For Quick Alerts
ALLOW NOTIFICATIONS  
For Daily Alerts

ಷೇರು ಮಾರ್ಕೆಟ್ ನಲ್ಲಿ ಏರಿಕೆ; ಮಹೀಂದ್ರಾ ಅಂಡ್ ಮಹೀಂದ್ರಾ ಟಾಪ್ ಗೇಯ್ನರ್

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಬುಧವಾರ (ಮೇ 20, 2020) ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಗಿಸಿದವು. ಜಾಗತಿಕ ಮಾರ್ಕೆಟ್ ಕೂಡ ಪ್ರಬಲವಾಗಿದ್ದು, ಏಷ್ಯನ್ ಷೇರು ಮಾರ್ಕೆಟ್ ಗಳು ಸಹ ಲಾಭ ದಾಖಲಿಸಿವೆ. ಡೌ ಫ್ಯೂಚರ್ಸ್ ಹತ್ತಿರಹತ್ತಿರ 1 ಪರ್ಸೆಂಟ್ ಏರಿಕೆ ದಾಖಲಿಸಿತ್ತು. ಅದು ಕೂಡ ಭಾರತದ ಷೇರು ಮಾರುಕಟ್ಟೆ ಏರಿಕೆಗೆ ಬೆಂಬಲ ನೀಡಿತು.

ಸೆನ್ಸೆಕ್ಸ್ ಸೂಚ್ಯಂಕವು 622 ಪಾಯಿಂಟ್ ಏರಿಕೆ ಕಂಡು, 30,818ರಲ್ಲಿ ದಿನದ ವ್ಯವಹಾರ ಮುಗಿಸಿದರೆ, ನಿಫ್ಟಿ ಸೂಚ್ಯಂಕ 187 ಪಾಯಿಂಟ್ ಏರಿಕೆ ಕಂಡು, 9066 ಪಾಯಿಂಟ್ ನೊಂದಿಗೆ ವಹಿವಾಟು ಚುಕ್ತಾ ಮಾಡಿತು. ನಿಫ್ಟಿಯಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ ಟಾಪ್ ಗೇಯ್ನರ್ ಆಯಿತು. ಅದರ ಜತೆಗೆ ಎಚ್ ಡಿಎಫ್ ಸಿ, ಡಾ. ರೆಡ್ಡೀಸ್ ಮತ್ತು ಶ್ರೀ ಸಿಮೆಂಟ್ಸ್ ಕೂಡ ಏರಿಕೆ ದಾಖಲಿಸಿತು.

 

ಈಗ ಷೇರು ಖರೀದಿಸಬಹುದಾ? ಯಾವ ಕಂಪೆನಿ ಷೇರು ಖರೀದಿಸಬಹುದು?

ಇನ್ನು ಭಾರ್ತಿ ಇನ್ ಫ್ರಾಟೆಲ್, ಇಂಡಸ್ ಇಂಡ್ ಬ್ಯಾಂಕ್, ಹೀರೋ ಮೋಟೋಕಾರ್ಪ್ ಮತ್ತು ವೇದಾಂತ ಷೇರುಗಳು ನಷ್ಟ ಕಂಡವು. ಕಂಪೆನಿಯ ಫಲಿತಾಂಶ ಉತ್ತಮವಾಗಿದ್ದ ಕಾರಣ ಎಲ್ ಅಂಡ್ ಟಿ ಇನ್ಫೋಟೆಕ್ ಉತ್ತಮ ಏರಿಕೆ ದಾಖಲಿಸಿತು. ಹತ್ತಿರಹತ್ತಿರ 7 ಪರ್ಸೆಂಟ್ ಏರಿತು. ಇಂದಿನಿಂದ ರಿಲಯನ್ಸ್ ಇಂಡಸ್ಟ್ರೀಸ್ ಹಕ್ಕಿನ ಷೇರುಗಳ (ರೈಟ್ಸ್ ಇಶ್ಯೂ) ವಿತರಣೆ ಶುರುವಾಗಿದ್ದು, ದಿನಾಂತ್ಯಕ್ಕೆ 2 ಪರ್ಸೆಂಟ್ ಏರಿಕೆ ದಾಖಲಿಸಿತು.

ಷೇರು ಮಾರ್ಕೆಟ್ ಏರಿಕೆ; ಮಹೀಂದ್ರಾ ಅಂಡ್ ಮಹೀಂದ್ರಾ ಟಾಪ್ ಗೇಯ್ನರ್

ನಾಲ್ಕನೇ ತ್ರೈ ಮಾಸಿಕದಲ್ಲಿ ಉತ್ತಮ ಆರ್ಥಿಕ ಫಲಿತಾಂಶ ಕಂಡಿರುವ ಟಾಟಾ ಪವರ್ ಕಂಪೆನಿ ಷೇರು 3.5 ಪರ್ಸೆಂಟ್ ಏರಿತು. ಇನ್ನು ನಿವ್ವಳ ಲಾಭದಲ್ಲಿ (ನೆಟ್ ಪ್ರಾಫಿಟ್) 19 ಪರ್ಸೆಂಟ್ ಇಳಿಕೆಯಾಗಿದ್ದರೂ ಬಜಾಜ್ ಫೈನಾನ್ಸ್ ಷೇರುಗಳು ಏರಿಕೆಯೊಂದಿಗೆ ವಹಿವಾಟು ಮುಗಿಸಿತು.

English summary

Sensex And Nifty Record Gains On Wednesday May 20

Indian stock market index Sensex and Nifty record gains on Wednesday, May 20, 2020. Here is the details.
Company Search
COVID-19