For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್‌ಗೆ ಸಂಕಟ, ಷೇರುದಾರರ ಹಕ್ಕುಗಳ ರಕ್ಷಣಾ ಸಂಸ್ಥೆಯಿಂದ ದೂರು

|

ಲಾಸ್ ಏಂಜಲ್ಸ್ ಮೂಲದ ಷೇರುದಾರರ ಹಕ್ಕುಗಳ ರಕ್ಷಣಾ ಸಂಸ್ಥೆ ಶಾಲ್ ಲಾ ಫರ್ಮ್ (Schall Law Firm) ಇನ್ಫೋಸಿಸ್ ಕಂಪನಿ ವಿರುದ್ಧ ಕ್ಲಾಸ್ ಆ್ಯಕ್ಷನ್ ಮೊಕದ್ದಮೆ ಹೂಡಿದೆ. ಇನ್ಫೋಸಿಸ್ ಹೂಡಿಕೆದಾರರಿಗೆ ಸುಳ್ಳು ಮತ್ತು ದಾರಿತಪ್ಪಿಸುವ ಹೇಳಿಕೆಗಳನ್ನು ನೀಡಿದೆ ಎಂದು ಆರೋಪಿಸಿದೆ.

ಜುಲೈ 7, 2018ರಿಂದ ಅಕ್ಟೋಬರ್ 20,2019 ನಡುವೆ ಇನ್ಫೊಸಿಸ್ ಸೆಕ್ಯೂರಿಟಿಗಳನ್ನು ಖರೀದಿಸಿದ ಹೂಡಿಕೆದಾರರು ಡಿಸೆಂಬರ್ 23ರ ಒಳಗೆ ತನ್ನನ್ನು ಸಂಪರ್ಕಿಸಬಹುದು ಎಂದು ಶಾಲ್ ಲಾ ಫರ್ಮ್ ಅಮೆರಿಕಾದ ಸೆಕ್ಯೂರಿಟಿಸ್ ಮತ್ತು ಎಕ್ಸೇಂಜ್ ಕಮಿಷನ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ. ಇನ್ಫೋಸಿಸ್ ಮಾರುಕಟ್ಟೆಗೆ ಸುಳ್ಳು ಮತ್ತು ದಾರಿ ತಪ್ಪಿಸುವ ಹೇಳಿಕೆಯನ್ನು ನೀಡಿದೆ ಎಂದು ಆರೋಪಿಸಿದೆ.

ಇನ್ಫೋಸಿಸ್‌ಗೆ ಸಂಕಟ, ಷೇರುದಾರರ ಹಕ್ಕುಗಳ ರಕ್ಷಣಾ ಸಂಸ್ಥೆಯಿಂದ ದೂರು

 

ಅಲ್ಪಾವಧಿಯ ಲಾಭವನ್ನು ಹೆಚ್ಚಿಸಲು ಕಂಪನಿಯು ಇನ್ಫೊಸಿಸ್ ಸುಳ್ಳು ಜಾಹೀರಾತು ನೀಡಿದೆ. ಕಂಪನಿಯ ಸಿಇಓ ಸಲೀಲ್ ಪರೇಖ್ ಅವರು ಲೆಕ್ಕ ಪತ್ರಗಳ ಸಮೀಕ್ಷೆಯಲ್ಲಿ ಸತ್ಯವನ್ನು ಮರೆಮಾಚಿದ್ದಾರೆ ಎಂದು ತಿಳಿಸಿದೆ. ಮ್ಯಾನೇಜ್‌ಮೆಂಟ್ ಒತ್ತಡದಿಂದ ಲೆಕ್ಕ ಪತ್ರಗಳ ವಿವರವನ್ನು ಹಣಕಾಸು ವಿಭಾಗಕ್ಕೆ ಒದಗಿಸದೆ ಮರೆಮಾಚಿದೆ ಎಂದು ತನ್ನ ದೂರಿನಲ್ಲಿ ವಿವರಿಸಲಾಗಿದೆ. ಈ ಸಂಬಂಧಿತ ದೂರುಗಳಿಂದಲೇ ಹೂಡಿಕೆದಾರರು ನಷ್ಟ ಅನುಭವಿಸಿದ್ದಾರೆ ಎಂದು ಹೇಳಿದೆ.

1934ರ ಸೆಕ್ಯುರಿಟೀಸ್ ಎಕ್ಸೇಂಜ್ ಆ್ಯಕ್ಷನ್ ಸೆಕ್ಷನ್ 10(ಬಿ), 20(ಎ) ಮತ್ತು ಎಇಸಿ ಪ್ರಕಟಿಸಿದ ನಿಯಮ 10(ಬಿ)-5 ಅನ್ನು ಇನ್ಫೋಸಿಸ್ ಉಲ್ಲಂಘಿಸಿದೆ ಎಂದು ಶಾಲ್ ಲಾ ಫರ್ಮ್ ಆರೋಪಿಸಿದೆ. ಶಾಲ್ ಲಾ ಫರ್ಮ್ ವಿಶ್ವದಾದ್ಯಂತ ಷೇರುದಾರರು ಮತ್ತು ಅವರ ಹಕ್ಕುಗಳಿಗಾಗಿ ಹೋರಾಡುತ್ತಿದೆ.

English summary

Schall Law Firm Filed Class Action Lawsuit Against Infosys

Los Angels based shareholder rights litigation firm Schall law firm filed class action lawsuit against infosys
Story first published: Friday, December 13, 2019, 10:06 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more