For Quick Alerts
ALLOW NOTIFICATIONS  
For Daily Alerts

ವಿಶ್ವದ ಅಗ್ಗದ ಸ್ಮಾರ್ಟ್‌ಫೋನ್ JioPhone Next ಸೆಪ್ಟೆಂಬರ್‌ನಲ್ಲಿ ಬಿಡುಗಡೆ

|

ರಿಲಯನ್ಸ್ ಇಂಡಸ್ಟ್ರೀಸ್‌ನ 44 ನೇ ವಾರ್ಷಿಕ ಮಹಾಸಭೆಯಲ್ಲಿ ಕಂಪನಿಯ ಅಧ್ಯಕ್ಷ ಮುಖೇಶ್ ಅಂಬಾನಿ ಅನೇಕ ಮಹತ್ವದ ಘೋಷಣೆಯನ್ನ ಮಾಡಿದ್ದು, ವಿಶ್ವದ ಅಗ್ಗದ ಸ್ಮಾರ್ಟ್‌ಫೋನ್ ಬಿಡುಗಡೆ ಕೂಡ ಒಂದಾಗಿದೆ.

 

ಸೆಪ್ಟೆಂಬರ್ 10ರಂದು ಜಿಯೋಫೋನ್ ನೆಕ್ಸ್ಟ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿದ್ದು, ಮೊಬೈಲ್ ಬೆಲೆ ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಸೆಪ್ಟೆಂಬರ್‌ 10ರಿಂದ ಮೊಬೈಲ್ ಖರೀದಿಗೆ ಲಭ್ಯವಾಗಲಿದೆ.

ಎಜಿಎಂ ಸಭೆಯನ್ನ ಉದ್ದೇಶಿಸಿ ಮಾತನಾಡಿದ ಅಂಬಾನಿ ಇದು ವಿಶ್ವದ ಅಗ್ಗದ ಸ್ಮಾರ್ಟ್ ಮೊಬೈಲ್ ಫೋನ್ ಎಂದು ಹೇಳಿದ್ದಾರೆ. ಅವರ ಪ್ರಕಾರ, ಇದನ್ನು ಮೊದಲು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು, ಅದರ ನಂತರ ಇದನ್ನು ವಿಶ್ವದ ಇತರ ದೇಶಗಳಲ್ಲಿಯೂ ಮಾರಾಟ ಮಾಡಲಾಗುತ್ತದೆ ಎಂದಿದ್ದಾರೆ.

ಅಗ್ಗದ ಸ್ಮಾರ್ಟ್‌ಫೋನ್ JioPhone Next ಸೆಪ್ಟೆಂಬರ್‌ನಲ್ಲಿ ಬಿಡುಗಡೆ

ಗೂಗಲ್ ಸಹಯೋಗದೊಂದಿಗೆ ಜಿಯೋ ಫೋನ್ ನೆಕ್ಟ್ ಮಾಡಲಾಗಿದೆ. ಇದು ದುಬಾರಿ ಸ್ಮಾರ್ಟ್ ಫೋನ್‌ಗಳಲ್ಲಿರುವ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಆದರೆ ಅದರ ಬೆಲೆ ವಿಶ್ವದ ಅತ್ಯಂತ ಕಡಿಮೆ ಇರುತ್ತದೆ. ಪ್ರಸ್ತುತ ದೇಶದಲ್ಲಿ ಸುಮಾರು 300 ಮಿಲಿಯನ್ ಜನರಿದ್ದಾರೆ, ಅವರು 2 ಜಿ ಮೊಬೈಲ್ ಸೇವೆಯನ್ನು ಬಳಸುತ್ತಿದ್ದಾರೆ. ಈ ಹೊಸ ಸ್ಮಾರ್ಟ್ ಫೋನ್ ಬಿಡುಗಡೆಯಾದ ನಂತರ ದೇಶವು 2 ಜಿ ಯಿಂದ ಮುಕ್ತವಾಗಲಿದೆ ಎಂದು ಕಂಪನಿ ನಂಬಿದೆ. ಏಕೆಂದರೆ ಇದರ ನಂತರ ದೇಶದ ಹೆಚ್ಚಿನ ಜನರು 4 ಜಿ ಸೇವೆಗಳನ್ನು ಬಳಸಲಿದ್ದಾರೆ.

ಹೊಸ ಸ್ಮಾರ್ಟ್‌ಫೋನ್ ಜಿಯೋ ಮತ್ತು ಗೂಗಲ್‌ನ ವೈಶಿಷ್ಟ್ಯಗಳು ಮತ್ತು ಅಪ್ಲಿಕೇಶನ್‌ಗಳನ್ನು ಅದರಲ್ಲಿ ಸೇರಿಸಲಾಗುವುದು. ಇದು ಜಿಯೋ ಮತ್ತು ಗೂಗಲ್ ಒಟ್ಟಿಗೆ ಅಭಿವೃದ್ಧಿಪಡಿಸಿದ ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್‌ಫೋನ್ ಆಪರೇಟಿಂಗ್ ಸಿಸ್ಟಮ್ ಆಗಿದೆ. ಭಾರತೀಯ ಮಾರುಕಟ್ಟೆಗೆ ವಿಶೇಷವಾಗಿ ತಯಾರಿಸಿದ ಜಿಯೋಫೋನ್-ನೆಕ್ಸ್ಟ್ ಸ್ಮಾರ್ಟ್‌ಫೋನ್‌ನಲ್ಲಿ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಸ್ಮಾರ್ಟ್‌ಫೋನ್‌ ಉತ್ತಮ ಕ್ಯಾಮೆರಾ ಮತ್ತು ಆಂಡ್ರಾಯ್ಡ್ ನವೀಕರಣವನ್ನು ಸಹ ಪಡೆಯಲಿದೆ.

ರಿಲಯನ್ಸ್‌ನ ಎಜಿಎಂ ಸಂದರ್ಭದಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಕೂಡ ಈ ಸ್ಮಾರ್ಟ್‌ಫೋನ್ ಬಗ್ಗೆ ಮಾಹಿತಿ ನೀಡಿದರು. ಗೂಗಲ್ ಮತ್ತು ಜಿಯೋ ಸಹಯೋಗದೊಂದಿಗೆ ತಯಾರಿಸಿದ ಈ ಹೊಸ ಮತ್ತು ಒಳ್ಳೆ ಜಿಯೋ ಸ್ಮಾರ್ಟ್‌ಫೋನ್‌ನೊಂದಿಗೆ ಹೊಸ ಪಾಲುದಾರಿಕೆ ಪ್ರಾರಂಭವಾಗಿದೆ ಎಂದು ಅವರು ಹೇಳಿದರು.

English summary

RIL AGM 2021: Reliance JioPhone Next With Google Announced

Reliance Industries Limited (RIL) is hosting its 44th annual general meeting (AGM) event, which is being streamed online. The company has announced its JioPhone Next in collaboration with Google
Story first published: Thursday, June 24, 2021, 17:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X