For Quick Alerts
ALLOW NOTIFICATIONS  
For Daily Alerts

ಒಂದು ವರ್ಷದ ಹಿಂದೆ ಈ ಷೇರಿನಲ್ಲಿ 5 ಲಕ್ಷ ರೂ. ಹೂಡಿಕೆ ಮಾಡಿದ್ರೆ, ಈಗ 15 ಲಕ್ಷ ರೂ.!

|

ಇಂದು ಬಿಎಸ್‌ಇಯ ಆರಂಭಿಕ ವಹಿವಾಟಿನಲ್ಲಿ ಶ್ರೀ ರೇಣುಕಾ ಶುಗರ್ಸ್ ಲಿಮಿಟೆಡ್‌ನ ಷೇರು ಶೇ 10 ರಷ್ಟು ಏರಿಕೆ ಕಂಡು 52 ವಾರಗಳ ಗರಿಷ್ಠ 21.75 ರೂ.ಗೆ ತಲುಪಿದೆ. ಕಳೆದ ಒಂದು ವಾರದಲ್ಲಿ ಈ ಷೇರು ಶೇ 45 ರಷ್ಟು ಜಿಗಿತ ಕಂಡಿದೆ. ಜೊತೆಗೆ ಸಂಸ್ಥೆಯ ಮಾರುಕಟ್ಟೆ ಕ್ಯಾಪ್ 4,629.47 ಕೋಟಿ ರೂ.ಗೆ ಏರಿದೆ.

 

ಷೇರು ಇತಿಹಾಸವನ್ನು ಒಮ್ಮೆ ನೋಡಿದ್ರೆ, ಶ್ರೀ ರೇಣುಕಾ ಶುಗರ್ಸ್ ಷೇರು 2021 ರ ಜೂನ್ 2 ರಂದು 14.95 ರೂ.ಗೆ ದಿನದ ವಹಿವಾಟು ಕೊನೆಗೊಂಡಿತ್ತು. ಇದು ಇಂದಿನ ಬೆಳಿಗ್ಗೆ ವಹಿವಾಟಿನಲ್ಲಿ 21.75 ರೂ.ಗೆ ತಲುಪಿದೆ. ಒಂದು ವಾರದಲ್ಲಿ ಈ ಷೇರು ಶೇಕಡಾ 45.48ರಷ್ಟು ಆದಾಯವನ್ನು ನೀಡಿದೆ.

ಒಂದು ವರ್ಷದಲ್ಲಿ ಶೇ. 214ರಷ್ಟು ಏರಿಕೆ

ಒಂದು ವರ್ಷದಲ್ಲಿ ಶೇ. 214ರಷ್ಟು ಏರಿಕೆ

ಕಳೆದ 5 ದಿನ, 10 ದಿನ, 20 ದಿನ, 50 ದಿನ, 100 ದಿನ, ಮತ್ತು 200 ದಿನಗಳ ಸರಾಸರಿ ಬೆಳವಣಿಗೆಗಿಂತ ಇದು ಹೆಚ್ಚಾಗಿದೆ. ಅಲ್ಲದೆ ಕಳೆದ 12 ತಿಂಗಳಲ್ಲಿ ಶೇಕಡಾ 214 ರಷ್ಟು ಏರಿಕೆ ಕಂಡಿದೆ ಮತ್ತು ಈ ವರ್ಷದ ಆರಂಭದಿಂದ ಶೇಕಡಾ 78 ರಷ್ಟು ಏರಿಕೆಯಾಗಿದೆ.

5 ಲಕ್ಷ ರೂ. ಹೂಡಿಕೆ ಮಾಡಿದ್ರೆ 1 ವರ್ಷದಲ್ಲಿ 15 ಲಕ್ಷ ರೂ.

5 ಲಕ್ಷ ರೂ. ಹೂಡಿಕೆ ಮಾಡಿದ್ರೆ 1 ವರ್ಷದಲ್ಲಿ 15 ಲಕ್ಷ ರೂ.

ಹೌದು, ಇದನ್ನ ಓದಿದ್ರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಸದ್ಯದ ಮಾರುಕಟ್ಟೆ ಬೆಲೆ ಪ್ರಕಾರ ಇದು ಸಾಧ್ಯವಾಗಿದೆ. ಕಳೆದ ಒಂದು ವರ್ಷದ ಹಿಂದೆ ಈ ಷೇರುಗಳಲ್ಲಿ 5 ಲಕ್ಷ ರೂ.ಗಳ ಹೂಡಿಕೆ ಮಾಡಿದ್ದರೆ, ಇಂದು 15.60 ಲಕ್ಷ ರೂ.ಗೆ ಏರುತ್ತಿತ್ತು.

ಈ ಷೇರಿನಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದ್ದವರ ಹಣ, 1 ವರ್ಷದಲ್ಲಿ 10 ಲಕ್ಷ ರೂ. ಆಗಿದೆ!

2025ರ ಹೊತ್ತಿಗೆ ಪೆಟ್ರೋಲ್‌ನಲ್ಲಿ ಶೇ. 20ರಷ್ಟು ಎಥೆನಾಲ್ ಮಿಶ್ರಣದ ಗುರಿ
 

2025ರ ಹೊತ್ತಿಗೆ ಪೆಟ್ರೋಲ್‌ನಲ್ಲಿ ಶೇ. 20ರಷ್ಟು ಎಥೆನಾಲ್ ಮಿಶ್ರಣದ ಗುರಿ

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ತೈಲ ಆಮದನ್ನು ಕಡಿಮೆ ಮಾಡಲು ಪೆಟ್ರೋಲ್‌ನೊಂದಿಗೆ ಶೇ 20 ರಷ್ಟು ಎಥೆನಾಲ್ ಮಿಶ್ರಣವನ್ನು ಸಾಧಿಸುವ ಗುರಿ ದಿನಾಂಕವನ್ನು 2025ಕ್ಕೆ ಮುಂದುವರಿಸಲಾಗಿದೆ ಎಂದು ಹೇಳಿದ್ದಾರೆ.

ಎಥೆನಾಲ್ ತಯಾರಿಕೆ ಹೇಗೆ?

ಎಥೆನಾಲ್ ತಯಾರಿಕೆ ಹೇಗೆ?

ಕಬ್ಬಿನಿಂದ ತೆಗೆಯಲಾಗುವ ಈ ಎಥೆನಾಲ್ ಅನ್ನು ಕೆಟ್ಟು ಹೋಗಿರುವ ಆಹಾರ ಧಾನ್ಯಗಳಾದ ಗೋಧಿ ಮತ್ತು ನುಚ್ಚು ಅಕ್ಕಿ ಮತ್ತು ಕೃಷಿ ತ್ಯಾಜ್ಯದಿಂದ ಕಡಿಮೆ ಮಾಲಿನ್ಯದಿಂದ ಮಾಡಬಹುದಾಗಿದೆ. ಇದರ ಬಳಕೆಯ ಜೊತೆಗೆ ರೈತರಿಗೆ ಪರ್ಯಾಯ ಆದಾಯದ ಮೂಲವನ್ನು ಸಹ ನೀಡುತ್ತದೆ.

ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಎಥೆನಾಲ್ ಕುರಿತು ನೀಲ ನಕ್ಷೆಯನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಮೋದಿ, 2025ರಿಂದ 2030 ರವರೆಗೆ ಪೆಟ್ರೋಲ್‌ನಲ್ಲಿ ಶೇ. 20 ರಷ್ಟು ಎಥೆನಾಲ್ ಬೆರೆಸುವ ಗುರಿಯನ್ನು ಹೊಂದಲಾಗಿದೆ ಎಂದಿದ್ದಾರೆ.

ಪ್ರಸ್ತುತ ಪೆಟ್ರೋಲ್‌ಗೆ ಶೇ. 8.5ರಷ್ಟು ಎಥೆನಾಲ್ ಮಿಶ್ರಣ

ಪ್ರಸ್ತುತ ಪೆಟ್ರೋಲ್‌ಗೆ ಶೇ. 8.5ರಷ್ಟು ಎಥೆನಾಲ್ ಮಿಶ್ರಣ

ಪ್ರಸ್ತುತ, ಸುಮಾರು ಶೇಕಡಾ 8.5ರಷ್ಟು ಎಥೆನಾಲ್ ಅನ್ನು ಪೆಟ್ರೋಲ್ ನೊಂದಿಗೆ ಬೆರೆಸಲಾಗಿದ್ದು, 2014 ರಲ್ಲಿ ಇದು ಶೇ. 1ರಿಂದ 1.5 ರಷ್ಟಿತ್ತು. ಜೊತೆಗೆ ಎಥೆನಾಲ್ ಸಂಗ್ರಹವು 38 ಕೋಟಿ ಲೀಟರ್‌ನಿಂದ 320 ಕೋಟಿ ಲೀಟರ್‌ಗೆ ಏರಿದೆ ಎಂದು ಅವರು ಹೇಳಿದರು.

Read more about: share market sensex nifty
English summary

Rs 5 lakh in the stock a year ago would have grown to Rs 15.60 lakh today

Share of Shree Renuka Sugars Limited rose 10 per cent to hit a 52-week high of Rs 21.75 in early trade on BSE today.
Story first published: Wednesday, June 9, 2021, 21:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X