For Quick Alerts
ALLOW NOTIFICATIONS  
For Daily Alerts

ಶಾಪಿಂಗ್ ಪ್ರಿಯರಿಗಾಗಿ ಎಸ್ಬಿಐ ಯೋನೋದಿಂದ ಹೊಸ ಕೊಡುಗೆ

|

ಬೆಂಗಳೂರು, ಏಪಿರ್ಲ್ 4: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ವಿಶಿಷ್ಟ ಶಾಪಿಂಗ್ ಕಾರ್ನೀವಲ್‌ನ ಮೂರನೇ ಆವೃತ್ತಿಯನ್ನು ಘೋಷಿಸಿದೆ. 'ಯೋನೊ ಸೂಪರ್ ಸೇವಿಂಗ್ ಡೇಸ್' ಏಪ್ರಿಲ್ 4ರಿಂದ ಆರಂಭವಾಗಿದೆ.

 

ಏಪ್ರಿಲ್ 4 ರಿಂದ ಪ್ರಾರಂಭವಾಗಿ ನಾಲ್ಕು ದಿನಗಳ ಮಟ್ಟಿಗೆ ಈ ಶಾಪಿಂಗ್ ಕೊಡುಗೆ ಲಾಭ ಪಡೆಯಬಹುದು ಎಸ್‌ಬಿಐನ ಯೋನೊ ಬಳಸಿ ವಿಶೇಷ ಶ್ರೇಣಿಯ ರಿಯಾಯಿತಿ ಮತ್ತು ಕ್ಯಾಶ್‌ಬ್ಯಾಕ್ ಗಳಿಸಬಹುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

"ಸತತ 3 ನೇ ತಿಂಗಳು ಯೋನೊ ಸೂಪರ್ ಸೇವಿಂಗ್ ಡೇಸ್ ಸೌಲಭ್ಯ ಬಳಸಬಹುದಾಗಿದ್ದು, ಬಳಕೆದಾರರು ಮತ್ತು ವ್ಯಾಪಾರಿ ಪಾಲುದಾರರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಮಾರ್ಚ್ 4 ರಿಂದ 7 ರವರೆಗೆ ನಡೆದ ಉಳಿತಾಯ ಕೊಡುಗೆಯ 2ನೇ ಆವೃತ್ತಿಯ ವಹಿವಾಟಿನಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ'' ಎಸ್ಬಿಐಯ ಪ್ರಕಟಣೆ ತಿಳಿಸಿದೆ.

ಶಾಪಿಂಗ್ ಪ್ರಿಯರಿಗಾಗಿ ಎಸ್ಬಿಐ ಯೋನೋದಿಂದ ಹೊಸ ಕೊಡುಗೆ

ಏಪ್ರಿಲ್ 4 ಮತ್ತು ಏಪ್ರಿಲ್ 7, 2021 ರ ನಡುವೆ ಮೂರನೇ ಆವೃತ್ತಿಯಲ್ಲಿ ಟ್ರಾವೆಲ್, ಆತಿಥ್ಯ, ಆರೋಗ್ಯ ಮತ್ತು ಆನ್‌ಲೈನ್ ಶಾಪಿಂಗ್ ಸೇರಿದಂತೆ ಪ್ರಮುಖ ವಿಭಾಗಗಳಲ್ಲಿ ಅತ್ಯುತ್ತಮವಾದ ಕೊಡುಗೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಈ ಶಾಪಿಂಗ್ ಉತ್ಸವದಲ್ಲಿ ತನ್ನ 34.5 ಮಿಲಿಯನ್ ಬಳಕೆದಾರರಿಗೆ ಅಂತಿಮ ಶಾಪಿಂಗ್ ಆನಂದವನ್ನು ನೀಡಲು, ಎಸ್‌ಬಿಐ, ಅಮೆಜಾನ್, ಅಪೊಲೊ 24/7, ಈಸ್‌ಮೈಟ್ರಿಪ್, ಓಯೋ ಮತ್ತು @ಹೋಮ್ ಸೇರಿದಂತೆ ಮುಂತಾದ ಸಂಸ್ಥೆಗಲ ಜೊತೆಗೆ ಯೋನೊ ಪಾಲುದಾರಿಕೆ ಪಡೆದುಕೊಂಡಿದೆ.

ಏಪ್ರಿಲ್ 2021 ರ ಯೋನೊ ಸೂಪರ್ ಸೇವಿಂಗ್ ಡೇಸ್‌ನಲ್ಲಿ, ಗ್ರಾಹಕರು ಹೋಟೆಲ್ ಬುಕಿಂಗ್, ಫ್ಲೈಟ್ ಬುಕಿಂಗ್, ಹೆಲ್ತ್ ಕ್ಯಾಟಗರಿ, ಅಮೆಜಾನ್‌ನಲ್ಲಿ ಆಯ್ದ ವಿಭಾಗಗಳಲ್ಲಿ ಹೆಚ್ಚುವರಿ 10% ಅನಿಯಮಿತ ಕ್ಯಾಶ್‌ಬ್ಯಾಕ್ ಹಾಗೂ ಶೇ 50 ರಿಯಾಯಿತಿ ಪಡೆಯಬಹುದು ಎಂದು ಎಸ್ಬಿಐ ತಿಳಿಸಿದೆ.

English summary

SBI launches third edition of 'YONO Super Saving Days'

State Bank of India (SBI), the country’s largest lender, has announced the launch of third edition of its unique shopping carnival - ‘YONO Super Saving Days’.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X