For Quick Alerts
ALLOW NOTIFICATIONS  
For Daily Alerts

ಕಾರ್ಪೊರೇಟ್ ಸಾಲಗಳಿಗೆ ಒಂದು ಸಲದ ಪುನಾರಚನೆ ಅವಕಾಶ: ಹೀಗಂದರೆ ಏನು?

|

ಕಾರ್ಪೊರೇಟ್ ಸಾಲಗಳನ್ನು ಎನ್ ಪಿಎ ಅಥವಾ ನಾನ್ ಪರ್ಫಾರ್ಮಿಂಗ್ ಅಸೆಟ್ಸ್ (ಅನುತ್ಪಾದಕ ಆಸ್ತಿ) ಎಂಬ ವಿಭಾಗಕ್ಕೆ ಸೇರಿಸದೆ ಒಂದು ಸಲ ಪುನಾರಚನೆಗೆ (ರೀಸ್ಟ್ರಕ್ಚರಿಂಗ್) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿಯಲ್ಲಿ ಗುರುವಾರ ಅವಕಾಶ ನೀಡಲಾಗಿದೆ.

ಪುನಾರಚನೆ ಎಂಬ ಪದ ಮುನ್ನೆಲೆಗೆ ಬರುವುದು ಸಾಮಾನ್ಯವಾಗಿ ಒಂದು ಸಂಸ್ಥೆಯು ಆರ್ಥಿಕ ಒತ್ತಡದಲ್ಲಿ ಇದ್ದಾಗ ಅದರ ಹಣಕಾಸು ಹಾಗೂ ಕಾರ್ಯ ನಿರ್ವಹಣೆ ವಿಚಾರದಲ್ಲಿ ಮಹತ್ತರವಾದ ಬದಲಾವಣೆ ಮಾಡಲಾಗುತ್ತದೆ. ಉದಾಹರಣೆಗೆ ವೆಚ್ಚವನ್ನು ಕಡಿತ ಮಾಡುವುದು, ಉದ್ಯೋಗವನ್ನು ಕಡಿತ ಮಾಡುವುದು ಅಥವಾ ಆ ಸಂಸ್ಥೆಯ ಆಸ್ತಿ ಮಾರಾಟ ಮಾಡುವ ಮೂಲಕ ಗಾತ್ರವನ್ನು ಕಡಿಮೆ ಮಾಡುವುದು ಹೀಗೆ.

RBI ಹಣಕಾಸು ನೀತಿ ಪ್ರಮುಖಾಂಶಗಳು: ಚಿನ್ನದ ಮೌಲ್ಯದ ಶೇ 90ರಷ್ಟು ಸಾಲ

 

ಇದಕ್ಕಾಗಿ ಹಿರಿಯ ಬ್ಯಾಂಕರ್ ಕೆ.ವಿ. ಕಾಮತ್ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸಲಾಗುವುದು. ಆ ಸಮಿತಿಯು ಪುನಾರಚನೆ ಬಗ್ಗೆ ಸಲಹೆ ನೀಡುತ್ತದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಜೂನ್ 7, 2019ರ ಸುತ್ತೋಲೆಯ ಪ್ರಕಾರ, ಡೌನ್ ಗ್ರೇಡ್ ಮಾಡದೆ ಸಾಲ ಪುನಾರಚನೆಗೆ ಮಾರ್ಗ ಒದಗಿಸಲು ನಿರ್ಧಾರ ಮಾಡಲಾಗಿದೆ. ಈ ಹಿಂದಿನ ಪುನಾರಚನೆ ಅನುಭವ ಪುನರಾವರ್ತನೆ ಆಗದಂತೆ ಕಾಳಜಿ ವಹಿಸಲಾಗುವುದು ಹಾಗೂ ಅಗತ್ಯ ಕ್ರಮಗಳನ್ನು ಅನುಸರಿಸಲಾಗುವುದು ಎಂದು ದಾಸ್ ಹೇಳಿದ್ದಾರೆ.

ಕಾರ್ಪೊರೇಟ್ ಸಾಲಗಳಿಗೆ ಒಂದು ಸಲದ ಪುನಾರಚನೆ ಅವಕಾಶ: ಹೀಗಂದರೆ ಏನು?

ಇಂಥ ಪುನಾರಚನೆಗಳನ್ನು ಈಗ ಮಾಡುತ್ತಿರುವಂತೆ ಆಸ್ತಿ ವರ್ಗೀಕರಣದ ವೇಳೆ ಡೌನ್ ಗ್ರೇಡ್ ಮಾಡುವುದಿಲ್ಲ. ಒತ್ತಡದಲ್ಲಿ ಇರುವ ಎಂಎಸ್ ಎಂಇಯಾಗಿ ಸಾಲ ಪಡೆದವರಿಗೆ ಸಾಲ ಪುನಾರಚನೆಗೆ ಅವಕಾಶ ನೀಡಿ, ಆ ಆಸ್ತಿಯನ್ನು ಮಾರ್ಚ್ 31ಕ್ಕೆ ಸ್ಟ್ಯಾಂಡರ್ಡ್ ಎಂದು ವರ್ಗೀಕರಿಸಲಾಗುತ್ತದೆ ಎಂದು ದಾಸ್ ವಿವರಿಸಿದ್ದಾರೆ.

ಪುನಾರಚನೆಯಲ್ಲಿ ಮಾಲೀಕತ್ವ ಆಧಾರದಲ್ಲಿ ಕಂಪೆನಿಗಳು ಹಾಗೂ ಅದರ ಜತೆಗೆ ವೈಯಕ್ತಿಕ ಸಾಲವನ್ನು ಕೂಡ ಸೇರಿಸಲಾಗುತ್ತದೆ. ಕಿರು ಮತ್ತು ಸಣ್ಣ ಸಂಸ್ಥೆಗಳಿಗೆ ನೀಡಲಾದ ಸಾಲಗಳ ಪುನಾರಚನೆಯನ್ನು ಮಾಡಲಾಗುತ್ತದೆ ಎಂದು ಶಕ್ತಿಕಾಂತ ದಾಸ್ ಮಾಹಿತಿ ನೀಡಿದ್ದಾರೆ.

English summary

Reserve Bank Of India Allows One-Time Restructuring Of Loans

The RBI in its MPC policy decision on Thursday allowed one-time restructuring of corporate loans without putting them under the NPA.
Company Search
COVID-19