For Quick Alerts
ALLOW NOTIFICATIONS  
For Daily Alerts

ಸೌದಿ ಅರೇಬಿಯಾದ ಪಿಐಎಫ್ ನಿಂದ ಜಿಯೋದಲ್ಲಿ 10,750 ಕೋಟಿ ಹೂಡಿಕೆ

|

ಸೌದಿ ಅರೇಬಿಯಾದ ವೆಲ್ತ್ ಫಂಡ್ ಆದ ಪಬ್ಲಿಕ್ ಇನ್ವೆಸ್ಟ್ ಮೆಂಟ್ ಫಂಡ್ (ಪಿಐಎಫ್) ರಿಲಯನ್ಸ್ ಇಂಡಸ್ಟ್ರೀಸ್ ಗೆ ಸೇರಿದ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ 2.33 ಪರ್ಸೆಂಟ್ ಪಾಲನ್ನು 150 ಕೋಟಿ ಅಮೆರಿಕನ್ ಡಾಲರ್ ಗೆ (10,750 ಕೋಟಿ ರುಪಾಯಿಗೂ ಹೆಚ್ಚು) ಖರೀದಿ ಮಾಡಲಿದೆ ಎಂದು ಸೋಮವಾರ ಗಲ್ಫ್ ನ್ಯೂಸ್ ವರದಿ ಮಾಡಿದೆ. ಆದರೆ ಈ ಸುದ್ದಿಯ ಮೂಲದ ಬಗ್ಗೆ ವರದಿಯಲ್ಲಿ ಯಾವುದೇ ಮಾಹಿತಿ ಇಲ್ಲ.

ಎರಡೂವರೆ ತಿಂಗಳೊಳಗೆ 1 ಲಕ್ಷ ಕೋಟಿಯ 9 ಡೀಲ್; ಇದು ಜಿಯೋ ಕಮಾಲ್

ಒಂದು ವೇಳೆ ಪಿಐಎಫ್ ನಿಂದ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಹೂಡಿಕೆಯಾದಲ್ಲಿ ಒಟ್ಟಾರೆ 25 ಪರ್ಸೆಂಟ್ ನಷ್ಟು ಈಕ್ವಿಟಿಯನ್ನು ಮಾರಿದಂತಾಗುತ್ತದೆ. ಹಣಕಾಸು ಹೂಡಿಕೆದಾರರಿಗೆ ಇದಕ್ಕಿಂತ ಹೆಚ್ಚಿನ ಷೇರನ್ನು ಕಂಪೆನಿ ನೀಡುವುದಿಲ್ಲ ಎಂದು ಹೇಳಲಾಗಿದ್ದು, ಇನ್ನು ಮುಂದೆ ಯಾರಾದರೂ ಜಿಯೋದಲ್ಲಿ ಹೂಡಿಕೆ ಮಾಡಬೇಕಿದ್ದರೆ ಅವರು ಸ್ಟ್ರಾಟೆಜಿಕ್ ಹೂಡಿಕೆದಾರರು ಮಾತ್ರ ಆಗಿರುತ್ತಾರೆ.

ಸೌದಿ ಅರೇಬಿಯಾದ ಪಿಐಎಫ್ ನಿಂದ ಜಿಯೋದಲ್ಲಿ 10,750 ಕೋಟಿ ಹೂಡಿಕೆ

 

ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಎಂಟು ವಾರದೊಳಗೆ ಜಿಯೋದಲ್ಲಿನ 22.38 ಪರ್ಸೆಂಟ್ ಷೇರಿನ ಪಾಲು ಮಾರಾಟದ ಮೂಲಕ 1.04 ಲಕ್ಷ ಕೋಟಿ ರುಪಾಯಿ ಸಂಗ್ರಹ ಮಾಡಿದೆ. ಕಳೆದ ಶನಿವಾರದಂದು ಟಿಪಿಜಿಗೆ 4,546.80 ಕೋಟಿಗೆ 0.93 ಪರ್ಸೆಂಟ್ ಜಿಯೋ ಷೇರು ಮಾರುವುದಾಗಿ ಹಾಗೂ ಕ್ಯಾಟೆರ್ ಟನ್ ಗೆ 0.39 ಪರ್ಸೆಂಟ್ ಅನ್ನು 1,894.50 ಕೋಟಿಗೆ ಮಾರಾಟ ಮಾಡುವುದಾಗಿ ರಿಲಯನ್ಸ್ ಹೇಳಿತ್ತು.

English summary

Saudi Arabia's PIF All Set To Invest In Reliance Jio Platform

According to Gulf news report, Saudi Arabia's PIF all set to invest 10,750 crore in Reliance Jio platform.
Company Search
COVID-19