ಕಗಳೊಂದಿಗೆ ಹಂಚಿಕೊಳ್ಳಬಹುದು.

999 ರೂಪಾಯಿ ಯೋಜನೆ

999 ರೂಪಾಯಿ ಯೋಜನೆ

ಈ ಯೋಜನೆಯು ಪ್ರತಿ ಬಿಲ್ಲಿಂಗ್ ಅವಧಿಯಲ್ಲಿ ಗರಿಷ್ಠ 200 ಜಿಬಿ ನೀಡುತ್ತದೆ ಮತ್ತು ಕುಟುಂಬ ಯೋಜನೆಯಡಿ 3 ಹೆಚ್ಚುವರಿ ಸಿಮ್ ಕಾರ್ಡ್‌ಗಳನ್ನು ನೀಡುತ್ತದೆ. ಗರಿಷ್ಠ ಡೇಟಾ ರೋಲ್‌ಓವರ್ 500 ಜಿಬಿ ವರೆಗೆ ಕ್ಯಾರಿ ಮಾಡಬಹುದು.

1499 ರೂಪಾಯಿ ಯೋಜನೆ

1499 ರೂಪಾಯಿ ಯೋಜನೆ

ಅತ್ಯಂತ ದುಬಾರಿ ಯೋಜನೆಗಳಲ್ಲಿ ಒಂದಾಗಿರುವ ಈ ಪೋಸ್ಟ್‌ಪೇಯ್ಡ್‌ ಬಿಲ್ಲಿಂಗ್ ಅವಧಿಯಲ್ಲಿ 300 ಜಿಬಿ ಡೇಟಾವನ್ನು ಒದಗಿಸುತ್ತದೆ. ಬಳಕೆದಾರರು ಮುಂದಿನ ಬಿಲ್ಲಿಂಗ್ ಅವಧಿಯಲ್ಲಿ ಗರಿಷ್ಠ 500 ಜಿಬಿಯನ್ನು ಕ್ಯಾರಿ ಮಾಡಬಹುದು. ಆದಾಗ್ಯೂ, ಈ ಯೋಜನೆಯು ಕುಟುಂಬ ಯೋಜನೆಯಡಿ ಹೆಚ್ಚುವರಿ ಅವಕಾಶ ನೀಡುವುದಿಲ್ಲ.

ಪ್ರಿಪೇಯ್ಡ್ ಬಳಕೆದಾರರಿಗೆ ಡಿಸ್ನಿ + ಹಾಟ್‌ಸ್ಟಾರ್ ಕೊಡುಗೆ

ಪ್ರಿಪೇಯ್ಡ್ ಬಳಕೆದಾರರಿಗೆ ಡಿಸ್ನಿ + ಹಾಟ್‌ಸ್ಟಾರ್ ಕೊಡುಗೆ

2,599 ರೂ. ಯೋಜನೆ

598 ರೂ. ಯೋಜನೆ

777 ರೂ. ಯೋಜನೆ

401 ರೂ. ಯೋಜನೆ

ಈ ಮೇಲಿನ ಪ್ರಿಪೇಯ್ಡ್ ಯೋಜನೆಗಳಿಗೆ ಡಿಸ್ನಿ + ಹಾಟ್‌ಸ್ಟಾರ್ ಉಚಿತ ಚಂದಾದಾರಿಕೆ ಲಭ್ಯವಿದೆ.

English summary

JioPostPaid Plans that offers Amazon Prime, Disney+ Hotstar, Netflix subscription for free

Reliance Jio offers added benefits to subscribers of postpaid and prepaid plans. These benefits include high speed data as well as access to various OTT streaming platforms.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X