50 ಸಾವಿರ ಪಾಯಿಂಟ್ ಗಡಿ ದಾಟಿದ ಸೆನ್ಸೆಕ್ಸ್; ನಿಫ್ಟಿ 14700 ಪಾಯಿಂಟ್ ಆಚೆಗೆ
ಇದೇ ಮೊದಲ ಬಾರಿಗೆ ಗುರುವಾರದಂದು (ಜನವರಿ 21, 2021) ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ 50 ಸಾವಿರ ಪಾಯಿಂಟ್ ಗಳ ಗಡಿ ದಾಟಿ ವಹಿವಾಟು ನಡೆಸಿದೆ. ಜೋ ಬೈಡನ್ ಅಧಿಕಾರ ಸ್ವೀಕಾರ ಕಾರ್ಯಕ್ರಮ ಮುಗಿದ ನಂತರ ಯು.ಎಸ್. ಮಾರುಕಟ್ಟೆ ರಾತ್ರೋರಾತ್ರಿ ಗಳಿಕೆ ಕಂಡಿದ್ದು, ಏಷ್ಯನ್ ಮಾರುಕಟ್ಟೆ ಸೂಚ್ಯಂಕಗಳು ಮೇಲೇರಿವೆ.
ಷೇರು ಮಾರ್ಕೆಟ್ ಹೂಡಿಕೆಗೆ ಸೂಕ್ತವಲ್ಲದ "ಮನಸ್ಥಿತಿಯವರು" ಇವರು
ಈ ವರದಿ ಆಗುವ ಹೊತ್ತಿಗೆ ಸೆನ್ಸೆಕ್ಸ್ 281.12 ಪಾಯಿಂಟ್ ಗಳ ಏರಿಕೆ ಕಂಡು, 50,073.26 ಪಾಯಿಂಟ್ ಗಳಲ್ಲಿ ವಹಿವಾಟು ಆಗುತ್ತಿತ್ತು. ಇನ್ನು ನಿಫ್ಟಿ 82.40 ಪಾಯಿಂಟ್ ಗಳು ಮೇಲೇರಿ, 14,727.10 ಪಾಯಿಂಟ್ ಗಳಲ್ಲಿ ವ್ಯವಹಾರ ನಡೆಸುತ್ತಿತ್ತು. ಷೇರುಪೇಟೆಯಿಂದ ಲಾಭ ತೆಗೆದುಕೊಳ್ಳುವುದಕ್ಕೆ ಇದು ಸರಿಯಾದ ಸಮಯವೇ ಎಂಬ ಪ್ರಶ್ನೆ ಉದ್ಭವಿಸಿದೆ.
ನಿಫ್ಟಿಯಲ್ಲಿ ಏರಿಕೆ ಕಂಡಿದ್ದ ಷೇರುಗಳು
ಟಾಟಾ ಮೋಟಾರ್ಸ್
ಬಜಾಜ್ ಫಿನ್ ಸರ್ವ್
ಬಜಾಜ್ ಫೈನಾನ್ಸ್
ಯುಪಿಎಲ್
ಎಚ್ ಸಿಎಲ್ ಟೆಕ್
ನಿಫ್ಟಿಯಲ್ಲಿ ಇಳಿಕೆ ಕಂಡಿದ್ದ ಷೇರುಗಳು
ಟಿಸಿಎಸ್
ಜೆಎಸ್ ಡಬ್ಲ್ಯು ಸ್ಟೀಲ್
ಅದಾನಿ ಪೋರ್ಟ್ಸ್
ಎಚ್ ಡಿಎಫ್ ಸಿ
ಕೋಲ್ ಇಂಡಿಯಾ