For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 147 ಪಾಯಿಂಟ್ಸ್ ಇಳಿಕೆ: ನಿಫ್ಟಿ 46 ಪಾಯಿಂಟ್ಸ್‌ ಕುಸಿತ

|

ಜಾಗತಿಕ ನಕಾರಾತ್ಮಕ ಸೂಚನೆಗಳ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ಕುಸಿತಗೊಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 147 ಪಾಯಿಂಟ್ಸ್‌ ಇಳಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 46 ಪಾಯಿಂಟ್ಸ್‌ ಕುಸಿತಗೊಂಡಿದೆ.

 

ಜೂನ್ 17ರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ

ಬೆಳಿಗ್ಗೆ 10.03ರ ಸುಮಾರಿಗೆ ಬಿಎಸ್ಇ ಸೆನ್ಸೆಕ್ಸ್‌ 147.26 ಪಾಯಿಂಟ್ಸ್‌ ಅಥವಾ ಶೇಕಡಾ 0.28ರಷ್ಟು ಇಳಿಕೆಗೊಂಡು 52354.72 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 46.50 ಪಾಯಿಂಟ್ಸ್‌ ಅಥವಾ ಶೇಕಡಾ 0.29ರಷ್ಟು ಇಳಿಕೆಗೊಂಡು 15721 ಪಾಯಿಂಟ್ಸ್‌ ತಲುಪಿದೆ.

ಸೆನ್ಸೆಕ್ಸ್ 147 ಪಾಯಿಂಟ್ಸ್ ಇಳಿಕೆ: ನಿಫ್ಟಿ 46 ಪಾಯಿಂಟ್ಸ್‌ ಕುಸಿತ

ದಿನದ ವಹಿವಾಟು ಆರಂಭಗೊಂಡಾಗ 1537 ಷೇರುಗಳು ಏರಿಕೆಗೊಂಡರೆ, 1078 ಷೇರುಗಳು ಕುಸಿದಿವೆ ಮತ್ತು 99 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಏಷ್ಯನ್ ಪೇಂಟ್ಸ್, ನೆಸ್ಲೆ, ಟಾಟಾ ಮೋಟಾರ್ಸ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಅದಾನಿ ಪೋರ್ಟ್ಸ್, ಟಾಟಾ ಸ್ಟೀಲ್, ಹೀರೋ ಮೊಟೊಕಾರ್ಪ್, ಹಿಂಡಾಲ್ಕೊ ಮತ್ತು ಎಚ್‌ಡಿಎಫ್‌ಸಿ ನಷ್ಟ ಅನುಭವಿಸಿವೆ.

ಇನ್ನು ಜೂನ್ 17 ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಕುಸಿದಿದೆ. 35 ಪೈಸೆ ಇಳಿಕೆಗೊಂಡು 73.67 ರೂಪಾಯಿ ತಲುಪಿದೆ.

English summary

Sensex Down 147 Points: Nifty Above 15700

Sensex was down 147.26 points or 0.28% at 52354.72, and the Nifty was down 46.50 points or 0.29% at 15721.00.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X