For Quick Alerts
ALLOW NOTIFICATIONS  
For Daily Alerts

Closing Bell: ಸೆನ್ಸೆಕ್ಸ್ 282 ಪಾಯಿಂಟ್ಸ್‌ ಕುಸಿತ, ನಿಫ್ಟಿ ಕೂಡ ಇಳಿಕೆ

|

ಭಾರತೀಯ ಷೇರುಪೇಟೆಯು ಬುಧವಾರ ಸಾಕಷ್ಟು ಏರಿಳಿತಗಳ ನಡುವೆ ಕುಸಿತಗೊಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ದಿನದ ವಹಿವಾಟು ಅಂತ್ಯಕ್ಕೆ 282 ಪಾಯಿಂಟ್ಸ್‌ ಕುಸಿದಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 85 ಪಾಯಿಂಟ್ಸ್‌ ಇಳಿಕೆಗೊಂಡಿದೆ.

 

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 282.63 ಪಾಯಿಂಟ್ಸ್‌ ಅಥವಾ ಶೇಕಡಾ 0.54ರಷ್ಟು ಇಳಿಕೆಗೊಂಡು 52306.08 ಪಾಯಿಂಟ್ಸ್‌ ಮುಟ್ಟಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 85.80 ಪಾಯಿಂಟ್ಸ್‌ ಅಥವಾ ಶೇಕಡಾ 0.54ರಷ್ಟು ಕುಸಿದು 15687 ಪಾಯಿಂಟ್ಸ್ ತಲುಪಿದೆ.

ಸೆನ್ಸೆಕ್ಸ್ 282 ಪಾಯಿಂಟ್ಸ್‌ ಕುಸಿತ, ನಿಫ್ಟಿ ಕೂಡ ಇಳಿಕೆ

ದಿನದ ವಹಿವಾಟು ಅಂತ್ಯಕ್ಕೆ 1335 ಷೇರುಗಳು ಏರಿಕೆಗೊಂಡರೆ, 1629 ಷೇರುಗಳು ಕುಸಿದವು ಮತ್ತು 116 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಅದಾನಿ ಪೋರ್ಟ್ಸ್, ವಿಪ್ರೊ, ಜೆಎಸ್‌ಡಬ್ಲ್ಯೂ ಸ್ಟೀಲ್, ಡಿವಿಸ್ ಲ್ಯಾಬ್ಸ್ ಮತ್ತು ಎಲ್ ಅಂಡ್ ಟಿ ಪ್ರಮುಖವಾಗಿ ನಷ್ಟ ಅನುಭವಿಸಿದ ಷೇರುಗಳಾಗಿದ್ದು, ಮಾರುತಿ ಸುಜುಕಿ, ಟೈಟಾನ್ ಕಂಪನಿ, ಬಜಾಜ್ ಫಿನ್‌ಸರ್ವ್, ಒಎನ್‌ಜಿಸಿ ಮತ್ತು ಎಂ ಆಂಡ್ ಎಂ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿವೆ.

ಆಟೊಮೊಬೈಲ್ ಹೊರತುಪಡಿಸಿ, ಇತರ ವಲಯ ಸೂಚ್ಯಂಕಗಳು ಇಳಿಕೆಗೊಂಡಿದ್ದು, ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಕೆಂಪು ಬಣ್ಣದಲ್ಲಿ ಕೊನೆಗೊಂಡಿತು.

ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಚಂಚಲ ವಹಿವಾಟಿನ ಮಧ್ಯೆ ಭಾರತೀಯ ರೂಪಾಯಿ ಮೌಲ್ಯ ಪ್ರತಿ ಡಾಲರ್‌ಗೆ 74.28 ರೂಪಾಯಿಗೆ ತಲುಪಿದೆ.

English summary

Sensex Down 282 Points: Nifty Ends Below 15700

Sensex was down 282.63 points or 0.54% at 52306.08, and the Nifty was down 85.80 points or 0.54% at 15687.
Story first published: Wednesday, June 23, 2021, 16:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X