For Quick Alerts
ALLOW NOTIFICATIONS  
For Daily Alerts

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಈಗ ಟ್ವಿಟ್ಟರ್ ನಲ್ಲಿ ಹತ್ತು ಲಕ್ಷ ಫಾಲೋವರ್ಸ್

By ಅನಿಲ್ ಆಚಾರ್
|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಈಗ ಟ್ವಿಟ್ಟರ್ ನಲ್ಲಿ ಹತ್ತು ಲಕ್ಷ ಫಾಲೋವರ್ಸ್ ಗಳಿದ್ದಾರೆ. ಆರ್ ಬಿಐ ಹಿರಿಯ ಅಧಿಕಾರಿಗಳ ಪ್ರಕಾರ, ಜಾಗತಿಕ ಮಟ್ಟದಲ್ಲಿ ಯಾವುದೇ ಕೇಂದ್ರ ಬ್ಯಾಂಕ್ ಗೂ ಇಲ್ಲದಷ್ಟು ಫಾಲೋವರ್ಸ್ ಗಳು ಟ್ವಿಟ್ಟರ್ ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗಿ ಇದೆ.

"ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಟ್ವಿಟ್ಟರ್ ನಲ್ಲಿ ಇಂದು ಒಂದು ಮಿಲಿಯನ್ ಫಾಲೋವರ್ಸ್ ಆಗಿದ್ದಾರೆ. ಆರ್ ಬಿಐನಲ್ಲಿನ ನನ್ನ ಎಲ್ಲ ಸಹೋದ್ಯೋಗಿಗಳಿಗೆ ಅಭಿನಂದೆ ಹೇಳುತ್ತೇನೆ," ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ನವೆಂಬರ್ ಇಪ್ಪತ್ತೆರಡನೇ ತಾರೀಕಿನ ಭಾನುವಾರ ಟ್ವೀಟ್ ಮಾಡಿದ್ದಾರೆ.

ರಿಸರ್ವ್ ಬ್ಯಾಂಕ್ ಇನೊವೇಷನ್ ಹಬ್ ಅಧ್ಯಕ್ಷರಾಗಿ ಕ್ರಿಸ್ ಗೋಪಾಲಕೃಷ್ಣನ್ ನೇಮಕ

 

ಯು.ಎಸ್. ಫೆಡರಲ್ ರಿಸರ್ವ್ ಗೆ ಟ್ವಿಟ್ಟರ್ ನಲ್ಲಿ 6,77,000 ಅನುಯಾಯಿಗಳಿದ್ದಾರೆ. ಅದಕ್ಕೆ ಹೋಲಿಸಿದಲ್ಲಿ ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಗೆ 5.9 ಲಕ್ಷ ಫಾಲೋವರ್ಸ್, ಬ್ರೆಜಿಲ್ ಕೇಂದ್ರ ಬ್ಯಾಂಕ್ 3.8 ಲಕ್ಷ ಹಾಗೂ ಬ್ಯಾಂಕ್ ಆಫ್ ಇಂಗ್ಲೆಂಡ್ ಗೆ 3.17ಲಕ್ಷ ಫಾಲೋವರ್ಸ್ ಇದ್ದಾರೆ.

RBIಗೆ ಈಗ ಟ್ವಿಟ್ಟರ್ ನಲ್ಲಿ ಹತ್ತು ಲಕ್ಷ ಫಾಲೋವರ್ಸ್

ಅದೇ ರೀತಿ ಬ್ಯಾಂಕ್ ಆಫ್ ಕೆನಡಾಗೆ 1.8 ಲಕ್ಷ ಫಾಲೋವರ್ಸ್, ಆಸ್ಟೇಲಿಯಾಗೆ 49,200, ಫ್ರಾನ್ಸ್ 37,100, ದಾಯಿಶ್ ಬುಂದೆ ಬ್ಯಾಂಕ್ 30,000 ಹಾಗೂ ಬ್ಯಾಂಕ್ ಆಫ್ ಜಪಾನ್ ಗೆ 28,900 ಫಾಲೋವರ್ಸ್ ಇದ್ದಾರೆ. ಬ್ಯಾಂಕ್ ಆಫ್ ಸ್ಪೇನ್ 15,900 ಮತ್ತು ಬ್ಯಾಂಕ್ ಆಫ್ ಇಟಲಿಗೆ 14,500 ಫಾಲೋವರ್ಸ್ ಟ್ವಿಟ್ಟರ್ ನಲ್ಲಿ ಇದ್ದಾರೆ.

English summary

Reserve Bank Of India Now Has 10 Lakh Twitter Followers

Reserve Bank Of India has 10 lakh followers in twitter, this is the highest number for any global central bank. Here is the details.
Story first published: Sunday, November 22, 2020, 16:22 [IST]
Company Search
COVID-19