For Quick Alerts
ALLOW NOTIFICATIONS  
For Daily Alerts

ಕುಸಿದ ರುಪಾಯಿ ಮೌಲ್ಯ; ಅಮೆರಿಕ ಡಾಲರ್ ವಿರುದ್ಧ ರು. 76.37

|

ಅಮೆರಿಕ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಏಪ್ರಿಲ್ 8ರ ಬುಧವಾರದಂದು 74 ಪೈಸೆ ಇಳಿಕೆಯಾಗಿ, 76.37ಕ್ಕೆ ದಿನದ ವಹಿವಾಟು ಮುಗಿಸಿದೆ. ಇನ್ನು ದೇಶೀಯ ಷೇರು ಮಾರ್ಕೆಟ್ ನಲ್ಲಿ ಭಾರೀ ಏರಿಳಿತ ಕಂಡುಬಂತು. ಬುಧವಾರದಂದು ರುಪಾಯಿ 18 ಪೈಸೆ ಇಳಿಕೆಯೊಂದಿಗೆ 75.81 ಯೊಂದಿಗೆ ದಿನದ ವಹಿವಾಟು ಆರಂಭಿಸಿತು. ಮಂಗಳವಾರದಂದು 55 ಪೈಸೆಗಳ ಗಳಿಕೆ ಕಂಡಿತ್ತು ರುಪಾಯಿ.

 

ದಿನದ ಗರಿಷ್ಠ ಮಟ್ಟದಿಂದ 1334 ಪಾಯಿಂಟ್ ಕುಸಿದ ಸೆನ್ಸೆಕ್ಸ್

ಇನ್ನು ದೇಶೀಯ ಷೇರು ಮಾರ್ಕೆಟ್ ನಲ್ಲಿ ಖರೀದಿ ಕಂಡುಬಂದಿತ್ತು. ಬುಧವಾರದಂದು ಷೇರುಪೇಟೆ ಸೂಚ್ಯಂಕವಾದ ಸೆನ್ಸೆಕ್ಸ್ 314.03 ಪಾಯಿಂಟ್ ಕುಸಿದು, 29,753.18 ಪಾಯಿಂಟ್ ನಲ್ಲಿ ವ್ಯವಹಾರ ಮುಗಿಸಿದೆ. ಇನ್ನು ನಿಫ್ಟಿ 84.20 ಪಾಯಿಂಟ್ ಇಳಿದು, 8708 ಪಾಯಿಂಟ್ ನೊಂದಿಗೆ ದಿನದ ವಹಿವಾಟು ಚುಕ್ತಾ ಮಾಡಿದೆ.

ಕುಸಿದ ರುಪಾಯಿ ಮೌಲ್ಯ; ಅಮೆರಿಕ ಡಾಲರ್ ವಿರುದ್ಧ ರು. 76.37

ಹೂಡಿಕೆದಾರರಿಗೆ ಡಾಲರ್ ಮೇಲಿನ ಹೂಡಿಕೆ ಮತ್ತೆ ಸುರಕ್ಷಿತ ಎಂಬ ಭಾವನೆ ಮೂಡಿದೆ. ಕೊರೊನಾ ವ್ಯಾಪಿಸಿರುವುದರಿಂದ ಯುರೋಪ್ ನಲ್ಲಿ ಭಾರೀ ಬಿಕ್ಕಟ್ಟು ಸೃಷ್ಟಿಯಾಗಿದೆ. ತೈಲ ಬೆಲೆ ಬುಧವಾರದಂದು ನಷ್ಟವನ್ನು ತುಂಬಿಕೊಂಡಿತು. ಗುರುವಾರದಂದು ಒಪೆಕ್ ಸದಸ್ಯರ ಸಭೆಯ ಬಗ್ಗೆ ಸಕಾರಾತ್ಮಕ ಫಲಿತಾಂಶದ ನಿರೀಕ್ಷೆ ಇರುವುದರಿಂದ ಈ ಬೆಳವಣಿಗೆ ಕಂಡುಬಂದಿದೆ.

English summary

Rupee Value Fall To 76.37 Against US Dollar

India rupee value fall to 76.37 against US dollar on April 8th, Wednesday. Here is the complete details.
Story first published: Wednesday, April 8, 2020, 20:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X