For Quick Alerts
ALLOW NOTIFICATIONS  
For Daily Alerts

ದಾಖಲೆಯ ಆರಂಭ ಪಡೆದ ಸೆನ್ಸೆಕ್ಸ್, ನಿಫ್ಟಿ: ವಿಪ್ರೋ ಹೊಸ ಗರಿಷ್ಠ ಮಟ್ಟ

|

ಭಾರತದ ಷೇರುಪೇಟೆ ವಾರದ ಕೊನೆಯ ವಹಿವಾಟು ದಿನ ಶುಕ್ರವಾರ ಸಕಾರಾತ್ಮಕ ಆರಂಭ ಪಡೆದಿದ್ದು, ಹೊಸ ದಾಖಲೆಯ ಮಟ್ಟದಲ್ಲಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 111 ಪಾಯಿಂಟ್ಸ್‌ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 36 ಪಾಯಿಂಟ್ಸ್ ಹೆಚ್ಚಾಗಿದೆ.

 

ಪೆಟ್ರೋಲ್, ಡೀಸೆಲ್ ದರ ಬದಲಾವಣೆ ಇಲ್ಲ: ಜುಲೈ 16ರಂದು ಎಷ್ಟಿದೆ?

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.21ರಷ್ಟು ಅಥವಾ 111.99 ಪಾಯಿಂಟ್ಸ್‌ ಏರಿಕೆಗೊಂಡು 53,270.84 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.23ರಷ್ಟು ಅಥವಾ 36.20 ಪಾಯಿಂಟ್ಸ್‌ ಹೆಚ್ಚಾಗಿ 15960.40 ಪಾಯಿಂಟ್ಸ್‌ ಮುಟ್ಟಿದೆ.

ದಾಖಲೆಯ ಆರಂಭ ಪಡೆದ ಸೆನ್ಸೆಕ್ಸ್, ನಿಫ್ಟಿ: ವಿಪ್ರೋ ಹೊಸ ಗರಿಷ್ಠ ಮಟ್ಟ

ಪ್ರಮುಖ ಐಟಿ ಸೇವಾ ಸಂಸ್ಥೆ ವಿಪ್ರೋ ಕಂಪನಿಯು ಜೂನ್ ತ್ರೈಮಾಸಿಕದ ಫಲಿತಾಂಶ ಘೋಷಿಸಿದ ನಂತರ ವಿಪ್ರೋ ಷೇರು ಬೆಲೆ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನ ತಲುಪಿದೆ. ವಿಪ್ರೋ ಜುಲೈ 15ರಂದು 2021-22ರ ಮೊದಲ ತ್ರೈಮಾಸಿಕದ ಒಟ್ಟು ನಿವ್ವಳ ಲಾಭ 3,246.6 ಕೋಟಿ ರೂಪಾಯಿ ಎಂದು ಘೋಷಿಸಿದೆ. ಕಂಪನಿಯು ಮೊದಲ ತ್ರೈಮಾಸಿಕದಲ್ಲಿ 2,390.4 ಕೋಟಿ ರೂ. ಮತ್ತು ಕ್ಯೂ 4 ರಲ್ಲಿ 2,972.3 ಕೋಟಿ ರೂ. ನಿವ್ವಳ ಲಾಭ ಕಂಡಿದೆ.

ಏರಿಕೆಗೊಂಡ ಷೇರುಗಳು:
ದೇವಿ ಲ್ಯಾಬ್ಸ್‌ನ ಷೇರುಗಳು 80 ರೂ.ಗಳ ಲಾಭದೊಂದಿಗೆ 4,687.30 ರೂ.ಗಳ ಆರಂಭ ಪಡೆದರೆ, ಯುಪಿಎಲ್ ಷೇರುಗಳು 13 ರೂ. ಏರಿಕೆಗೊಂಡು 849.45 ರೂ.ಗಳ ಲಾಭದೊಂದಿಗೆ ಆರಂಭಗೊಂಡಿದೆ. ವಿಪ್ರೋ ಷೇರು 58 ರೂ.ಗಳ ಏರಿಕೆಯೊಂದಿಗೆ 585.05 ರೂ., 2 ರೂ.ಗಳ ಲಾಭದೊಂದಿಗೆ ಐಟಿಸಿಯ ಷೇರು 208.10 ರೂ. ತೆರೆಯಿತು.

English summary

Sensex And Nifty Opens Fresh Record High:Wipro Share Hitting New Record

Sensex is up 111.99 points or 0.21% at 53270.84, and the Nifty added 36.20 points or 0.23% at 15960.40.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X