For Quick Alerts
ALLOW NOTIFICATIONS  
For Daily Alerts

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವ್ವಳ ಲಾಭ 5,583 ಕೋಟಿ

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಕ್ಟೋಬರ್- ಡಿಸೆಂಬರ್ ತ್ರೈ ಮಾಸಿಕದ ಫಲಿತಾಂಶವು ಶುಕ್ರವಾರ ಬಂದಿದ್ದು, ನಿವ್ವಳ ಲಾಭವು 5,583 ಕೋಟಿ ಬಂದಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 41.2 ಪರ್ಸೆಂಟ್ ಏರಿಕೆಯಾಗಿದೆ. ಬಡ್ಡಿ ಹಾಗೂ ಇತರ ಆದಾಯ ಹೆಚ್ಚಿಗೆ ಬಂದಿದೆ.

 

ಕಳೆದ ವರ್ಷಕ್ಕೆ ಹೋಲಿಸಿದರೆ ಬಡ್ಡಿಯ ಮೂಲಕ ಬರುವ ಆದಾಯ 8.6 ಪರ್ಸೆಂಟ್ ಏರಿಕೆಯಾಗಿ, 67,692 ಕೋಟಿ ತಲುಪಿದೆ. ಇತರ ಆದಾಯವು 13.3 ಪರ್ಸೆಂಟ್ ಏರಿಕೆಯಾಗಿ ಈ ತ್ರೈಮಾಸಿಕದಲ್ಲಿ 9,106 ಕೋಟಿ ಮುಟ್ಟಿದೆ. ಬಡ್ಡಿ ಮೂಲಕ ಬಂದ ಆದಾಯ ಮತ್ತು ನೀಡಿದ ಬಡ್ಡಿ ಮೊತ್ತವನ್ನು ಕಳೆದರೆ 27,778.79 ಕೋಟಿಯಾಗುತ್ತದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 22.4 ಪರ್ಸೆಂಟ್ ಹೆಚ್ಚಳವಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವ್ವಳ ಲಾಭ 5,583 ಕೋಟಿ

ಬ್ಯಾಂಕ್ ನ ಆಸ್ತಿಯ ಗುಣಮಟ್ಟ FY20 ಮೂರನೇ ತ್ರೈಮಾಸಿಕಕ್ಕೆ ಉತ್ತಮಗೊಂಡಿದೆ. ಒಟ್ಟು ಅನುತ್ಪಾದಕ ಆಸ್ತಿ ಪ್ರಮಾಣವು ನೀಡಿದ ಸಾಲಕ್ಕೆ ಹೋಲಿಸಿದರೆ 6.94 ಪರ್ಸೆಂಟ್ ಆಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ 177 ಬೇಸಿಸ್ ಪಾಯಿಂಟ್ಸ್ ಕಡಿಮೆ ಆಗಿದೆ. ಮತ್ತು 25 ಬಿಪಿಎಸ್ ಇಳಿಕೆ ಆಗಿದೆ. ಬ್ಯಾಂಕ್ ನ ಒಟ್ಟಾರೆ ಅನುತ್ಪಾದಕ ಆಸ್ತಿಯು ಕಳೆದ ವರ್ಷಕ್ಕೆ ಹೋಲಿಸಿದರೆ 15 ಪರ್ಸೆಂಟ್ ಕಡಿಮೆಯಾಗಿ 1.59 ಲಕ್ಷ ತಲುಪಿದೆ.

English summary

SBI Reports 5,583 Crore Net Profit; 41 Percent Up YoY

SBI reports 5,583 crore net profit, up 41 percent YoY. Here is the complete details.
Story first published: Friday, January 31, 2020, 18:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X