ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಹೋಮ್ ಲೋನ್ ಮೇಲೆ ವಿನಾಯಿತಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (SBI) ಹೋಮ್ ಲೋನ್ ಬಡ್ಡಿ ದರದ ಮೇಲೆ 25 bps ತನಕ ವಿನಾಯಿತಿ ಘೋಷಣೆ ಮಾಡಲಾಗಿದೆ. ಈ ಮೂಲಕ ಎಸ್ ಬಿಐ ಹೋಮ್ ಲೋನ್ ಗ್ರಾಹಕರಿಗೆ 75 ಲಕ್ಷ ರುಪಾಯಿ ಮೇಲೆ ಸಾಲ ಪಡೆದಾಗ CIBIL ಸ್ಕೋರ್ ಆಧಾರದಲ್ಲಿ 25 ಬೇಸಿಸ್ ಪಾಯಿಂಟ್ ವಿನಾಯಿತಿ ದೊರೆಯುತ್ತದೆ. ಆದರೆ Yono ಮೂಲಕ ಅಪ್ಲೈ ಮಾಡಬೇಕು.
ಹಬ್ಬದ ಸೀಸನ್ ಆಫರ್ ಗಳ ವಿಸ್ತರಣೆ ರೂಪದಲ್ಲಿ ಈಚೆಗೆ ಇದನ್ನು ಘೋಷಣೆ ಮಾಡಲಾಗಿದೆ. ಕ್ರೆಡಿಟ್ ಸ್ಕೋರ್ ಆಧಾರದಲ್ಲಿ ಈ ಹಿಂದೆ 10ರಿಂದ 20 bps ವಿನಾಯಿತಿ ನೀಡಲಾಗುತ್ತಿತ್ತು. ಅದು 30 ಲಕ್ಷ ಮೇಲ್ಪಟ್ಟು 2 ಕೋಟಿ ರುಪಾಯಿವರೆಗೂ ಅನ್ವಯಿಸುತ್ತಿತ್ತು. ಇದೇ ರೀತಿಯ ವಿನಾಯಿತಿಯು 3 ಕೋಟಿ ರುಪಾಯಿ ತನಕದ ಸಾಲಕ್ಕೂ 8 ಮೆಟ್ರೋ ನಗರಗಳಲ್ಲಿ ಅನ್ವಯ ಆಗುತ್ತದೆ.
ಮನೆ ಕಟ್ಟುವ ಖರ್ಚಿನಲ್ಲಿ ಉಳಿಸಬಹುದು ಶೇಕಡಾ 25ರಷ್ಟು ಹಣ; ಹೇಗೆ ತಿಳಿಯೋಣ
ಇನ್ನು Yono ಮೂಲಕ ಅಪ್ಲೈ ಮಾಡಿದಲ್ಲಿ ಹೆಚ್ಚುವರಿಯಾಗಿ 5 ಬೇಸಿಸ್ ಪಾಯಿಂಟ್ ವಿನಾಯಿತಿ ದೊರೆಯುತ್ತದೆ. ಸದ್ಯಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 30 ಲಖ್ಷ ರುಪಾಯಿಯೊಳಗಿನ ಗೃಹ ಸಾಲವು 6.90%ಗೆ ಆರಂಭವಾಗುತ್ತದೆ ಮತ್ತು 30 ಲಕ್ಷ ರುಪಾಯಿ ಮೇಲ್ಪಟ್ಟ ಸಾಲಕ್ಕೆ ಬಡ್ಡಿ ದರ 7% ಇದೆ.
ಈಗಾಗಲೇ ಬ್ಯಾಂಕ್ ನಿಂದ ರೀಟೇಲ್ ಗ್ರಾಹಕರಿಗೆ ವಿಶೇಷ ಆಫರ್ ಗಳನ್ನು ಘೋಷಣೆ ಮಾಡಲಾಗಿದೆ. ಕಾರು, ಚಿನ್ನ ಹಾಗೂ ಪರ್ಸನಲ್ ಲೋನ್ ಮೇಲೆ ಶೇಕಡಾ 100ರಷ್ಟು ಪ್ರೊಸೆಸಿಂಗ್ ಶುಲ್ಕ ಮನ್ನಾ, ರೀಟೇಲ್ ಗ್ರಾಹಕರಿಗೆ 7.5% ಬಡ್ಡಿ ದರದಲ್ಲಿ ಕಾರಿನ ಸಾಲ. ಚಿನ್ನದ ಮೇಲಿನ ಸಾಲ 7.5%, ಪರ್ಸನಲ್ ಬಡ್ಡಿ ದರ 9.6%ಗೆ ನೀಡಲಾಗುತ್ತಿದೆ.
ಗೃಹ ಸಾಲದ ಮಾರ್ಕೆಟ್ ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪಾಲು 34% ಇದ್ದರೆ, ವಾಹನ ಸಾಲದ ಸೆಗ್ಮೆಂಟ್ ನಲ್ಲಿ 33% ಇದೆ.