For Quick Alerts
ALLOW NOTIFICATIONS  
For Daily Alerts

ಸ್ಯಾಮ್‌ಸಂಗ್ ಗ್ಯಾಲಕ್ಸಿ A12, A02x ಸ್ಮಾರ್ಟ್‌ಪೋನ್ ಬಿಡುಗಡೆ: ಬೆಲೆ, ಫೀಚರ್ಸ್ ತಿಳಿದುಕೊಳ್ಳಿ

|

ದಕ್ಷಿಣ ಕೊರಿಯಾ ಮೂಲದ ದೈತ್ಯ ಎಲೆಕ್ಟ್ರಾನಿಕ್ಸ್‌ ಕಂಪನಿ ಸ್ಯಾಮ್‌ಸಂಗ್ ಈಗಾಗಲೇ ಹಲವು ಬಜೆಟ್ ಆಧಾರಿತ ಸ್ಮಾರ್ಟ್‌ಫೋನ್‌ನೊಂದಿಗೆ ಹೆಸರುವಾಸಿಯಾಗಿದ್ದು, ಇದೀಗ A ಸರಣಿಯಲ್ಲಿ ಗ್ಯಾಲಕ್ಸಿ A12 ಮತ್ತು ಗ್ಯಾಲಕ್ಸಿ A02s ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಬಜೆಟ್ ಸ್ನೇಹಿ ಮೊಬೈಲ್ ಆದ ಹೊಸ ಗ್ಯಾಲಕ್ಸಿ A12 ಸ್ಮಾರ್ಟ್‌ಫೋನ್‌ 3GB +32GB, 4GB+64GB, 6GB+128GB ಆಂತರಿಕ ಸ್ಟೋರೇಜ್‌ನ ಮೂರು ವೇರಿಯೆಂಟ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಅಲ್ಲದೆ ಗ್ಯಾಲಕ್ಸಿ A02s ಸ್ಮಾರ್ಟ್‌ಫೋನ್‌ 3GB+32GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಆಕ್ಟಾ ಕೋರ್‌ ಪ್ರೊಸೆಸರ್‌ ಹೊಂದಿರುವ ಎರಡು ಸ್ಮಾರ್ಟ್‌ಫೋನ್‌ಗಳು 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿವೆ. 1TB ವರೆಗೆ ಸ್ಟೋರೇಜ್ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A12, A02x ಸ್ಮಾರ್ಟ್‌ಪೋನ್ ಬಿಡುಗಡೆ

 

ಇನ್ನು A12 ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಹೊಂದಿದೆ. 64 ಜಿಬಿ ಸ್ಟೋರೇಜ್ ಹೊಂದಿರುವ ಮೊಬೈಲ್‌ಗೆ 179 ಯುರೋ (ಅಂದಾಜು 15,700 ರೂ) ಬೆಲೆ ಆಗಿದ್ದು, 128 ಜಿಬಿ ಸ್ಟೋರೇಜ್ ಹೊಂದಿರುವ ಮೊಬೈಲ್‌ಗೆ 199 ಯುರೋ (ಅಂದಾಜು 17,500 ರೂ) ಆಗಿದೆ.

A02s ಸ್ಮಾರ್ಟ್‌ಫೋನ್‌ 3ಜಿಬಿ RAM ಮತ್ತು 32GB ಸ್ಟೋರೇಜ್‌ಗೆ 150 ಯುರೋ (ಅಂದಾಜು 13,200 ರೂ) ಆಗಿದೆ.

English summary

Samsung announces Galaxy A12 and Galaxy A02s: Price and specifications in Kannada

Samsung has launched Galaxy A12 in three different memory variants these are - 3GB RAM with 32GB internal memory, 4GB RAM with 64GB internal memory and 6GB RAM with 128GB internal memory
Company Search
COVID-19