For Quick Alerts
ALLOW NOTIFICATIONS  
For Daily Alerts

ಏರ್‌ಟೆಲ್‌, ವೋಡಾಫೋನ್ ನಂತರ ಜಿಯೋ ದರ ಎಷ್ಟು ಏರಿಕೆ?

|

ಮುಂಬೈ, ನವೆಂಬರ್ 29: ಭಾರತದ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಗಳು ತಮ್ಮ ಪ್ರೀಪೇಯ್ಡ್ ಗ್ರಾಹಕರಿಗೆ ಹೊಸ ಆಫರ್ ಜೊತೆಗೆ ದರ ಪಟ್ಟಿಯನ್ನು ಪರಿಷ್ಕರಿಸುತ್ತಿವೆ. ಭಾರ್ತಿ ಏರ್‌ಟೆಲ್, ವೋಡಾಫೋನ್ ಐಡಿಯಾ ನಂತರ ರಿಲಯನ್ಸ್ ಜಿಯೋಪ್ರಿಪೇಯ್ಡ್ ದರ ಪಟ್ಟಿಯೂ ಬದಲಾಗಿದೆ. ಶೇ 21ರಷ್ಟು ದರ ಏರಿಕೆ ಪ್ರಕಟಿಸಿದೆ.

 

ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್), ಭಾರತದಲ್ಲಿ ಪ್ರಿಪೇಯ್ಡ್ ಬಳಕೆದಾರರಿಗಾಗಿ ತನ್ನ ಹೊಸ ಶುಲ್ಕ ಯೋಜನೆಗಳನ್ನು ಪ್ರಕಟಿಸಿದ್ದು, ಹೊಸ ಯೋಜನೆಗಳು ನವೆಂಬರ್ 25ರಿಂದ ಜಾರಿಗೆ ಬರಲಿದೆ ಎಂದು ಸಂಸ್ಥೆ ಹೇಳಿದೆ. ಇದೀಗ ಹೊಸ ಅನ್‌ಲಿಮಿಟೆಡ್ ಪ್ಲಾನ್‌ಗಳು ಡಿಸೆಂಬರ್ 1, 2021ರಿಂದ ಲಭ್ಯವಿರಲಿವೆ ಹಾಗೂ ಅಸ್ತಿತ್ವದಲ್ಲಿರುವ ಎಲ್ಲ ಟಚ್‌ಪಾಯಿಂಟ್‌ಗಳು ಮತ್ತು ಚಾನಲ್‌ಗಳಿಂದಲೂ ಅವನ್ನು ಪಡೆದುಕೊಳ್ಳಬಹುದಾಗಿದೆ.

ಏರ್‌ಟೆಲ್ ನಂತರ ವೋಡಾಫೋನ್ ಪ್ರಿಪೇಯ್ಡ್ ದರ ಪಟ್ಟಿಯೂ ಬದಲು

ತನ್ನ ಗ್ರಾಹಕರಿಗೆ ಸರಳ ಮತ್ತು ಅನುಕೂಲಕರ ಉತ್ಪನ್ನಗಳನ್ನು ಒದಗಿಸುವ ಅದರ ಬದ್ಧತೆಗೆ ಅನುಗುಣವಾಗಿ, ಧ್ವನಿ ಮತ್ತು ಡೇಟಾ ಎರಡಕ್ಕೂ ಅತ್ಯುತ್ತಮವಾದ ವೈಶಿಷ್ಟ್ಯದ ಸಮೃದ್ಧ ಯೋಜನೆಗಳನ್ನು ಸಂಗ್ರಹಿಸಿದೆ. ಗ್ರಾಹಕರು ತಮ್ಮ ನಿರ್ದಿಷ್ಟ ಅಗತ್ಯಗಳಿಗೆ ಸೂಕ್ತವಾದ ಯೋಜನೆಯನ್ನು ಆಯ್ಕೆ ಮಾಡುವ ಮೂಲಕ ತಮ್ಮ ಪ್ರಯೋಜನಗಳನ್ನು ಪಡೆಯಬಹುದು.

ಏರ್‌ಟೆಲ್‌, ವೋಡಾಫೋನ್ ನಂತರ ಜಿಯೋ ದರ ಎಷ್ಟು ಏರಿಕೆ?

ಎಲ್ಲ ಭಾರತೀಯರನ್ನೂ ನಿಜವಾದ ಡಿಜಿಟಲ್ ಜೀವನದೊಂದಿಗೆ ಸಶಕ್ತರನ್ನಾಗಿಸುವ ಸುಸ್ಥಿರ ಟೆಲಿಕಾಂ ಉದ್ಯಮವನ್ನು ಮತ್ತಷ್ಟು ಬಲಪಡಿಸುವ ಬದ್ಧತೆಗೆ ಅನುಗುಣವಾಗಿ, ಜಿಯೋ ಇಂದು ತನ್ನ ಹೊಸ ಅನ್‌ಲಿಮಿಟೆಡ್ ಪ್ಲಾನ್‌ಗಳನ್ನು ಪ್ರಕಟಿಸಿದೆ. ಈ ಪ್ಲಾನ್‌ಗಳು ಮಾರುಕಟ್ಟೆಯಲ್ಲೇ ಅತ್ಯುತ್ತಮ ಮೌಲ್ಯವನ್ನು ನೀಡಲಿವೆ. ಜಾಗತಿಕವಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ಸೇವೆ ನೀಡುವ ಜಿಯೋ ಭರವಸೆಯನ್ನು ಎತ್ತಿಹಿಡಿಯುವ ಮೂಲಕ, ಜಿಯೋ ಗ್ರಾಹಕರು ಅತ್ಯಂತ ದೊಡ್ಡ ಫಲಾನುಭವಿಗಳಾಗಿ ಮುಂದುವರಿಯಲಿದ್ದಾರೆ.

ಜಿಯೋ ಪ್ರೀಪೇಯ್ಡ್ ಮೊಬೈಲ್ ದರ ಪರಿಷ್ಕರಣೆ
ಹಾಲಿ ದರ(Rs)ವ್ಯಾಲಿಡಿಟಿಹೊಸ ದರ (Rs)ಪ್ರಯೋಜನ
ಜಿಯೋ ಫೋನ್ ಯೋಜನೆ
7528 ದಿನ913 ಜಿಬಿ ಡೇಟಾ, ಅನಿಯಮಿತ ವಾಯ್ಸ್ ಹಾಗೂ 50 ಎಸ್ಎಂಎಸ್
ಅನಿಯಮಿತ ವಾಯ್ಸ್ ಹಾಗೂ ಡೇಟಾ
12928 ದಿನಗಳು1552 ಜಿಬಿ ಡೇಟಾ, ಅನಿಯಮಿತ ವಾಯ್ಸ್ ಹಾಗೂ 300 ಎಸ್ಎಂಎಸ್
14924 ದಿನಗಳು179ದಿನಕ್ಕೆ 1 ಜಿಬಿ ಡೇಟಾ, ಅನಿಯಮಿತ ವಾಯ್ಸ್ ಹಾಗೂ 100 ಎಸ್ಎಂಎಸ್
19928 ದಿನಗಳು239ದಿನಕ್ಕೆ 1.5 ಜಿಬಿ ಡೇಟಾ, ಅನಿಯಮಿತ ವಾಯ್ಸ್ ಹಾಗೂ 100 ಎಸ್ಎಂಎಸ್
24928 ದಿನಗಳು299ದಿನಕ್ಕೆ 2 ಜಿಬಿ ಡೇಟಾಅನಿಯಮಿತ ಕರೆ, 100 ಎಸ್ಎಂಎಸ್/ದಿನ
39956 ದಿನಗಳು479ಅನಿಯಮಿತ ಕರೆ, 100 ಎಸ್ಎಂಎಸ್/ದಿನ, 1.5 ಜಿಬಿ ಡೇಟಾ
44456 ದಿನಗಳು533ಅನಿಯಮಿತ ಕರೆ, 100 ಎಸ್ಎಂಎಸ್/ದಿನ, 2 ಜಿಬಿ ಡೇಟಾ
32984 ದಿನಗಳು395ಅನಿಯಮಿತ ಕರೆ, 100 ಎಸ್ಎಂಎಸ್/ದಿನ, 6 ಜಿಬಿ ಡೇಟಾ
55584 ದಿನಗಳು666ಅನಿಯಮಿತ ಕರೆ, 100 ಎಸ್ಎಂಎಸ್/ದಿನ, ದಿನಕ್ಕೆ 1.5 ಜಿಬಿ ಡೇಟಾ
59984 ದಿನಗಳು719ಅನಿಯಮಿತ ಕರೆ, 100 ಎಸ್ಎಂಎಸ್/ದಿನ, ದಿನಕ್ಕೆ 2 ಜಿಬಿ ಡೇಟಾ
1299336 ದಿನಗಳು1559ಅನಿಯಮಿತ ಕರೆ, 3600 ಎಸ್ಎಂಎಸ್, 24 ಜಿಬಿ ಡೇಟಾ
2399365 ದಿನಗಳು2879ಅನಿಯಮಿತ ಕರೆ, 100 ಎಸ್ಎಂಎಸ್/ದಿನ, ದಿನಕ್ಕೆ 2 ಜಿಬಿ ಡೇಟಾ
Data ಆಡ್ ಆನ್
51ಅನಿಯಮಿತ616 ಜಿಬಿ ಡಾಟಾ
101ಅನಿಯಮಿತ12112 ಜಿಬಿ ಡಾಟಾ
2513030150 ಜಿಬಿ ಡಾಟಾ

ರಿಲಯನ್ಸ್ ಜಿಯೋ ಇನ್‍ಫೋಕಾಮ್ ಲಿಮಿಟೆಡ್: ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‍ನ ಅಧೀನ ಸಂಸ್ಥೆಯಾಗಿರುವ ರಿಲಯನ್ಸ್ ಜಿಯೋ ಇನ್‍ಫೋಕಾಮ್ ಲಿಮಿಟೆಡ್, ಅತ್ಯಾಧುನಿಕ 4ಜಿ ಎಲ್‍ಟಿಇ ತಂತ್ರಜ್ಞಾನದೊಂದಿಗೆ ವಿಶ್ವದರ್ಜೆಯ ಆಲ್-ಐಪಿ ಡೇಟಾ ಸ್ಟ್ರಾಂಗ್ ಫ್ಯೂಚರ್ ಪ್ರೂಫ್ ಜಾಲವನ್ನು ರೂಪಿಸಿದೆ. ಮೊಬೈಲ್ ವೀಡಿಯೋ ಜಾಲದ ಪರಿಕಲ್ಪನೆಯೊಡನೆಯೇ ರೂಪಿಸಲಾದ ಹಾಗೂ ವಾಯ್ಸ್ ಓವರ್ ಎಲ್‍ಟಿಇ ತಂತ್ರಜ್ಞಾನವನ್ನು ಬೆಂಬಲಿಸುವ ಏಕೈಕ ಜಾಲ ಇದಾಗಿದೆ. ಮುಂದೆ 5ಜಿ, 6ಜಿ ಮುಂತಾದ ತಂತ್ರಜ್ಞಾನಗಳ ಪರಿಚಯವಾದಂತೆ ಭವಿಷ್ಯದ ಬೇಡಿಕೆಗಳಿಗಾಗಿ ಹೆಚ್ಚು ಹೆಚ್ಚು ಡೇಟಾವನ್ನು ಬೆಂಬಲಿಸುವಂತೆ ಈ ಜಾಲವನ್ನು ಸುಲಭವಾಗಿ ಉನ್ನತೀಕರಿಸಬಹುದಾಗಿದೆ.

English summary

Relinace Jio announces up to 21% hike in tariffs

After Vodafone idea and Bharati Airtel, Reliance Jio also announced up to 21% hike it s prepaid tariffs from December 1.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X