For Quick Alerts
ALLOW NOTIFICATIONS  
For Daily Alerts

ಮೇ ತಿಂಗಳಿನಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ಶೇ. 6.3ಕ್ಕೆ ಏರಿಕೆ

|

ಭಾರತದ ಚಿಲ್ಲರೆ ಹಣದುಬ್ಬರವು ಮೇ ತಿಂಗಳಿನಲ್ಲಿ ಶೇಕಡಾ 6.30ಕ್ಕೆ ಏರಿಕೆಯಾಗಿದ್ದು, ಇದು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಮಿತಿ ಶೇಕಡಾ 6ಕ್ಕಿಂತ ಹೆಚ್ಚಾಗಿದೆ ಎಂದು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ(ಎಂಒಎಸ್‌ಪಿಐ) ಸೋಮವಾರ ಬಿಡುಗಡೆ ಮಾಡಿದೆ.

 

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು ಏಪ್ರಿಲ್ ತಿಂಗಳಲ್ಲಿ ಶೇ 4.29 ಕ್ಕೆ ಇಳಿದಿತ್ತು. ಆದರೆ ಮೇ ತಿಂಗಳಿನಲ್ಲಿ ತೈಲ ದರ ವಿಪರೀತ ಏರಿಕೆ ಪರಿಣಾಮ ತರಕಾರಿ, ಮಾಂಸ ಸೇರಿದಂತೆ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಜೊತೆಗೆ ಚಿಲ್ಲರೆ ಹಣದುಬ್ಬರ ಶೇ. 6.3ಕ್ಕೆ ಏರಿಕೆಯಾಗಿದೆ.

ಮೇ ತಿಂಗಳಿನಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ಶೇ. 6.3ಕ್ಕೆ ಏರಿಕೆ

ಇನ್ನು ಆರು ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ಸಿಪಿಐ ದತ್ತಾಂಶವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಅಂದಾಜಿಗಿಂತ (ಶೇ. 6) ಹೆಚ್ಚಾಗಿದೆ. ಇದಕ್ಕೂ ಮುನ್ನ ಸಿಪಿಐ ಸತತ ಐದು ತಿಂಗಳು ಶೇ 6 ರ ಅಂಕಕ್ಕಿಂತ ಕೆಳಗಿತ್ತು. ಮಾರ್ಚ್ 2026 ಕ್ಕೆ ಕೊನೆಗೊಳ್ಳುವ ಐದು ವರ್ಷಗಳ ಅವಧಿಗೆ ಚಿಲ್ಲರೆ ಹಣದುಬ್ಬರವನ್ನು ಶೇ 4 ರಷ್ಟು ಉಳಿಸಿಕೊಳ್ಳಲು, ಸರ್ಕಾರ ಎರಡೂ ಕಡೆಗಳಲ್ಲಿ ಶೇಕಡಾ 2 ರಷ್ಟು ಅಂತರವನ್ನು ಕಾಯ್ದುಕೊಳ್ಳುವಂತೆ ಆರ್‌ಬಿಐ ಅನ್ನು ಕೇಳಿದೆ.

ಸಗಟು ಬೆಲೆ ಹಣದುಬ್ಬರವು ಮೇ ತಿಂಗಳಲ್ಲಿ ಶೇ. 12.94ಕ್ಕೆ ತಲುಪಿದೆ. ಆಹಾರ ಹಣದುಬ್ಬರವು ಮೇ ತಿಂಗಳಲ್ಲಿ ಶೇ 5.01 ಕ್ಕೆ ಏರಿಕೆಯಾಗಿದ್ದು, ಏಪ್ರಿಲ್‌ನಲ್ಲಿ ಇದು ಶೇ. 1.96 ರಷ್ಟಿತ್ತು.

ಜೂನ್ 04ರಂದು ದ್ವೈಮಾಸಿಕ ಹಣಕಾಸು ನೀತಿ ಪರಿಶೀಲನೆ ಸಭೆಯ ತೀರ್ಮಾನದಂತೆ ಆರ್‌ಬಿಐ ರೆಪೋ ದರವನ್ನು ಈ ಹಿಂದಿನ ಶೇಕಡಾ 4ರಷ್ಟು ಮತ್ತು ರಿವರ್ಸ್ ರೆಪೋ ದರವನ್ನು ಶೇಕಡಾ 3.35ರಷ್ಟು ಉಳಿಸಿಕೊಂಡಿದೆ.

English summary

Retail Inflation Spikes To 6.30 Percent In May 2021

India's Retail inflation accelerated to a six-month high of 6.3% in May, breaching the Reserve Bank of India's upper threshold of inflation range.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X