For Quick Alerts
ALLOW NOTIFICATIONS  
For Daily Alerts

SBI ಕಾರ್ಡ್ಸ್ ಷೇರು ವಿತರಣೆಗಿಂತ 9.50 ಪರ್ಸೆಂಟ್ ಕಡಿಮೆ ದರಕ್ಕೆ ವಹಿವಾಟು ಅಂತ್ಯ

|

ಎಸ್ ಬಿಐ ಕಾರ್ಡ್ಸ್ ಅಂಡ್ ಪೇಮೆಂಟ್ಸ್ (ಎಸ್ ಬಿಐ ಕಾರ್ಡ್) ಲಿಸ್ಟಿಂಗ್ ನ ಮೊದಲ ದಿನವಾದ ಸೋಮವಾರ ಆರಂಭದಲ್ಲಿ ವಿತರಣೆ ಬೆಲೆಗಿಂತ ಕಡಿಮೆ ದರಕ್ಕೆ, ಅಂದರೆ 658 ರುಪಾಯಿಗೆ ಬಿಎಸ್ ಇ ಸೂಚ್ಯಂಕದಲ್ಲಿ ವಹಿವಾಟು ಆರಂಭಿಸಿತು. ದಿನದ ಕೊನೆಗೆ 9.51 ಪರ್ಸೆಂಟ್ ಕಡಿಮೆ ಬೆಲೆಗೆ, 683.20ಕ್ಕೆ ದಿನಾಂತ್ಯದ ವಹಿವಾಟು ಮುಗಿಸಿತು.

755 ರುಪಾಯಿಯಂತೆ ಐಪಿಒನಲ್ಲಿ ವಿತರಿಸಲಾಗಿದ್ದ ಎಸ್ ಬಿಐ ಕಾರ್ಡ್ ಷೇರುಗಳು 780-800ರ ಸಮೀಪ ಲಿಸ್ಟ್ ಆಗಬಹುದು ಎಂದು ತಜ್ಞರು ನಿರೀಕ್ಷೆ ಮಾಡಿದ್ದರು. ಮಾರ್ಚ್ 2ರಿಂದ 5ನೇ ತಾರೀಕಿನ ಮಧ್ಯೆ ಐಪಿಒ ಮುಕ್ತವಾಗಿತ್ತು. ಆ ಅವಧಿ ಮುಗಿದ ಮೇಲೆ, ಎಸ್ ಬಿಐ ಕಾರ್ಡ್ ಷೇರುಗಳು 30-35 ಪರ್ಸೆಂಟ್ ಪ್ರೀಮಿಯಂಗೆ ಲಿಸ್ಟಿಂಗ್ ಆಗುವ ನಿರೀಕ್ಷೆ ಇತ್ತು.

 

ಸರ್ಕಾರಿ ಸ್ವಾಮ್ಯದ ಐಆರ್ ಸಿಟಿಸಿ ಷೇರಿಗಿಂತಲೂ ಹೆಚ್ಚಿನ ಲಾಭ ಮಾಡಿಕೊಡಬಹುದು ಎಂಬ ನಿರೀಕ್ಷೆಯೂ ಇತ್ತು. ಯಾವಾಗ ಎಸ್ ಬಿಐ ಕಾರ್ಡ್ಸ್ ಐಪಿಒ ಘೋಶಃಅಣೆ ಮಾಡಲಾಯಿತೋ ಆಗ ಗ್ರೇ ಮಾರ್ಕೆಟ್ ನಲ್ಲಿ ಷೇರಿನ ಪ್ರೀಮಿಯಂ 350 ರುಪಾಯಿ ಇತ್ತು. ರೀಟೇಲ್ ಹೂಡಿಕೆದಾರರು ಹಾಗೂ ಸಿಬ್ಬಂದಿಗೆ ಮೀಸಲಿರಿಸಿದ್ದ ಷೇರಿನ ಪ್ರಮಾಣಕ್ಕೆ ಕ್ರಮವಾಗಿ 2.50 ಪಟ್ಟು ಹಾಗೂ 4.74 ಪಟ್ಟು ಹೆಚ್ಚು ಬೇಡಿಕೆ ಬಂದಿತ್ತು.

SBI ಕಾರ್ಡ್ಸ್ ಷೇರು ವಿತರಣೆಗಿಂತ  9.50 ಪರ್ಸೆಂಟ್ ಕಡಿಮೆ ದರಕ್ಕೆ

ವಿತರಣೆ ಬೆಲೆಯಾದ 755 ರುಪಾಯಿಗಿಂತಲೂ 9.50 ಪರ್ಸೆಂಟ್ ಕಡಿಮೆ ದರಕ್ಕೆ ಎಸ್ ಬಿಐ ಕಾರ್ಡ್ಸ್ ಷೇರು ಸೋಮವಾರದ ವಹಿವಾಟು ಕೊನೆಗೊಳಿಸಿದೆ.

English summary

SBI Cards Share Listed At 12 Percent Discount

SBI Cards share listed at 12 percent discount on Monday. Share issued at 755. But Listed at 658. Here is the details.
Story first published: Monday, March 16, 2020, 17:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X