For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್‌ , ನಿಫ್ಟಿ ಕುಸಿತ: ಒಂದೇ ದಿನದಲ್ಲಿ 2 ಲಕ್ಷ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರು

|

ಕಳೆದ ಹಲವು ವಹಿವಾಟುಗಳಲ್ಲಿ ಏರುಮುಖದತ್ತಲೇ ಸಾಗಿದ್ದ ಭಾರತೀಯ ಷೇರುಪೇಟೆಯು ಬುಧವಾರ ನಲುಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 44,000 ಗಡಿ ದಾಟಿದ ಬಳಿಕ ಇಂದು 600ಕ್ಕೂ ಹೆಚ್ಚು ಪಾಯಿಂಟ್ಸ್‌ ಕುಸಿತ ಕಂಡಿದೆ. ಇನ್ನು ಇತ್ತೀಚೆಗಷ್ಟೇ ಮೊದಲ ಬಾರಿಗೆ 13,000 ಗಡಿ ದಾಟಿದ್ದ ರಾಷ್ಟ್ರೀಯ ಷೇರುಪೇಟೆ ನಿಫ್ಟಿ 196.75 ಪಾಯಿಂಟ್ಸ್‌ ಇಳಿಕೆಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇ. 1.56ರಷ್ಟು ಅಥವಾ 695 ಪಾಯಿಂಟ್ಸ್‌ ಇಳಿಕೆಗೊಂಡು 43,828.10ಕ್ಕೆ ವಹಿವಾಟು ಅಂತ್ಯಗೊಳಿಸಿದೆ. ಇನ್ನು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಕೂಡ ಶೇ. 1.51ರಷ್ಟು ಅಥವಾ 196.75 ಪಾಯಿಂಟ್ಸ್‌ ಕುಸಿದು 12,858.40 ಪಾಯಿಂಟ್ಸ್‌ಗಳೊಂದಿಗೆ ವಹಿವಾಟು ಅಂತ್ಯಗೊಳಿಸಿದೆ.

ಭಾರತೀಯ ಮಾರುಕಟ್ಟೆಯಲ್ಲಿ 55,000 ಕೋಟಿ ರೂ. ದಾಖಲೆಯ ವಿದೇಶಿ ಹೂಡಿಕೆ

 

ಮಾರ್ಚ್‌ನಿಂದ ಈಚೆಗೆ ಶೇಕಡಾ 73ರಷ್ಟು ಬೆಳವಣಿಗೆಯಾಗಿರುವ ಭಾರತೀಯ ಷೇರುಪೇಟೆಯು ಹಲವು ವಹಿವಾಟುಗಳಲ್ಲಿ ವೇಗವಾಗಿ ಮುನ್ನುಗ್ಗಿತ್ತು. ಲಸಿಕೆ ಆಶಾವಾದ ಮತ್ತು ಎಫ್‌ಐಐ ಒಳಹರಿವಿನ ಬೆಳವಣಿಗೆಗಳ ನೇತೃತ್ವದಲ್ಲಿದ್ದ ಮಾರುಕಟ್ಟೆಯು ರ್ಯಾಲಿ ಮುಂದುವರಿದಿತ್ತು. ಆದರೆ ವಹಿವಾಟಿನ ದ್ವಿತೀಯಾರ್ಧದಲ್ಲಿ ಲಾಭ-ಬುಕಿಂಗ್ ಕಾರಣ ಮಾರುಕಟ್ಟೆ ಕುಸಿತಕ್ಕೆ ಸಾಕ್ಷಿಯಾಗಿದೆ. ಅಲ್ಪಾವಧಿಯಲ್ಲಿ, ನಮ್ಮ ದೇಶೀಯ ಮಾರುಕಟ್ಟೆಯಲ್ಲಿ ಲಾಭ-ಬುಕಿಂಗ್ ಮುಂದುವರಿಯುತ್ತದೆ ಎಂದು ನಿರೀಕ್ಷಿಸಲಾಗಿದೆ.

ಒಂದೇ ದಿನದಲ್ಲಿ 2 ಲಕ್ಷ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರು

ಮಾರ್ಚ್‌ನಲ್ಲಿ ಕೋವಿಡ್-19 ಸಾಂಕ್ರಾಮಿಕವು ಜಾಗತಿಕವಾಗಿ ಗುರುತಿಸಿಕೊಂಡಾಗ 7,500 ಪಾಯಿಂಟ್ಸ್‌ಗಳವರೆಗೆ ಭಾರೀ ಕುಸಿತ ಕಂಡಿತ್ತು. ಆದರೆ ನವೆಂಬರ್ 25ರಂದು ಬಲವಾದ ಲಾಭದ ಬುಕ್ಕಿಂಗ್ ಕಾರಣ ಬಿಎಸ್ಇ-ಪಟ್ಟಿಮಾಡಿದ ಸಂಸ್ಥೆಗಳ ಮಾರುಕಟ್ಟೆ ಬಂಡವಾಳೀಕರಣವನ್ನು (ಎಂ-ಕ್ಯಾಪ್) ಗಮನಾರ್ಹವಾಗಿ ಇಳಿಕೆಯಾಗಿದೆ. ಹೂಡಿಕೆದಾರರು ಒಂದೇ ದಿನ 2.2ಲಕ್ಷ ಕೋಟಿ ಕಳೆದುಕೊಂಡಿದ್ದಾರೆ.

ವಲಯ ಸೂಚ್ಯಂಕಗಳ ಪೈಕಿ ರಿಯಾಲ್ಟಿ, ಬ್ಯಾಂಕೆಕ್ಸ್‌, ಟೆಲಿಕಾಂ ತಲಾ ಶೇ.2ರಷ್ಟು ಕಳೆದುಕೊಂಡಿದ್ದು, ಬಿಎಸ್‌ಇ ಆಯಿಲ್ ಮತ್ತು ಟೆಲಿಕಾಂ ಶೇಕಡಾ 0.08ರಷ್ಟು ಏರಿಕೆ ಕಂಡಿದೆ. ಈ ಕುಸಿತದ ನಡುವೆ ಒಎನ್‌ಜಿಸಿ ಶೇಕಡಾ 5ರಷ್ಟು ಏರಿಕೆ ದಾಖಲಿಸಿದೆ.

English summary

Sensex Down 695 Points, Nifty Ends Below 12,900: Investors Lose over 2 Lakh Crore In A Day

Today due to profit-booking across sectors in the second half of the trading session effect Sensex Down 695 Points and nifty ends below 13k
Story first published: Wednesday, November 25, 2020, 16:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X