For Quick Alerts
ALLOW NOTIFICATIONS  
For Daily Alerts

ಎಸ್‌ಬಿ ಠೇವಣಿಗಳ ಮೇಲಿನ ಬಡ್ಡಿ ದರ ತಗ್ಗಿಸಿದ ಎರಡು ಪ್ರಮುಖ ಬ್ಯಾಂಕ್‌ಗಳು

|

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಐಸಿಐಸಿಐ ಬ್ಯಾಂಕ್‌ ಗಳು ಉಳಿತಾಯ ಖಾತೆಗಳ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ತಗ್ಗಿಸಿವೆ.

 

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಶೇ 0.5 ರಷ್ಟು ಬಡ್ಡಿ ದರ ತಗ್ಗಿಸಿದರೆ, ಐಸಿಐಸಿಐ ಬ್ಯಾಂಕ್ 0.25 ರಷ್ಟು ತಗ್ಗಿಸಿದೆ. ಇದರಿಂದ ಉಳಿತಾಯ ಮಾಡುವವರಿಗೆ ನಿರಾಸೆಯಾಗಿದೆ.

HDFC ಬ್ಯಾಂಕ್‌ Q4 ನಿವ್ವಳ ಲಾಭ 6,928 ಕೋಟಿ ರುಪಾಯಿ ಏರಿಕೆ

ಮೇ 31ರಿಂದ ಈ ಬಡ್ಡಿ ದರಗಳು ಅನ್ವಯವಾಗಲಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಎಸ್‌ಬಿಐ ಎರಡನೇ ಬಾರಿಗೆ ಬಡ್ಡಿ ದರ ಇಳಿಸಿದೆ. ಎಸ್‌ಬಿಐ ಏಪ್ರಿಲ್‌ನಲ್ಲಿ ಶೇ 0.25ರಷ್ಟು ಬಡ್ಡಿ ದರ ತಗ್ಗಿಸಿತ್ತು. ಈ ಮೂಲಕ ಎಸ್‌ಬಿಐ, ಎಲ್ಲ ಹಂತಗಳ ಉಳಿತಾಯ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ 2.70ಕ್ಕೆ ಇಳಿಸಿದೆ.

ಎಸ್‌ಬಿ ಠೇವಣಿಗಳ ಮೇಲಿನ ಬಡ್ಡಿ ದರ ತಗ್ಗಿಸಿದ ಎರಡು ಪ್ರಮುಖ ಬ್ಯಾಂಕ್‌

ಐಸಿಐಸಿಐ ಬ್ಯಾಂಕ್‌ ಕೂಡ 50 ಲಕ್ಷ ರುಪಾಯಿಗಿಂತ ಕಡಿಮೆ ಮೊತ್ತದ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ 3.25 ರಿಂದ ಶೇ 3ಕ್ಕೆ ಇಳಿಸಿದೆ. ಹೊಸ ದರ ಗುರುವಾರದಿಂದ ಜಾರಿಗೆ ಬರಲಿದೆ. ಹೊಸ ಸಾಲಗಳಿಗೆ ಬೇಡಿಕೆ ಕಡಿಮೆಯಾಗಿರುವುದು ಮತ್ತು ಬ್ಯಾಂಕ್‌ಗಳ ಬಳಿ ನಗದು ಪ್ರಮಾಣ ಹೆಚ್ಚಿರುವುದರಿಂದ ಬಡ್ಡಿ ದರಗಳು ಕಡಿಮೆಯಾಗುತ್ತಿವೆ ಎಂದು ವರದಿಗಳು ತಿಳಿಸಿವೆ.

English summary

SBI And ICICI Banks Cuts Interest Rates On SB Accounts

SBI And ICICI Banks Cuts Interest Rates On SB Accounts. SBI Bank 0.5%, ICICI 0.25% Cuts Interest.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X