For Quick Alerts
ALLOW NOTIFICATIONS  
For Daily Alerts

ಜಿಯೋ ಫೋನ್ 2 ಸಿಗಲಿದೆ ತಿಂಗಳ ಕಂತು 141 ರು.ಗೆ; ಏನೇನು ಫೀಚರ್ಸ್?

|

ರಿಲಯನ್ಸ್ ಜಿಯೋದಿಂದ ಜಿಯೋ ಫೋನ್ 2 ಫೀಚರ್ ಫೋನ್ ಅನ್ನು ತಿಂಗಳ ಕಂತು 141 ರುಪಾಯಿಗೆ ನೀಡುತ್ತಿದೆ. ಈ ಹೊಸ ಇಎಂಐ ಕೊಡುಗೆಯು ಕೃಷ್ಣ ಜನ್ಮಾಷ್ಟಮಿಯ ಪ್ರಯಕ್ತ ನೀಡಲಾಗುತ್ತಿದೆ. ಜಿಯೋ ಫೋನ್ 2 ಬೆಲೆಯನ್ನು 2,999 ರುಪಾಯಿಗೆ ನಿಗದಿ ಮಾಡಲಾಗಿದೆ. ಮತ್ತು ಈ ಕೊಡುಗೆಯನ್ನು ಕ್ರೆಡಿಟ್ ಕಾರ್ಡ್ ಗಳಿಗೆ ಮಾತ್ರ ನೀಡಲಾಗುತ್ತಿದೆ.

ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಕ್ವಾಲ್ ಕಾಮ್ ವೆಂಚರ್ಸ್ 730 ಕೋಟಿ ಹೂಡಿಕೆ

ಬುಕ್ಕಿಂಗ್ ಮೊತ್ತ 99 ರುಪಾಯಿ ನೀಡಿದರೆ, ಮೂರರಿಂದ ಐದು ದಿನಗಳೊಳಗೆ ಮೊಬೈಲ್ ಫೋನ್ ಖರೀದಿದಾರರ ಕೈ ಸೇರುತ್ತದೆ. ಜಿಯೋ ಫೋನ್ 2ನಲ್ಲಿ 2.4 ಇಂಚಿನ QWGA ಡಿಸ್ ಪ್ಲೇ ಇರುತ್ತದೆ. KaiOSನಲ್ಲಿ ಇದು ಕಾರ್ಯ ನಿರ್ವಹಿಸುತ್ತದೆ. ವಾಟ್ಸ್ ಆಪ್, ಯೂ ಟ್ಯೂಬ್, ಫೇಸ್ ಬುಕ್ ಮತ್ತು ಗೂಗಲ್ ಮ್ಯಾಪ್ಸ್ ನಂಥ ಅಪ್ಲಿಕೇಷನ್ ಗಳು ಇರಲಿವೆ.

ಜಿಯೋ ಫೋನ್ 2 ಸಿಗಲಿದೆ ತಿಂಗಳ ಕಂತು 141 ರು.ಗೆ; ಏನೇನು ಫೀಚರ್ಸ್?

 

ಈ ಜಿಯೋಫೋನ್ 2ರ ಮುಖ್ಯ ಸಂಗತಿ ಏನೆಂದರೆ, QWERTY ಕೀಪ್ಯಾಡ್ ಇರುತ್ತದೆ. ಫೋನ್ ನಲ್ಲಿ 2000 mAh ಬ್ಯಾಟರಿ ಇದ್ದು, 24 ಭಾರತೀಯ ಭಾಷೆಗಳನ್ನು ಸಪೋರ್ಟ್ ಮಾಡುತ್ತದೆ. ಇದರ ಜತೆಗೆ ಧ್ವನಿ ಕಮ್ಯಾಂಡ್ ಸಹ ಸ್ವೀಕರಿಸುತ್ತದೆ. 512 MB RAM, 4 GB ಸಂಗ್ರಹ ಸಾಮರ್ಥ್ಯ, ಮೈಕ್ರೋ ಎಸ್ ಡಿ ಕಾರ್ಡ್ 128 GB ತನಕ ಸಪೋರ್ಟ್ ಮಾಡುತ್ತದೆ. ಡ್ಯುಯಲ್ ನ್ಯಾನೋ ಸಿಮ್, 4G VoLTE ಸಪೋರ್ಟ್ ಮಾಡುತ್ತದೆ.

English summary

Reliance Jio announces new offer; now you can get the Jio Phone 2 in Rs 141

Reliance Jio announces Jio phone 2 with monthly installment of 141 rupees. Here is the complete details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X