For Quick Alerts
ALLOW NOTIFICATIONS  
For Daily Alerts

ಕೋವಿಡ್‌ ನಿರ್ಬಂಧ ಸಡಲಿಕೆ ಬೆನ್ನಲ್ಲೇ ಮೂಡಿದೆ ಆರ್ಥಿಕ ಚೇತರಿಕೆಯ ಚಿಗುರು

|

ವಿಶ್ವದಾದ್ಯಂತ ಕೊರೊನಾ ವೈರಸ್‌ ಸೋಂಕು ಹಿನ್ನೆಲೆ ಮಾಡಲಾದ ಲಾಕ್‌ಡೌನ್‌ ಹಾಗೂ ನಿರ್ಬಂಧಗಳು ಆರ್ಥಿಕತೆಗೆ ಪೆಟ್ಟು ಹಾಕಿದೆ. ಹಲವಾರು ದೇಶಗಳಲ್ಲಿ ಆರ್ಥಿಕ ಸ್ಥಿತಿಯು ಹದಗೆಟ್ಟಿದೆ. ಅಫ್ಘಾನ್‌ನ ಸ್ಥಿತಿಯಂತೂ ಹೇಳತೀರದಾಗಿದೆ. ಈ ನಡುವೆ ಭಾರತದಲ್ಲಿ ಕೊರೊನಾ ವೈರಸ್‌ ನಿರ್ಬಂಧ ಕೊಂಚ ಸಡಿಲಿಕೆ ಮಾಡಿದ ಬೆನ್ನಲ್ಲೇ ಆರ್ಥಿಕ ಚೇತರಿಕೆಯು ಕಾಣಿಸಿಕೊಂಡಿದೆ.

 

ರಾಜ್ಯಗಳು ಕೊರೊನಾ ವೈರಸ್‌ ಸೋಂಕು ಹಿನ್ನೆಲೆ ಹೇರಲಾಗಿದ್ದ ನಿರ್ಬಂಧಗಳನ್ನು ಸಡಿಲಿಕೆ ಮಾಡಿದ ಕಾರಣದಿಂದಾಗಿ, 2021 ಜುಲೈ ತಿಂಗಳಿನಲ್ಲಿ ಆರ್ಥಿಕ ಚೇತರಿಕೆಯ ಬೇರುಗಳು ಆಳವಾಗಿದೆ. ಆರ್ಥಿಕ ಚೇತರಿಕೆಯ ಚಿಗುರು ಮೂಡಿದೆ ಎಂದು ವರದಿಯೊಂದು ಹೇಳುತ್ತದೆ.

ಕೋವಿಡ್-19 ಪರಿಣಾಮ: ಸರ್ವೀಸ್‌, ವಾರೆಂಟಿ ಅವಧಿ ವಿಸ್ತರಿಸಿದ ಹ್ಯುಂಡೈ

ಇಕ್ರಾ ರೇಟಿಂಗ್ಸ್‌ನ ವರದಿಯ ಪ್ರಕಾರ, ದೇಶದಲ್ಲಿ ಕೊರೊನಾ ವೈರಸ್‌ ಸೋಂಕು ಹಿನ್ನೆಲೆ ಮಾಡಲಾಗಿದ್ದ ಲಾಕ್‌ಡೌನ್‌ ನಿರ್ಬಂಧ ಸಡಿಲಿಕೆ ಆರಂಭವಾದ ಬಳಿಕ 2021 ರ ಜುಲೈನಲ್ಲಿ ಅಧಿಕ ಆದಾಯ ಹೊಂದಿರುವ ಕೈಗಾರಿಕೆ ಮತ್ತು ಸೇವಾ ವಲಯದಲ್ಲಿ ಆರ್ಥಿಕ ಚಲನಶೀಲತೆಯು ಕಂಡು ಬಂದಿದೆ. ಹಾಗೆಯೇ ನಿರ್ಬಂಧ ಸಡಿಲಿಕೆ ಹಿನ್ನಲೆ ಜನರು ವ್ಯಾಪಾರ ವಹಿವಾಟು, ಉದ್ಯೋಗದಲ್ಲಿ ತೊಡಗಿರುವ ಹಿನ್ನೆಲೆ ಟೋಲ್‌ ಸಂಗ್ರಹವೂ ಅಧಿಕವಾಗಿದೆ ಎಂದು ಇಕ್ರಾ ರೇಟಿಂಗ್ಸ್‌ನ ವರದಿ ಹೇಳುತ್ತದೆ.

 ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ಅರ್ಥಶಾಸ್ತ್ರಜ್ಞರು ಹೇಳುವುದು ಹೀಗೆ..

ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ಅರ್ಥಶಾಸ್ತ್ರಜ್ಞರು ಹೇಳುವುದು ಹೀಗೆ..

"ಕೊರೊನಾ ವೈರಸ್‌ ಸೋಂಕು ಕಾರಣದಿಂದಾಗಿ ಹೇರಲಾಗಿದ್ದ ರಾಜ್ಯವಾರು ನಿರ್ಬಂಧಗಳನ್ನು ಇನ್ನಷ್ಟು ಸಡಿಲಗೊಳಿಸಲಾಗಿದೆ. ಈ ಕಾರಣದಿಂದಾಗಿ ವಿಶೇಷವಾಗಿ ದಕ್ಷಿಣ ರಾಜ್ಯಗಳಾದ್ಯಂತ ಆರ್ಥಿಕ ಚೇತರಿಕೆಯು ಕಂಡು ಬಂದಿದೆ. ಆರ್ಥಿಕ ಸ್ಥಿತಿಯು ಸಾಮಾನ್ಯ ಸ್ಥಿತಿಗೆ ಮರಳಿಲ್ಲ. ಆದರೆ ಈ ಕೊರೊನಾ ಸಂದರ್ಭದಲ್ಲೂ 15 ಹೈ ಫ್ರಿಕ್ವೆನ್ಸಿ ಇಂಡಿಕೇಟರ್‌ಗಳ ಪೈಕಿ ಎಂಟು ಹೈ ಫ್ರಿಕ್ವೆನ್ಸಿ ಇಂಡಿಕೇಟರ್‌ಗಳು ಜುಲೈ 2021 ರಲ್ಲಿ ವರ್ಷದಲ್ಲಿ ಅಧಿಕ ಪ್ರೋತ್ಸಾಹದಾಯಕ ಸುಧಾರಣೆಯನ್ನು ದಾಖಲಿಸಿವೆ," ಎಂದು ಏಜೆನ್ಸಿಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಇಕ್ರಾ ರೇಟಿಂಗ್ಸ್‌ನ ವರದಿಯಲ್ಲಿ ತಿಳಿಸಿದ್ದಾರೆ. "ಇದಲ್ಲದೆ, 13 ನಾನಾ‌ ಫಿನಾನ್ಶಿಯಲ್‌ ಇಂಡಿಕೇಟರ್‌ ಪೈಕಿ 10 ಇಂಡಿಕೇಟರ್‌ಗಳಲ್ಲಿ 2021 ರ ಜುಲೈನಲ್ಲಿ ತಿಂಗಳ ಮಟ್ಟಿನ ಏರಿಕೆಗಳು ದಾಖಲಾಗಿದೆ. ಆದರೆ ರಾಜ್ಯವಾರು ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಇಳಿಕೆ ಹಿನ್ನೆಲೆ ಕೋವಿಡ್‌ ಲಾ‌ಕ್‌ಡೌನ್ ಅನ್ನು ಸಡಿಲಿಕೆ ಮಾಡಿದಾಗ 2021 ರ ಜೂನ್‌ನಲ್ಲಿ ಕಂಡು ಬಂದ ಮಟ್ಟಕ್ಕಿಂತ ಆರ್ಥಿಕ ಸುಧಾರಣೆಯ ವೇಗವು ಕಡಿಮೆಯಾಗಿದೆ. 2021 ರ ಜೂನ್‌ನಲ್ಲಿನ ಆರ್ಥಿಕ ಸುಧಾರಣೆಯ ವೇಗವನ್ನು ನಿರೀಕ್ಷೆ ಮಾಡಲಾಗಿದೆ," ಎಂದು ಕೂಡಾ ಏಜೆನ್ಸಿಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಇಕ್ರಾ ರೇಟಿಂಗ್ಸ್‌ನ ವರದಿಯಲ್ಲಿ ಹೇಳಿದ್ದಾರೆ.

 ಯಾವ ಕ್ಷೇತ್ರದಲ್ಲಿ ಸುಧಾರಿಣೆ ಕಂಡಿದೆ?
 

ಯಾವ ಕ್ಷೇತ್ರದಲ್ಲಿ ಸುಧಾರಿಣೆ ಕಂಡಿದೆ?

ಜಿಎಸ್‌ಟಿ ಇ-ವೇ ಬಿಲ್‌ಗಳು, ಇಂಧನ ಬಳಕೆ, ವಿದ್ಯುತ್ ಉತ್ಪಾದನೆ, ಕೋಲ್ ಇಂಡಿಯಾ ಲಿಮಿಟೆಡ್‌ನ ಉತ್ಪಾದನೆ (ಸಿಐಎಲ್ ಎನ್‌ಎಸ್‌ಇ 0.63 %), ವಾಹನ ನೋಂದಣಿ, ದೇಶೀಯ ಪ್ರಯಾಣಿಕರ ದಟ್ಟಣೆ ಇತ್ಯಾದಿಗಳು ಕಳೆದ ವರ್ಷಕ್ಕಿಂತ 2021 ರ ಜೂನ್‌ಗೆ ಹೋಲಿಸಿದರೆ ಜುಲೈ 2021 ರಲ್ಲಿ ಸುಧಾರಿಸಿದೆ. ಇದಲ್ಲದೆ, ಪ್ರಯಾಣಿಕರ ವಾಹನಗಳು (ಪಿವಿಗಳು), ಸ್ಕೂಟರ್‌ಗಳು ಮತ್ತು ಮೋಟಾರ್‌ಸೈಕಲ್‌ಗಳ ಉತ್ಪಾದನೆಯಂತಹ ಉಳಿದಿರುವ ಕೆಲವು ಸೂಚಕಗಳ ವೈಒವೈ ಕಾರ್ಯಕ್ಷಮತೆಯು ಹದಗೆಡಲು ಪ್ರಾಥಮಿಕವಾಗಿ ಪ್ರತಿಕೂಲವಾದ ಪರಿಣಾಮವು ಕಾರಣವಾಗಿದೆ ಎಂದು ವರದಿಗಳು ಹೇಳುತ್ತದೆ. 13 ನಾನಾ‌ ಫಿನಾನ್ಶಿಯಲ್‌ ಇಂಡಿಕೇಟರ್‌ ಪೈಕಿ 10 ಇಂಡಿಕೇಟರ್‌ಗಳಲ್ಲಿ 2021 ರ ಜುಲೈನಲ್ಲಿ ತಿಂಗಳಿಗೊಂದು ಅವಧಿಯ ಹೆಚ್ಚಳವು ಕಂಡು ಬಂದಿದೆ. ಆ ಆರ್ಥಿಕ ಚೇತರಿಕೆಯ ವೇಗವು ಜೂನ್ 2021 ರಲ್ಲಿ ಏರಿಕೆಯಾಗಿತ್ತು. ಉದಾಹರಣೆಗೆ ವಾಹನ ನೋಂದಣಿ, ಜಿಎಸ್‌ಟಿ ಇ-ವೇ ಬಿಲ್‌ಗಳ ಉತ್ಪಾದನೆ ಮತ್ತು ಸ್ವಯಂ ಉತ್ಪಾದನೆಗಳ ಮಟ್ಟವು ಏರಿಕೆಯಾಗಿದೆ ಎಂದು ವರದಿಯು ಹೇಳಿದೆ.

ಕೇಂದ್ರ ಬಜೆಟ್ 2021: ಕೊರೊನಾ ಪೀಡಿತ ಆರ್ಥಿಕತೆ ಚೇತರಿಕೆಗೆ ಏನು ನಿರೀಕ್ಷಿಸಬಹುದು?

 ಆರ್ಥಿಕತೆ ಸುಧಾರಣೆ, ಕುಸಿತ

ಆರ್ಥಿಕತೆ ಸುಧಾರಣೆ, ಕುಸಿತ

13 ನಾನ್‌ ಫಿನಾನ್ಶಿಯಲ್‌ ಇಂಡಿಕೇಟರ್‌ಗಳ ಪೈಕಿ ಏಳು ಕೊರೊನಾ ವೈರಸ್‌ ಸೋಂಕು ಆರಂಭಕ್ಕೂ ಮುನ್ನ ಹಾಗೂ ಏಪ್ರಿಲ್ 2021 ರ, ಜುಲೈ 2021 ರ ಮಟ್ಟಕ್ಕಿಂತ ಆರ್ಥಿಕ ಪ್ರಗತಿ ಹೆಚ್ಚಾಗಿದೆ ಎಂದು ಏಜೆನ್ಸಿಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಇಕ್ರಾ ರೇಟಿಂಗ್ಸ್‌ನ ವರದಿಯಲ್ಲಿ ತಿಳಿಸಿದ್ದಾರೆ. ಇದರಲ್ಲಿ ತೈಲೇತರ ಸರಕು ರಫ್ತು, ಜಿಎಸ್‌ಟಿ ಇ-ವೇ ಬಿಲ್‌ಗಳು, ವಿದ್ಯುತ್ ಉತ್ಪಾದನೆ, ಸಿಐಎಲ್ ಉತ್ಪಾದನೆ, ಪೆಟ್ರೋಲ್ ಬಳಕೆ, ಪಿವಿ ಉತ್ಪಾದನೆ ಮತ್ತು ರೈಲು ಸರಕು ಸಾಗಣೆಯಲ್ಲಿ ಹೆಚ್ಚಳ ಕಂಡು ಬಂದಿದೆ ಎಂದು ವರದಿಯು ವಿವರಿಸಿದೆ. ಇದಕ್ಕೆ ತದ್ವಿರುದ್ಧವಾಗಿ, ಜುಲೈ 2021 ರಲ್ಲಿ ಬಂದರುಗಳ ಸರಕು ಸಾಗಣೆ, ಡೀಸೆಲ್ ಬಳಕೆ ಮತ್ತು ರೈಲು ಸರಕು ಸಾಗಾಣಿಕೆ ಕುಸಿತವನ್ನು ಕಂಡಿದೆ ಎಂದು ಬಂದಿದೆ ಎಂದು ಕೂಡಾ ಹೇಳಿದೆ.

 ದೇಶದಲ್ಲಿ ಟೋಲ್‌ ಫಾಸ್ಟ್‌ ಟ್ಯಾಗ್‌ ಸಂಗ್ರಹ ಹೆಚ್ಚಳ

ದೇಶದಲ್ಲಿ ಟೋಲ್‌ ಫಾಸ್ಟ್‌ ಟ್ಯಾಗ್‌ ಸಂಗ್ರಹ ಹೆಚ್ಚಳ

"ರಾಜ್ಯಗಳು ಕೊರೊನಾ ವೈರಸ್‌ ಸೋಂಕು ಹಿನ್ನೆಲೆ ಜಾರಿ ಮಾಡಲಾಗಿದ್ದ ಲಾಕ್‌ಡೌನ್‌ ಅನ್ನು ಸಡಿಲಿಕೆ ಮಾಡುತ್ತಿದ್ದಂತೆ ಚಿಲ್ಲರೆ ವ್ಯಾಪಾರ ಹಾಗೂ ಮನರಂಜನೆ ಕ್ಷೇತ್ರದಲ್ಲಿನ ಆರ್ಥಿಕ ಚಲನಶೀಲತೆಯು 2021 ರ ಮೇ ಅಂತ್ಯದ ವೇಳೆಗೆ ಶೇಕಡ 60 ರಿಂದ 2021 ರ ಜುಲೈ ಅಂತ್ಯದ ವೇಳೆಗೆ ತೀಕ್ಷ್ಣವಾದ ಸುಧಾರಣೆಯನ್ನು ದಾಖಲಿಸಿದೆ," ಎಂದಿದ್ದಾರೆ. 2021 ರ ಜುಲೈ ತಿಂಗಳಿನಲ್ಲಿ ಫಾಸ್ಟ್‌ ಟ್ಯಾಗ್ ಟೋಲ್ ಸಂಗ್ರಹವು ಶೇಕಡಾ 15.5 ರಷ್ಟು ಏರಿಕೆಯಾಗಿದೆ. ಅಂದರೆ 2,980 ಕೋಟಿ ರೂಪಾಯಿ ಸಂಗ್ರಹವಾಗಿದೆ. 2021 ರ ಮಾರ್ಚ್‌ನಲ್ಲಿ ದಾಖಲೆಯ ಗರಿಷ್ಠ ಮಟ್ಟ 3,090 ಕೋಟಿಗಿಂತ ಜುಲೈ ತಿಂಗಳಿನ ಫಾಸ್ಟ್‌ ಟ್ಯಾಗ್‌ ಟೋಲ್‌ ಸಂಗ್ರಹ ಕೊಂಚ ಮತ್ರ ಇಳಿಕೆಯಾಗಿದೆ ಎಂದು ಏಜೆನ್ಸಿಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಇಕ್ರಾ ರೇಟಿಂಗ್ಸ್‌ನ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಆಗಸ್ಟ್ 2021 ರ ಮೊದಲಾರ್ಧದಲ್ಲಿ ರಾಜ್ಯ ರಿಫೈನರ್‌ಗಳ ಪೆಟ್ರೋಲ್ ಮಾರಾಟವು ವರ್ಷದ ಹಿಂದಿನ ಮತ್ತು ಕೋವಿಡ್‌ಗೂ ಹಿಂದಿನ ಮಟ್ಟವನ್ನು ಮೀರಿದೆ. ಡೀಸೆಲ್‌ನ ಬಳಕೆ ದರವು ಕೋವಿಡ್‌ಗೂ ಮೊದಲು ಹೇಗಿತ್ತೋ ಹಾಗೆಯೇ ಮುಂದುವರಿದಿದೆ ಎಂದು ವರದಿಯು ಹೇಳಿದೆ.

English summary

Roots of economic recovery deepen in July After Covid restrictions ease Explained in Kannada

Roots of economic recovery deepen in July as Covid restrictions ease Explained in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X