For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 514 ಪಾಯಿಂಟ್ಸ್ ಜಿಗಿತ: ನಿಫ್ಟಿ 165 ಪಾಯಿಂಟ್ಸ್ ಏರಿಕೆ

|

ಭಾರತದ ಷೇರುಪೇಟೆ ಸೋಮವಾರ ಭಾರೀ ಕುಸಿತದ ಬಳಿಕ ಮಂಗಳವಾರ ಜಿಗಿತ ಸಾಧಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 514 ಪಾಯಿಂಟ್ಸ್ ಏರಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 165 ಪಾಯಿಂಟ್ಸ್ ಹೆಚ್ಚಾಗಿದೆ.

 

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 514.34 ಪಾಯಿಂಟ್ಸ್ ಅಥವಾ ಶೇಕಡಾ 0.88ರಷ್ಟು ಹೆಚ್ಚಾಗಿ 59,005.27 ಪಾಯಿಂಟ್ಸ್ ತಲುಪಿದೆ. ಎನ್‌ಎಸ್ಇ ಸೂಚ್ಯಂಕ 165.10 ಪಾಯಿಂಟ್ಸ್ ಅಥವಾ ಶೇಕಡಾ 0.90ರಷ್ಟು ಏರಿಕೆಗೊಂಡು 17,562 ಪಾಯಿಂಟ್ಸ್ ಮುಟ್ಟಿದೆ.

ದಿನದ ವಹಿವಾಟಿನ ಆರಂಭದಲ್ಲಿ 1551 ಷೇರುಗಳು ಏರಿಕೆಗೊಂಡರೆ, 1602 ಷೇರುಗಳು ಕುಸಿದವು ಮತ್ತು 165 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಏರಿಕೆಗೊಂಡ ಪ್ರಮುಖ ಷೇರುಗಳು:

ಏರಿಕೆಗೊಂಡ ಪ್ರಮುಖ ಷೇರುಗಳು:

ಜೆಎಸ್‌ಡಬ್ಲ್ಯೂ ಸ್ಟೀಲ್‌ನ ಷೇರುಗಳು ರೂ. 66 ರಷ್ಟು ಹೆಚ್ಚಳವಾಗಿ ರೂ. 668.95 ಕ್ಕೆ ಕೊನೆಗೊಂಡಿತು. ಒಎನ್ ಜಿಸಿ ಷೇರು 7 ರೂ. ಗಳಿಕೆಯೊಂದಿಗೆ 135.20 ರೂ.ನಲ್ಲಿ ಕೊನೆಗೊಂಡಿತು. ಬಜಾಜ್ ಫೈನಾನ್ಸ್ ನ ಷೇರುಗಳು ರೂ .71 ರಷ್ಟು ಏರಿಕೆಯಾಗಿ 7813.85 ರೂಪಾಯಿಗೆ ಮುಕ್ತಾಯಗೊಂಡವು. ಇಂಡಸ್ಇಂಡ್ ಬ್ಯಾಂಕ್ ಷೇರುಗಳು ರೂ. 48 ರಷ್ಟು ಏರಿಕೆಯಾಗಿ 1,137.55 ರೂ. ತಲುಪಿದೆ. ಬಜಾಜ್ ಫಿನ್‌ಸರ್ವ್‌ನ ಷೇರುಗಳು ರೂ. 568 ರಷ್ಟು ಏರಿಕೆಯಾಗಿ 17,587.25 ರೂಪಾಯಿಗೆ ಮುಕ್ತಾಯಗೊಂಡವು.

ಕುಸಿದಿದ್ದ ಚಿನ್ನದ ಬೆಲೆ ಏರಿಕೆ: ಸೆ. 21ರಷ್ಟು ಎಷ್ಟು ರೂ. ಹೆಚ್ಚಾಗಿದೆ?

ಇಳಿಕೆಗೊಂಡ ಪ್ರಮುಖ ಷೇರುಗಳು:
 

ಇಳಿಕೆಗೊಂಡ ಪ್ರಮುಖ ಷೇರುಗಳು:

ಮಾರುತಿ ಸುಜುಕಿಯ ಷೇರು 173 ರೂಪಾಯಿ ಇಳಿಕೆಯಾಗಿ 6,777.00 ಕ್ಕೆ ಕೊನೆಗೊಂಡಿತು. BPCL ನ ಷೇರು ರೂ .433.80 ಕ್ಕೆ ಕೊನೆಗೊಂಡಿತು, ಸುಮಾರು 7 ರೂ. ಕುಸಿದಿದೆ. ಹೀರೊ ಮೊಟೊಕಾರ್ಪ್ ಷೇರು ರೂ .2,850.45 ಕ್ಕೆ ಕೊನೆಗೊಂಡಿದ್ದು, ಸುಮಾರು ರೂ. 39 ರಷ್ಟು ಇಳಿಕೆಯಾಗಿದೆ. ಬಜಾಜ್ ಆಟೋ ಷೇರುಗಳು ರೂ .77 ರಷ್ಟು ಇಳಿಕೆಯಾಗಿ ರೂ. 3,728.80 ಕ್ಕೆ ಕೊನೆಗೊಂಡಿತು. ನೆಸ್ಲೆ ಷೇರುಗಳು ರೂ. 133 ರಷ್ಟು ಇಳಿಕೆಯಾಗಿ ರೂ. 20,189.55 ಕ್ಕೆ ಕೊನೆಗೊಂಡಿತು.

ವಿದ್ಯುತ್ ಮತ್ತು ಆಟೋ ಹೊರತುಪಡಿಸಿ, ಎಲ್ಲಾ ಇತರ ವಲಯದ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡವು. ರಿಯಾಲ್ಟಿಯೊಂದಿಗೆ, ಲೋಹದ ಸೂಚ್ಯಂಕಗಳು ಶೇಕಡಾ 2ರಿಂದ 3ರಷ್ಟು ಹೆಚ್ಚಾಗಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಸುಮಾರು ಶೇಕಡಾ 1ರಷ್ಟು ಏರಿಕೆಯಾಗಿದ್ದು, ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.2ರಷ್ಟು ಹೆಚ್ಚಾಗಿದೆ.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2021: ಅಕ್ಟೋಬರ್ 7ರಿಂದ ಪ್ರಾರಂಭ

ಷೇರು ಖರೀದಿಸುವುದು ಹೇಗೆ?

ಷೇರು ಖರೀದಿಸುವುದು ಹೇಗೆ?

ನಿಮಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಯಕೆ ಇದ್ದರೆ, ಮೊದಲು ಸ್ಟಾಕ್ ಬ್ರೋಕರ್‌ನೊಂದಿಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಬೇಕು. ಷೇರುಗಳನ್ನು ನೇರವಾಗಿ ಷೇರು ವಿನಿಮಯ ಕೇಂದ್ರದಿಂದ ಖರೀದಿಸಲು ಸಾಧ್ಯವಿಲ್ಲ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಲು ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆ ಅಗತ್ಯವಿದೆ. ನೀವು ಈ ದಾಖಲೆಗಳನ್ನು ಹೊಂದಿದ್ದರೆ, ನೀವು ಸುಲಭವಾಗಿ ಬ್ರೋಕರ್‌ನೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.

ಕಚ್ಚಾ ತೈಲ ಬೆಲೆ ಏರಿಕೆ

ಕಚ್ಚಾ ತೈಲ ಬೆಲೆ ಏರಿಕೆ

ಕಚ್ಚಾ ತೈಲ ಬೆಲೆಗಳು ಪ್ರತಿ ಬ್ಯಾರೆಲ್‌ಗೆ 75 ಡಾಲರ್‌ಗೆ ಏರಿಕೆಗೊಂಡಿದೆ. ಇತ್ತೀಚಿನ ಸಾಂಕ್ರಾಮಿಕ ಬಿಕ್ಕಟ್ಟಿನ ನಡುವೆ ತೈಲ ಕೊಂಚ ಇಳಿಕೆಯಾಗುವ ಲಕ್ಷಣ ತೋರಿತ್ತು. ಆದರೆ ಬೇಡಿಕೆಯ ಬೆಳವಣಿಗೆ ನಿಧಾನವಾಗುವುದರೊಂದಿಗೆ, ತೈಲ ಬೆಲೆಗಳು ಏರತೊಡಗಿವೆ.

ಚಿನ್ನದ ಬೆಲೆ

ಚಿನ್ನದ ಬೆಲೆ

ಭಾರತೀಯ ಮಾರುಕಟ್ಟೆಯಲ್ಲಿ ಸತತ ಇಳಿಕೆಗೆ ಸಾಕ್ಷಿಯಾಗಿದ್ದ ಹಳದಿ ಲೋಹದ ಬೆಲೆ ಮಂಗಳವಾರ (ಸೆ. 21) ಕುಸಿತಕ್ಕೆ ಸಾಕ್ಷಿಯಾಗಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,450 ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 49,580 ರೂಪಾಯಿಗೆ ತಗ್ಗಿದೆ. ಬೆಳ್ಳಿ ಬೆಲೆಯು ಕೆಜಿಗೆ 200 ರೂಪಾಯಿ ಇಳಿಕೆಗೊಂಡು 59,800 ರೂಪಾಯಿ ದಾಖಲಾಗಿದೆ. ಇನ್ನು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 200 ರೂ. ಏರಿಕೆಗೊಂಡು 43,500 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 230 ರೂ. ಏರಿಕೆಗೊಂಡು 47,460 ರೂಪಾಯಿ ತಲುಪಿದೆ.

English summary

Sensex Gains 514 Points: Nifty Ends Above 17,500

Sensex was up 514.34 points or 0.88% at 59,005.27, and the Nifty was up 165.10 points or 0.95% at 17,562.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X