For Quick Alerts
ALLOW NOTIFICATIONS  
For Daily Alerts

2021ರ ಆರಂಭದಲ್ಲಿ ಮತ್ತೆ ಪ್ರವಾಸಿಗರ ವೀಸಾ ನೀಡಲಿದೆ ಸೌದಿ ಅರೇಬಿಯಾ

|

ಮುಂದಿನ ವರ್ಷದ ಆರಂಭದಲ್ಲಿ ಪ್ರವಾಸಿಗರ ವೀಸಾವನ್ನು ನೀಡುವುದಕ್ಕೆ ಸೌದಿ ಅರೇಬಿಯಾ ಯೋಜನೆ ಹಾಕಿಕೊಂಡಿದೆ. ಕೊರೊನಾ ನಿಯಂತ್ರಣಕ್ಕಾಗಿ ಹಲವು ತಿಂಗಳಿಂದ ನಿರ್ಬಂಧ ಹಾಕಲಾಗಿತ್ತು. ಸೌದಿ ಅರೇಬಿಯಾಗೆ ಆದಾಯಕ್ಕಾಗಿ ತೈಲದ ಮೇಲೆ ಅವಲಂಬನೆ ವಿಪರೀತ ಹೆಚ್ಚು. ಅದನ್ನು ಕಡಿಮೆ ಮಾಡಬೇಕು ಎಂಬುದು ಅಲ್ಲಿನ ರಾಜ ಮೊಹ್ಮದ್ ಬಿನ್ ಸಲ್ಮಾನ್ ಗುರಿ. ಅದಕ್ಕೆ ಮುಖ್ಯ ಆಧಾರವೇ ಪ್ರವಾಸೋದ್ಯಮ.

ಸೌದಿ ಅರೇಬಿಯಾದಿಂದ ಜಪಾನ್ ಗೆ ವಿಶ್ವದಲ್ಲೇ ಮೊದಲ ಬಾರಿಗೆ ಅಮೋನಿಯಾ ರವಾನೆ

49 ರಾಷ್ಟ್ರಗಳಿಗೆ ಹೊಸ ವೀಸಾ ನಿಯಮ ತರುವ ಮೂಲಕ ಸೆಪ್ಟೆಂಬರ್ 2019ರಲ್ಲಿ ಸೌದಿ ಅರೇಬಿಯಾವು ಪ್ರವಾಸಿಗರಿಗೆ ಮುಕ್ತವಾಯಿತು. 2030ರ ಹೊತ್ತಿಗೆ ಈ ವಲಯದಿಂದ (ಪ್ರವಾಸೋದ್ಯಮ) ಜಿಡಿಪಿಗೆ 10% ಆದಾಯ ಬರಬೇಕು ಎಂಬುದು ಉದ್ದೇಶವಾಗಿದೆ.

ಮುಂದಿನ ವರ್ಷದ ಆರಂಭದಲ್ಲಿ ಪ್ರವಾಸಿ ವೀಸಾ
 

ಮುಂದಿನ ವರ್ಷದ ಆರಂಭದಲ್ಲಿ ಪ್ರವಾಸಿ ವೀಸಾ

"ಪ್ರವಾಸಿ ವೀಸಾಗೆ ಈ ತನಕ ನಾವು ಮುಂದಿನ ವರ್ಷದ ಆರಂಭ ಅಂತ ಮಾತನಾಡುತ್ತಿದ್ದೇವೆ. ಒಂದು ವೇಳೆ ಪರಿಸ್ಥಿತಿ ಉತ್ತಮವಾದಲ್ಲಿ ಅಥವಾ ಲಸಿಕೆ ವಿಚಾರದಲ್ಲಿ ಯಾವುದೇ ಸಕಾರಾತ್ಮಕ ಬದಲಾವಣೆ ಆದಲ್ಲಿ ನಾವಿನ್ನೂ ಬೇಗ ಆರಂಭಿಸಬಹುದು," ಎಂದು ವರ್ಚುವಲ್ ಸಂದರ್ಶನದಲ್ಲಿ ಅಹ್ಮದ್ ಅಲ್- ಖತೀಬ್ ಹೇಳಿದ್ದಾರೆ.

ದೇಶೀ ಪ್ರವಾಸೋದ್ಯಮ ಮೂವತ್ತು ಪರ್ಸೆಂಟ್ ಹೆಚ್ಚಳ

ದೇಶೀ ಪ್ರವಾಸೋದ್ಯಮ ಮೂವತ್ತು ಪರ್ಸೆಂಟ್ ಹೆಚ್ಚಳ

ಈ ಕೊರೊನಾ ಬಿಕ್ಕಟ್ಟು ಎಲ್ಲರಿಗೂ ಸಮಸ್ಯೆ ತಂದಿದೆ. ಜನವರಿಯಿಂದ ಮೇ ಲಾಕ್ ಅಪ್ ಅವಧಿಯಲ್ಲಿ ಭಾರೀ ಬೇಸಿಗೆ ಕಂಡಿದ್ದೇವೆ. ದೇಶೀ ಪ್ರವಾಸೋದ್ಯಮದಲ್ಲಿ ವರ್ಷದಿಂದ ವರ್ಷಕ್ಕೆ 30% ಹೆಚ್ಚಳ ಆಗಿದೆ. ಇದು ನಮ್ಮ ನಿರೀಕ್ಷೆಗೂ ಮೀರಿದ್ದು ಎಂದು ತಿಳಿಸಿದ್ದಾರೆ ಖತೀಬ್.

ಕೊರೊನಾ ಸೋಂಕಿತರು ಹಾಗೂ ಸಾವಿಗೀಡಾದವರು

ಕೊರೊನಾ ಸೋಂಕಿತರು ಹಾಗೂ ಸಾವಿಗೀಡಾದವರು

ಸೌದಿಯ ಬೇಸಿಗೆ ಅಭಿಯಾನ ಹತ್ತು ಪ್ರವಾಸಿ ಕ್ಷೇತ್ರವನ್ನು ಪ್ರಚಾರ ಮಾಡಿತು. ಸಮುದ್ರ ಕಿನಾರೆ, ಅರಣ್ಯ, ಬೆಟ್ಟ, ಐತಿಹಾಸ ಸ್ಥಳಗಳು ಹೀಗೆ ನಾಗರಿಕರು ಮತ್ತು ನಿವಾಸಿಗಳಿಗೆ ವಿದೇಶಕ್ಕೆ ತೆರಳುವ ಬದಲಿಗೆ ಅಲ್ಲೇ ಆಕರ್ಷಿಸಲಾಯಿತು. ಇದರಿಂದಾಗಿ ಹೋಟೆಲ್ ಗಳಲ್ಲಿ ಶೇಕಡಾ 80ರಷ್ಟು ತುಂಬಿರುತ್ತಿತ್ತು. ಸೌದಿ ಅರೇಬಿಯಾದಲ್ಲಿ 3,32,790 ಕೊರೊನಾ ಸೋಂಕಿತ ಹಾಗೂ 4655 ಮಂದಿ ಅದಕ್ಕೆ ಸಂಬಂಧಿಸಿದಂತೆ ಸಾವನ್ನು ಕಂಡಿದ್ದಾರೆ. ಕಳೆದ ಕೆಲ ವಾರದಿಂದ ಸೋಂಕಿತ ಪ್ರಕರಣ ಕಡಿಮೆ ಆಗುತ್ತಾ ಬಂದಿದೆ.

English summary

Saudi Arabia Plans To Start Issue Tourist Visa By Early Next Year

Saudi Arabia said that, it has plan to issue tourist visa by early next year, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X