For Quick Alerts
ALLOW NOTIFICATIONS  
For Daily Alerts

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಭಾರೀ ಇಳಿಕೆ; ಸೆನ್ಸೆಕ್ಸ್, ನಿಫ್ಟಿ ತಲ್ಲಣ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸೋಮವಾರ (ಆಗಸ್ಟ್ 3, 2020) ಭಾರೀ ಇಳಿಕೆ ಕಂಡಿದೆ. ಬ್ಯಾಂಕಿಂಗ್ ಷೇರುಗಳು, ರಿಲಯನ್ಸ್ ನಷ್ಟದ ಮುಂಚೂಣಿಯಲ್ಲಿದ್ದವು. ಸೆನ್ಸೆಕ್ಸ್ 667.29 ಪಾಯಿಂಟ್ ಇಳಿಕೆ ಕಂಡು, 36,939.60 ಅಂಶದೊಂದಿಗೆ ದಿನದ ವಹಿವಾಟು ಮುಗಿಸಿದರೆ, ನಿಫ್ಟಿ ಸೂಚ್ಯಂಕವು 181.85 ಪಾಯಿಂಟ್ ಇಳಿದು, 10,891.60 ಅಂಶದೊಂದಿಗೆ ವ್ಯವಹಾರ ಚುಕ್ತಾಗೊಳಿಸಿತು.

1 ಗಂಟೆ ಷೇರು ವಹಿವಾಟಿನಲ್ಲಿ ಈ ಹೂಡಿಕೆದಾರರ ಸಂಪತ್ತಿಗೆ 180 ಕೋಟಿ ಸೇರ್ಪಡೆ

ಕಳೆದ ಮೂರು ವಾರಗಳಲ್ಲಿ ನಿಫ್ಟಿ ಸೂಚ್ಯಂಕ ಒಂದು ದಿನದಲ್ಲಿ ಕಂಡ ಭಾರೀ ಇಳಿಕೆ ಇದು. ಸತತ ನಾಲ್ಕನೇ ಸೆಷನ್ ಕುಸಿತ ಕಂಡಿದೆ. ಗುರುವಾರದಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ದರ ನಿಗದಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಆ ಹಿನ್ನೆಲೆಯಲ್ಲಿ ಹೂಡಿಕೆದಾರರು ಬಹಳ ಎಚ್ಚರಿಕೆಯಿಂದ ವಹಿವಾಟು ನಡೆಸುತ್ತಿದ್ದಾರೆ.

 

ನಿಫ್ಟಿ ಸೂಚ್ಯಂಕದಲ್ಲಿ ಭಾರೀ ಇಳಿಕೆ ಕಂಡ ಪ್ರಮುಖ ಷೇರುಗಳು

ಯುಪಿಎಲ್

ಕೊಟಕ್ ಮಹೀಂದ್ರಾ

ಇಂಡಸ್ ಇಂಡ್ ಬ್ಯಾಂಕ್

ಎಚ್ ಡಿಎಫ್ ಸಿ ಲೈಫ್

ಆಕ್ಸಿಸ್ ಬ್ಯಾಂಕ್

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಭಾರೀ ಇಳಿಕೆ

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು

ಟಾಟಾ ಮೋಟಾರ್ಸ್

ಟೈಟಾನ್ ಕಂಪೆನಿ

ಟಾಟಾ ಸ್ಟೀಲ್

ಬಿಪಿಸಿಎಲ್

ಐಷರ್ ಮೋಟಾರ್ಸ್

English summary

Sensex Down By More Than 650 Points On August 3

Indian stock market index down by more than 650 points and nifty more than 100 points on August 3, 2020.
Company Search
COVID-19